पवित्र बाइबिल
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
1ನೇ ಅಧ್ಯಾಯ
1 : ಆದಾಮನ ಮಗ ಶೇತ್, ಶೇತನ ಮಗ ಎನೋಷ್, ಎನೋಷನ ಮಗ ಕೇನಾನ್,
2 : ಕೇನಾನನ ಮಗ ಮಹಲಲೀಲ್, ಮಹಲಲೀಲನ ಮಗ ಯೆರೆದ್,
3 : ಯೆರೆದನ ಮಗ ಹನೋಕ್, ಹನೋಕನ ಮಗ ಮೆತೂಷೆಲಹ, ಮೆತೂಷೆಲಹನ ಮಗ ಲೆಮೆಕ್,
4 : ಲೆಮೆಕನ ಮಗ ನೋಹ, ನೋಹನಿಗೆ ಶೇಮ್, ಹಾಮ್, ಯೆಫೆತ್ ಎಂಬ ಮೂರು ಜನ ಮಕ್ಕಳು ಇದ್ದರು.
5 : ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್ ಎಂಬವರು ಯೆಫೆತನ ಮಕ್ಕಳು. ಇವರ ಹೆಸರುಗಳಿರುವ ಜನಾಂಗಗಳಿಗೆ ಇವರೇ ಮೂಲಪುರುಷರು.
6 : ಅಷ್ಕೆನೆಜ್, ರೀಫತ್, ತೋಗರ್ಮ - ಇವರು ಗೋಮೆರನ ಮಕ್ಕಳು.
7 : ಎಲೀಷ, ಸ್ಪೇನ್, ಸೈಪ್ರಸ್, ದೋದಾನೀಮ್ ಎಂಬ ಸ್ಥಳಗಳವರು ಯಾವಾನನ ಮಕ್ಕಳು.
8 : ಕೂಷ್, ಈಜಿಪ್ಟ್ (ಮಿಚ್ರಯಿಮ್), ಲಿಬ್ಯ (ಪೂಟ್), ಕಾನಾನ್ಗಳಲ್ಲಿರುವವರು ಹಾಮನ ವಂಶಜರು. ಇವೇ ಈ ಜನಾಂಗಗಳ ಮೂಲಪಿತೃಗಳ ಹೆಸರುಗಳು.
9 : ಸೆಬ, ಹವೀಲ, ಸಬ್ತ, ರಮ್ಮಸಬ್ತೆಕಾಗಳ ಜನರು ಕೂಷನ ಸಂತತಿಯವರು. ಶೆಬ ಮತ್ತು ದೆದಾನಿನವರು ರಮ್ಮ ಸಂತಾನದವರು. (
10 : ಕೂಷನ ಮಗ ನಿಮ್ರೋದ; ಇವನು ಪರಾಕ್ರಮದಿಂದ ಮೊದಲನೆಯ ಭೂರಾಜನಾದನು.)
11 : ಈಜಿಪ್ಟಿನ ಜನಾಂಗದಿಂದ ಲೂದ್ಯರೂ, ಅನಾಮ್ಯರೂ ಲೆಹಾಬ್ಯರೂ ನಫ್ತುಹ್ಯರೂ
12 : ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಜನಿಸಿದರು. (ಫಿಲಿಷ್ಟಿಯರು ಕಸ್ಲುಹ್ಯರಿಂದ ಬಂದವರು.)
13 : ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಹೇತ್ ಎರಡನೆಯವನು. ಈ ಹೆಸರಿನ ಜನಾಂಗದವರಿಗೆ ಇವರೇ ಮೂಲಪುರುಷರು.
14 : ಯೆಬೂಸಿಯ, ಅಮೋರಿಯ, ಗಿರ್ಗಾಷಿಯ,
16 : ಅರ್ವಾದಿಯ, ಚೆಮಾರಿಯ ಮತ್ತು ಹಮಾತಿನ ಜನರ ಮೂಲಪಿತೃ ಕಾನಾನನು.
17 : ಶೇಮನ ಮಕ್ಕಳು - ಏಲಾಮ್, ಅಶ್ಶೂರ್, ಅರ್ಪಕ್ಷದ್, ಲೂದ್, ಅರಾಮ್, ಊಚ್, ಹೂಲ್, ಗೆತೆರ್, ಮೆಷೆಕ್ ಎಂಬವರು. ಈ ಹೆಸರಿನ ಜನಾಂಗಗಳಿಗೆ ಇವರೇ ಮೂಲಪುರುಷರು.
18 : ಅರ್ಪಕ್ಷದ್, ಶೆಲಹನ ತಂದೆ, ಶೆಲಹ, ಏಬೆರನ ತಂದೆ.
19 : ಏಬೆರನಿಗೆ ಇಬ್ಬರು ಮಕ್ಕಳು - ಪೆಲೆಗ್ ಎಂಬವನು ಒಬ್ಬ. ಅವನ ಕಾಲದಲ್ಲಿ ಲೋಕದಲ್ಲಿಯ ಜನರು ವಿಭಾಗವಾದದ್ದರಿಂದ ಈ ಹೆಸರು ಅವನಿಗೆ ಬಂದಿತು. ಯೊಕ್ತಾನ ಎಂಬವನು ಇನ್ನೊಬ್ಬ.
20 : ಅಲ್ಮೋದಾದ್, ಶೆಲೆಫ್, ಹಚರ್ಮಾವೆತ್, ಯೆರಹ,
23 : ಓಫೀರ್, ಹವೀಲಾ, ಯೋಬಾಬ್ ಎಂಬ ಸ್ಥಳಗಳವರು ಯೊಕ್ತಾನನ ಸಂತಾನದವರು.
24 : ಶೇಮನಿಂದ ಅಬ್ರಾಮನವರೆಗಿನ ಸಂತತಿಯವರು ಇವರು: ಅರ್ಪಕ್ಷದ್, ಶೆಲಹ,
27 : ಅಬ್ರಾಮ್ (ಇವನು ಅಬ್ರಹಾಮ ಎಂದೂ ಹೆಸರು ಹೊಂದಿದವನು).
28 : ಅಬ್ರಹಾಮನಿಗೆ ಇಬ್ಬರು ಮಕ್ಕಳು - ಇಸಾಕ್ ಮತ್ತು ಇಷ್ಮಾಯೇಲ್.
29 : ಇಷ್ಮಾಯೇಲನ ಮಕ್ಕಳು ಹನ್ನೆರಡು ಗೋತ್ರಗಳ ಮುಖ್ಯಸ್ಥರಾದರು. ಅವರು - ನೆಬಾಯೋತ್, (ಇಷ್ಮಾಯೇಲನ ಹಿರೀಮಗನಿಂದ ಈ ಹೆಸರಿನ ಉತ್ಪತ್ತಿ), ಕೇದಾರ್, ಅದ್ಬೆಯೇಲ್, ಮಿಬ್ಸಾಮ್,
30 : ಮಿಷ್ಮಾ, ದೂಮಾ, ಮಸ್ಸ, ಹದದ್, ತೇಮ,
31 : ಯೆಟೂರ್, ನಾಫೀಷ್, ಕೇದೆಮ ಎಂಬವರು.
32 : ಅಬ್ರಹಾಮನಿಗೆ ಕೆಟೂರಳೆಂಬ ಉಪಪತ್ನಿ ಇದ್ದಳು. ಇವಳಿಂದ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಎಂಬ ಆರು ಜನ ಮಕ್ಕಳು ಜನಿಸಿದರು. ಯೊಕ್ಷಾನ್ನಿಗೆ ಶೆಬಾ ಮತ್ತು ದೆದಾನ್ ಎಂಬಿಬ್ಬರು ಮಕ್ಕಳು ಹುಟ್ಟಿದರು.
33 : ಮಿದ್ಯಾನ್ ಗೆ ಏಫಾ, ಏಫೆರ್, ಹನೋಕ್, ಅಬೀದ, ಎಲ್ದಾಯ ಎಂಬ ಐದು ಜನ ಮಕ್ಕಳು ಹುಟ್ಟಿದರು.
34 : ಅಬ್ರಹಾಮನ ಮಗ ಇಸಾಕನಿಗೆ ಇಬ್ಬರು ಮಕ್ಕಳು - ಏಸಾವ ಮತ್ತು ಯಕೋಬ.
35 : ಏಸಾವನ ಮಕ್ಕಳು - ಎಲೀಫಜ್, ರೆಯೂವೇಲ್, ಯೆಯೂಷ್, ಯಳಾಮ್, ಹಾಗೂ ಕೋರಹ ಎಂಬವರು.
36 : ಎಲೀಫಜ್ ನ ಮಕ್ಕಳು ತೇಮಾನ್, ಓಮಾರ್, ಜೆಫೀ, ಗತಾಮ್, ಕೆನಜ್ ಹಾಗೂ ತಿಮ್ನ ಎಂಬುವಳಿಂದ ಜನಿಸಿದ ಅಮಾಲೇಕ್ ಎಂಬವರು.
37 : ರೆಯೂವೇಲನ ಮಕ್ಕಳು - ನಹತ್, ಜೆರಹ, ಶಮ್ಮ ಮತ್ತು ಮಿಜ್ಜ ಎಂಬವರು.
38 : ಈ ಕೆಳಗೆ ನಮೂದಿಸಿದ ಎದೋಮಿನ ಮೂಲನಿವಾಸಿಗಳು ಸೇಯೀರನಿಂದ ಹುಟ್ಟಿದವರು: ಲೋಟಾನ್, ಶೋಬಾಲ್, ಚಿಬ್ಬೋನ್, ಅನಾಹ, ದೀಶೋನ್, ಏಚೆರ್, ದೀಶಾನ್.
39 : ಹೋರೀ ಮತ್ತು ಹೋಮಾಮ್ ಕುಲಗಳ ಮೂಲಪುರುಷ ಲೋಟಾನ್. ಲೋಟಾನನಿಗೆ ತಿಮ್ನ ಎಂಬ ಒಬ್ಬ ತಂಗಿಯಿದ್ದಳು.
40 : ಶೋಬಾಲ್ - ಇವನು ಅಲ್ಯಾನ್, ಮಾನಹತ್, ಏಬಾಲ್, ಶೆಫೀ, ಓನಾಮ್ ಎಂಬವರ ಕುಲಗಳ ಪೂರ್ವಜ.
41 : ಅನಾಹನು ದೀಶೋನನ ತಂದೆ. ದೀಶೋನನು ಹಮ್ರಾನ್, ಎಷ್ಬಾನ್, ಇತ್ರಾನ್, ಕೆರಾನ್ ಗೋತ್ರಗಳ ಪೂರ್ವಜ.
42 : ಏಚೆರ್: ಇವನು ಬಿಲ್ಹಾನ್, ಜಾವಾನ್, ಯಾಕಾನ್ ಎಂಬ ಕುಲಗಳ ಮೂಲಪುರುಷ. ದೀಶಾನನು, ಉಚ್ ಹಾಗೂ ಅರಾನ್ ಕುಲಗಳ ಪೂರ್ವಜ.
43 : ಇಸ್ರಯೇಲರಲ್ಲಿ ಅರಸರೇ ಇರಲಿಲ್ಲದ ಕಾಲದಲ್ಲಿ ಎದೋಮ್ ದೇಶವನ್ನು ಆಳಿದ ಅರಸರು. ಬೆಯೋರನ ಮಗ ಬೆಳನು; ದಿನ್ಹಾಬಾ ಇವನ ರಾಜಧಾನಿ.
44 : ಬೆಳನು ಮರಣಹೊಂದಿದ ತರುವಾಯ ಬೊಚ್ರದ ಜೆರಹನ ಮಗ ಯೋಬಾಬ ಅವನ ಉತ್ತರಾಧಿಕಾರಿಯಾದನು.
45 : ಯೋಬಾಬ ಮೃತನಾದ ಮೇಲೆ ತೇಮಾನೀಯರ ನಾಡಿನ ಹುಷಾಮ ಅರಸನಾದ.
46 : ಹುಷಾಮ ಮೃತನಾದ ಮೇಲೆ ಅವೀತದ ಬೆದದನ ಮಗ ಹದದ ಅರಸನಾದ. ಇವನು ಮೋವಾಬ್ ದೇಶದಲ್ಲಿ ನಡೆದ ಯುದ್ಧದಲ್ಲಿ ಮಿದ್ಯಾನರನ್ನು ಸೋಲಿಸಿದ; ಅವನ ರಾಜಧಾನಿಯ ಹೆಸರು ಅವೀತ್.
47 : ಹದದ ಮೃತನಾದ ಮೇಲೆ ಮಸ್ರೇಕದ ಸಮ್ಲಾಹ ಅರಸನಾದ.
48 : ಸಮ್ಲಾಹ ಮೃತನಾದ ಮೇಲೆ ಯುಪ್ರಟಿಸ್ ನದೀತೀರದಲ್ಲಿರುವ ರೆಹೋಬೋತ್ ಊರಿನ ಸೌಲನು ಅರಸನಾದ.
49 : ಸೌಲನು ಮೃತನಾದ ಮೇಲೆ ಅಕ್ಬೋರನ ಮಗ ಬಾಳ್ಹಾನಾನ ಅರಸನಾದ.
50 : ಬಾಳ್ಹಾನಾನ್ ಮೃತನಾದ ಮೇಲೆ ಪಾಗೀಯ ಹದದನು ಅರಸನಾದ. ಇವನ ಹೆಂಡತಿ ಮೆಹೇಟಬೇಲ್; ಈಕೆ ಮಟ್ರೇದಳ ಮಗಳು, ಮೇಜಾಹಾಬನ ಮೊಮ್ಮಗಳು.
51 : ಹದದನು ಮೃತನಾದ ತರುವಾಯ ಆಳಿದ ಎದೋಮ್ಯರು: ತಿಮ್ನ, ಅಲ್ಯ, ಯೆತೇತ್, ಒಹೋಲಿಬಾಮ, ಏಲ, ಪೀನೋನ್, ಕೆನಜ್, ತೇಮಾನ್, ಮಿಬ್ಚಾರ್, ಮಗ್ದೀಯೇಲ್ ಮತ್ತು ಗೀರಾಮ್ ಎಂಬ ಕುಲನಾಯಕರು.
52 : ಹದದನು ಮೃತನಾದ ತರುವಾಯ ಆಳಿದ ಎದೋಮ್ಯರು: ತಿಮ್ನ, ಅಲ್ಯ, ಯೆತೇತ್, ಒಹೋಲಿಬಾಮ, ಏಲ, ಪೀನೋನ್, ಕೆನಜ್, ತೇಮಾನ್, ಮಿಬ್ಚಾರ್, ಮಗ್ದೀಯೇಲ್ ಮತ್ತು ಗೀರಾಮ್ ಎಂಬ ಕುಲನಾಯಕರು.
53 : ಹದದನು ಮೃತನಾದ ತರುವಾಯ ಆಳಿದ ಎದೋಮ್ಯರು: ತಿಮ್ನ, ಅಲ್ಯ, ಯೆತೇತ್, ಒಹೋಲಿಬಾಮ, ಏಲ, ಪೀನೋನ್, ಕೆನಜ್, ತೇಮಾನ್, ಮಿಬ್ಚಾರ್, ಮಗ್ದೀಯೇಲ್ ಮತ್ತು ಗೀರಾಮ್ ಎಂಬ ಕುಲನಾಯಕರು.
54 : ಹದದನು ಮೃತನಾದ ತರುವಾಯ ಆಳಿದ ಎದೋಮ್ಯರು: ತಿಮ್ನ, ಅಲ್ಯ, ಯೆತೇತ್, ಒಹೋಲಿಬಾಮ, ಏಲ, ಪೀನೋನ್, ಕೆನಜ್, ತೇಮಾನ್, ಮಿಬ್ಚಾರ್, ಮಗ್ದೀಯೇಲ್ ಮತ್ತು ಗೀರಾಮ್ ಎಂಬ ಕುಲನಾಯಕರು.