ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
131ನೇ ಅಧ್ಯಾಯ
- Verse 1: ಹಮ್ಮಿಲ್ಲ ಪ್ರಭು, ನನ್ನೆದೆಯೊಳು I ನನಗಿಲ್ಲ ಸೊಕ್ಕಿನ ಕಣ್ಣುಗಳು II ಶಕ್ತಿಮೀರಿದ ಕಾರ್ಯಕೆ ನಾ ಕೈ ಹಾಕಿಲ್ಲ I ಅಸಾಧ್ಯವಾದುದನು ನಾ ಕೈಗೊಂಡಿಲ್ಲ II
- Verse 2: ಎಂದೇ ನನ್ನಾತ್ಮ ಸಮಾಧಾನದಿಂದಿದೆ I ಮೌನದಿಂದಿದೆ ತಾಯ್ಮಡಿಲಾ ಕೂಸಂತೆ I ನೆಮ್ಮದಿಯಿಂದಿದೆ ತಾಯ್ಮಡಿಲಾ ಶಿಶುವಂತೆ II
- Verse 3: ಇಸ್ರಯೇಲೆ, ಪ್ರಭುವಿನಲಿ ನಂಬಿಕೆಯಿಂದಿರು I ಇಂದಿಗೂ ಎಂದೆಂದಿಗೂ ಭರವಸೆಯಿಂದಿರು II