ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
123ನೇ ಅಧ್ಯಾಯ
- Verse 1: ಪರಲೋಕದಲಿ ಆಸೀನನಾಗಿರುವ ಪ್ರಭುವೆ I ನನ್ನ ಕಣ್ಣುಗಳನು ನಿನ್ನ ಕಡೆಗೆ ಎತ್ತಿರುವೆ II
- Verse 2: ದಾಸನ ಕಣ್ಣು ಯಜಮಾನನತ್ತ I ದಾಸಿಯ ಕಣ್ಣು ಯಜಮಾನಿಯತ್ತ II ನನ್ನ ಕಣ್ಣು ಸ್ವಾಮಿದೇವನತ್ತ I ಆತನ ಕಟಾಕ್ಷವನ್ನು ನಿರೀಕ್ಷಿಸುತ್ತಾ II
- Verse 3: ದಯೆತೋರು ಪ್ರಭು, ನಮಗೆ ದಯೆ ತೋರು I ಅತ್ಯಧಿಕವಾಗಿ ನಾವು ತಿರಸ್ಕೃತರು II
- Verse 4: ಬೇಸತ್ತಿದೆ ಮನ ಗರ್ವಿಗಳ ನಿಂದೆಯಿಂದ I ಸುಖಭೋಗಿಗಳು ಮಾಡುವ ಅಪಹಾಸ್ಯದಿಂದ II