வேதாகமம்
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
8ನೇ ಅಧ್ಯಾಯ
- Verse 1: ಬೆನ್ಯಾಮೀನನಿಗೆ ಐದು ಜನ ಮಕ್ಕಳಿದ್ದರು. ವಯಸ್ಸಿಗನುಗುಣವಾಗಿ ಅವರ ಹೆಸರುಗಳು ಇಂತಿವೆ - ಬೆಳ, ಅಷ್ಬೇಲ್, ಅಹ್ರಹ,
- Verse 2: ನೋಹ ಮತ್ತು ರಾಫ.
- Verse 3: ಬೆಳನ ಮಕ್ಕಳು - ಅದ್ದಾರ್, ಗೇರ, ಅಬೀಹೂದ್,
- Verse 4: ಅಬೀಷೂವ, ನಾಮಾನ್, ಅಹೋಹ,
- Verse 5: ಗೇರ, ಶೆಪೂಫಾನ್, ಹೂರಾಮ್ ಎಂಬವರು.
- Verse 6: ಏಹೂದನ ಸಂತಾನದವರು - ನಾಮಾನ್, ಅಹೀಯ, ಗೇರ ಎಂಬವರು. ಅವರು ಗೇಬದಲ್ಲಿ ವಾಸಿಸಿದ ಕುಟುಂಬಗಳ ಮುಖ್ಯಸ್ಥರು. ಆದರೆ ಅವರು ಹೊರಗೆ ಹೋಗುವಂತೆ ಒತ್ತಾಯಿಸಲ್ಪಟ್ಟಾಗ ಮಾನಹತಿಯಲ್ಲಿ ವಾಸಿಸಲು ಹೋದರು. ಹೀಗೆ ಹೊರಡುವಾಗ ಉಚ್ಚ ಮತ್ತು ಅಹೀಹೂದನ ತಂದೆ ಗೇರ ಮುಂದಾಳಾಗಿದ್ದರು.
- Verse 7: ಏಹೂದನ ಸಂತಾನದವರು - ನಾಮಾನ್, ಅಹೀಯ, ಗೇರ ಎಂಬವರು. ಅವರು ಗೇಬದಲ್ಲಿ ವಾಸಿಸಿದ ಕುಟುಂಬಗಳ ಮುಖ್ಯಸ್ಥರು. ಆದರೆ ಅವರು ಹೊರಗೆ ಹೋಗುವಂತೆ ಒತ್ತಾಯಿಸಲ್ಪಟ್ಟಾಗ ಮಾನಹತಿಯಲ್ಲಿ ವಾಸಿಸಲು ಹೋದರು. ಹೀಗೆ ಹೊರಡುವಾಗ ಉಚ್ಚ ಮತ್ತು ಅಹೀಹೂದನ ತಂದೆ ಗೇರ ಮುಂದಾಳಾಗಿದ್ದರು.
- Verse 8: ಶಹರಯಿಮನು ತನ್ನ ಇಬ್ಬರು ಪತ್ನಿಯರಾದ ಹೂಷೀಮ್ ಮತ್ತು ಬಾರ ಎಂಬವರಿಂದ ವಿವಾಹ ವಿಚ್ಛೇದನ ಮಾಡಿಕೊಂಡನು. ಅನಂತರ ಮೋವಾಬ್ ದೇಶದಲ್ಲಿ ವಾಸಿಸಿದನು. ಅಲ್ಲಿ ಹೋದೆಷ್ ಎಂಬಾಕೆಯನ್ನು ವಿವಾಹವಾಗಿ ಏಳು ಜನ ಮಕ್ಕಳನ್ನು ಪಡೆದನು - ಯೋವಾಬ್, ಚಿಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ, ಮಿರ್ಮ ಎಂದು ಅವರ ಹೆಸರು.
- Verse 9: ಶಹರಯಿಮನು ತನ್ನ ಇಬ್ಬರು ಪತ್ನಿಯರಾದ ಹೂಷೀಮ್ ಮತ್ತು ಬಾರ ಎಂಬವರಿಂದ ವಿವಾಹ ವಿಚ್ಛೇದನ ಮಾಡಿಕೊಂಡನು. ಅನಂತರ ಮೋವಾಬ್ ದೇಶದಲ್ಲಿ ವಾಸಿಸಿದನು. ಅಲ್ಲಿ ಹೋದೆಷ್ ಎಂಬಾಕೆಯನ್ನು ವಿವಾಹವಾಗಿ ಏಳು ಜನ ಮಕ್ಕಳನ್ನು ಪಡೆದನು - ಯೋವಾಬ್, ಚಿಬ್ಯ, ಮೇಷ, ಮಲ್ಕಾಮ್, ಯೆಯೂಚ್, ಸಾಕ್ಯ, ಮಿರ್ಮ ಎಂದು ಅವರ ಹೆಸರು.
- Verse 10: ಅವನ ಎಲ್ಲಾ ಮಕ್ಕಳು ಗೋತ್ರಪ್ರಧಾನರು.
- Verse 11: ಹುಷೀಮ್ ಎಂಬುವಳಿಂದ ಅವನಿಗೆ ಅಬೀಟೂಬ್, ಎಲ್ಪಾಲ ಎಂಬಿಬ್ಬರು ಮಕ್ಕಳು ಜನಿಸಿದರು.
- Verse 12: ಎಲ್ಪಾಲನಿಗೆ ಮೂರು ಜನ ಮಕ್ಕಳು - ಏಬೆರ್, ಮಿಷ್ಷಾಮ್, ಶೆಮೆದ್ ಎಂಬವರು. ಓನೋ, ಲೋದ್ ಎಂಬ ಪಟ್ಟಣಗಳನ್ನು ಅವುಗಳ ಸುತ್ತುಮುತ್ತಲಿನ ಗ್ರಾಮಗಳನ್ನೂ ಕಟ್ಟಿಸಿದವನು ಶೆಮೆದ್.
- Verse 13: ಗತ್ ಪಟ್ಟಣದ ಜನರನ್ನು ಹೊಡೆದೋಡಿಸಿ ಅಲ್ಲಿ ನೆಲೆಸಿದ ಹಾಗು ಅಯ್ಯಾಲೋನ್ ಪಟ್ಟಣದಲ್ಲಿ ವಾಸಿಸಿದ ಕುಟುಂಬಗಳ ಮುಖ್ಯಸ್ಥರು - ಬೆರೀಯ ಮತ್ತು ಶಮ ಎಂಬವರು.
- Verse 14: ಬೆರೀಯನ ವಂಶಜರಲ್ಲಿ ಅಹ್ಯೋ, ಶಾಷಕ್, ಯೆರೇಮೋತ್,
- Verse 15: ಜೆಬದ್ಯ, ಅರಾದ್, ಎದೆರ್,
- Verse 16: ಮೀಕಾಯೇಲ್, ಇಷ್ಪ, ಯೋಹ ಎಂಬವರೂ ಸೇರಿದ್ದರು.
- Verse 17: ಎಲ್ಪಾಲನ ಮಕ್ಕಳು - ಜೆಬದ್ಯ, ಮೆಷುಲ್ಲಾಮ್, ಹಿಜ್ಕೇ, ಹೆಬೆರ್,
- Verse 18: ಇಷ್ಮೆರೈ, ಇಜ್ಲೀಯ ಹಾಗೂ ಯೋಬಾಬ್ ಎಂಬವರು.
- Verse 19: ಶಿಮ್ಮೀಯ ಮಕ್ಕಳು - ಯಾಕೀಮ್, ಜಿಕ್ರೀ, ಜಬ್ದೀ,
- Verse 20: ಎಲೀಗೇನೈ, ಚಿಲ್ಲೆತೈ, ಎಲೀಯೇಲ್,
- Verse 21: ಅದಾಯ, ಬೆರಾಯ ಮತ್ತು ಶಿಮ್ರಾತ್ ಎಂಬವರು.
- Verse 22: ಶಾಷಕನ ಮಕ್ಕಳು - ಇಷ್ಪಾನ್, ಏಬೆರ್, ಎಲೀಯೇಲ್,
- Verse 23: ಅಬ್ದೋನ್, ಜಿಕ್ರಿ, ಹನಾನ್,
- Verse 24: ಹನನ್ಯ, ಏಲಾಮ್, ಅನೆತೋತೀಯ,
- Verse 25: ಇಫ್ದೆಯಾಹ, ಪೆನೂವೇಲ್ ಎಂಬವರು.
- Verse 26: ಯೆರೋಹಾಮನ ಮಕ್ಕಳು - ಶಂಷೆರೈ, ಶೆಹರ್ಯ, ಅತಲ್ಯ,
- Verse 27: ಯಾರೆಷ್ಯ, ಏಲೀಯ ಹಾಗೂ ಜಿಕ್ರೀ ಎಂಬವರು.
- Verse 28: ಇವರು ಜೆರುಸಲೇಮಿನಲ್ಲಿ ನೆಲೆಸಿದ ಪುರಾತನ ಕುಟುಂಬಗಳ ಮುಖ್ಯಸ್ಥರೂ ಅವರ ಪ್ರಮುಖ ವಂಶಜರೂ ಆಗಿದ್ದಾರೆ.
- Verse 29: ಯೆಗೂವೇಲ, ಗಿಬ್ಯೋನ ಪಟ್ಟಣವನ್ನು ಕಟ್ಟಿಸಿ ಅಲ್ಲಿ ನೆಲೆಸಿದನು. ಅವನ ಹೆಂಡತಿ ಮಾಕ ಎಂಬುವಳು.
- Verse 30: ಅಬ್ದೋನ ಅವನ ಹಿರಿಯ ಮಗ. ಚೂರ್, ಕೀಷ್, ಬಾಳ್, ನಾದಾಬ್,
- Verse 31: ಗೆದೋರ್, ಅಹ್ಯೋ, ಜೆಕೆರ್,
- Verse 32: ಮತ್ತು ಶಿಮ್ಮೀಯ ತಂದೆ ಮಿಕ್ಲೋತ್ ಎಂಬವರು ಅವನ ಇತರ ಮಕ್ಕಳು. ಅವರ ವಂಶಜರು ಜೆರುಸಲೇಮಿನಲ್ಲಿ ತಮ್ಮ ಗೋತ್ರದ ಇತರ ಕುಟುಂಬಗಳ ಹತ್ತಿರ ವಾಸಿಸಿದರು.
- Verse 33: ಕೀಷನ ತಂದೆ ನೇರ. ಕೀಷ ಅರಸ ಸೌಲನ ತಂದೆ. ಯೋನಾತಾನ್, ಮಲ್ಕೀಷೂವ, ಅಬೀನಾದಾಬ್, ಎಷ್ಬಾಳ ಎಂಬವರು ಸೌಲನ ಮಕ್ಕಳು.
- Verse 34: ಯೋನಾತಾನ್ ಮೆರೀಬ್ಬಾಳನ ತಂದೆ. ಇವನು ಮೀಕನ ತಂದೆ.
- Verse 35: ಮೀಕನಿಗೆ ನಾಲ್ವರು ಮಕ್ಕಳು - ಪೀತೋನ್, ಮೆಲಿಕ್, ತರೇಯ, ಆಹಾಜ್ ಎಂಬವರು.
- Verse 36: ಆಹಾಜ ಯೆಹೋವಾದ್ಧಾಹನ ತಂದೆ. ಇವನಿಗೆ ಮೂರು ಜನ ಮಕ್ಕಳು - ಅಲೆಮೆತ್, ಅಜ್ಮಾವೆತ್, ಜಿಮ್ರೀ ಎಂಬವರು. ಜಿಮ್ರೀ ಮೋಚನ ತಂದೆ.
- Verse 37: ಮೋಚನು ಬಿನ್ನನಿಗೆ, ಬಿನ್ನನು ರಾಫನಿಗೆ, ರಾಫನು ಎಲ್ಲಾಸನಿಗೆ, ಎಲ್ಲಾಸ ಅಚೇಲನಿಗೆ ತಂದೆಯಾಗಿದ್ದರು.
- Verse 38: ಅಚೇಲನಿಗೆ ಆರು ಜನ ಮಕ್ಕಳಿದ್ದರು: ಅಜ್ರೀಕಾಮ್, ಬೋಕೆರೂ, ಇಷ್ಮಾಯೇಲ್, ಶೆಯರ್ಯ, ಓಬದ್ಯ, ಹಾನಾನ್ ಎಂಬವರು.
- Verse 39: ಅಚೇಲನ ತಮ್ಮನಾದ ಏಷೆಕನ ಮಕ್ಕಳು - ಮೊದಲನೆಯವನು ಊಲಾಮ್, ಎರಡನೆಯವನು ಯೆಯೂಷ್, ಮೂರನೆಯವನು ಎಲೀಫೆಲೆಟ್ ಎಂಬವರು.
- Verse 40: ಊಲಾಮನ ಮಕ್ಕಳು ಶೂರಸೈನಿಕರೂ ಬಿಲ್ಲುವಿದ್ಯೆಯಲ್ಲಿ ಪರಿಣಿತರೂ ಆಗಿದ್ದರು. ಅವನಿಗೆ ಒಟ್ಟು ಒಂದುನೂರ ಐವತ್ತು ಮಂದಿ ಮಕ್ಕಳು ಮೊಮ್ಮಕ್ಕಳೂ ಇದ್ದರು. ಇವರೆಲ್ಲರೂ ಬೆನ್ಯಾಮೀನ್ ಗೋತ್ರದವರು.