पवित्र बाइबिल
ಹಳೆಯ ಒಡಂಬಡಿಕೆ
ಯೆಹೋಶುವ
13ನೇ ಅಧ್ಯಾಯ
- Verse 1: ಯೆಹೋಶುವ ಹಣ್ಣುಹಣ್ಣು ಮುದುಕನಾದ. ಆಗ ಸರ್ವೇಶ್ವರ ಆತನಿಗೆ, “ನೀನೀಗ ಮುದುಕ. ಸ್ವಾಧೀನ ಮಾಡಿಕೊಳ್ಳಬೇಕಾದ ನಾಡುಗಳು ಇನ್ನೂ ಬಹಳ ಇವೆ.
- Verse 2: ಅವು ಯಾವುವೆಂದರೆ - ಈಜಿಪ್ಟಿನ ಈಚೆಯಿರುವ ಶೀಹೋರ್ ನದಿಯಿಂದ ಕಾನಾನ್ಯರಿಗೆ ಸೇರಿದ ಉತ್ತರ ಮೇರೆಯಾದ ಎಕ್ರೋನಿನವರೆಗಿರುವ ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರ್, ಎಕ್ರೋನ್ ಎಂಬ ನಗರಗಳ ಐದು ಮಂದಿ ಫಿಲಿಷ್ಟಿಯ ಪ್ರಭುಗಳ ಸ್ವಾಧೀನದಲ್ಲಿದ್ದಂಥ ಫಿಲಿಷ್ಟಿಯ ಪ್ರಾಂತ್ಯ;
- Verse 3: ಅವು ಯಾವುವೆಂದರೆ - ಈಜಿಪ್ಟಿನ ಈಚೆಯಿರುವ ಶೀಹೋರ್ ನದಿಯಿಂದ ಕಾನಾನ್ಯರಿಗೆ ಸೇರಿದ ಉತ್ತರ ಮೇರೆಯಾದ ಎಕ್ರೋನಿನವರೆಗಿರುವ ಗಾಜಾ, ಅಷ್ಡೋದ್, ಅಷ್ಕೆಲೋನ್, ಗತೂರ್, ಎಕ್ರೋನ್ ಎಂಬ ನಗರಗಳ ಐದು ಮಂದಿ ಫಿಲಿಷ್ಟಿಯ ಪ್ರಭುಗಳ ಸ್ವಾಧೀನದಲ್ಲಿದ್ದಂಥ ಫಿಲಿಷ್ಟಿಯ ಪ್ರಾಂತ್ಯ;
- Verse 4: ಗೆಷೂರ್ಯರ ನಾಡು, ದಕ್ಷಿಣದಲ್ಲಿದ್ದ ಅವ್ವೀಯರ ನಾಡು; ಸಿದೋನ್ಯರಿಗೆ ಸೇರಿದ ಮೆಯರಾದಿಂದ ಅಮೋರಿಯರ ಮೇರೆಯಾದ ಅಫೇಕದವರೆಗಿರುವ ಕಾನಾನ್ಯರ ನಾಡು;
- Verse 5: ಗೆಬಾಲ್ಯರ ಸೀಮೆ, ಹೆರ್ಮೋನ್ ಬೆಟ್ಟದ ತಪ್ಪಲಿನಲ್ಲಿರುವ ಬಾಲ್ಗಾದಿನಿಂದ ಹಾಮಾತಿನ ಹಾದಿಯವರೆಗಿರುವ ಲೆಬನೋನಿನ ಪೂರ್ವಪ್ರದೇಶ;
- Verse 6: ಒಟ್ಟಾರೆ ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನವರೆಗಿರುವ ಸಿದೋನ್ಯರ ಎಲ್ಲ ಪರ್ವತ ಪ್ರಾಂತ್ಯಗಳು.
- Verse 7: “ನಾನೇ ಈ ಎಲ್ಲಾ ಜನಾಂಗಗಳನ್ನು ಇಸ್ರಯೇಲರ ಸಮ್ಮುಖದಿಂದ ಹೊರಡಿಸಿಬಿಡುವೆನು. ನೀನಾದರೋ ನಾನು ಮೊದಲೇ ಆಜ್ಞಾಪಿಸಿದಂತೆ ಇಸ್ರಯೇಲರಿಗೆ ನಾಡನ್ನು ಹಂಚಿಕೊಡುವಾಗ ಇವುಗಳನ್ನು ಕೂಡ ಸೇರಿಸಿ ನಾಡನ್ನೆಲ್ಲಾ ಒಂಬತ್ತು ಕುಲಗಳಿಗೂ ಮನಸ್ಸೆ ಕುಲದ ಅರ್ಧಜನರಿಗೂ ಪಾಲುಮಾಡಿಕೊಡು,” ಎಂದರು.
- Verse 8: ಮನಸ್ಸೆಕುಲದ ಉಳಿದ ಅರ್ಧಜನರಿಗೆ, ರೂಬೇನ್ಯರಿಗೆ ಹಾಗೂ ಗಾದ್ಯರಿಗೆ ಜೋರ್ಡನಿನ ಆಚೆಕಡೆ ಈಗಾಗಲೇ ಮೋಶೆಯಿಂದ ಸ್ವಂತ ಭೂಮಿ ದೊರಕಿತ್ತು. ಸರ್ವೇಶ್ವರನ ದಾಸ ಮೋಶೆ ಅವರಿಗೆ ಕೊಟ್ಟ ಪ್ರಾಂತ್ಯಗಳು ಇವು :
- Verse 9: ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ನಗರ ಮತ್ತು ಅದೇ ಕಣಿವೆಯಲ್ಲಿದ್ದ ಮತ್ತೊಂದು ನಗರ, ಇವುಗಳಿಂದ ದೀಬೋನಿನವರೆಗೆ ವಿಸ್ತರಿಸಿಕೊಂಡಿದ್ದ ಮೇದಬದ ತಪ್ಪಲ ನಾಡು;
- Verse 10: ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯ ಅರಸ ಸೀಹೋನನಿಗೆ ಸೇರಿದ ಅಮ್ಮೋನಿಯರ ಎಲ್ಲೆಗೆ ಈಚೆಕಡೆ ಇದ್ದಂಥ ಎಲ್ಲ ನಗರಗಳು;
- Verse 11: ಗಿಲ್ಯಾದ್ ನಾಡು, ಗೆಷ್ಯೂರ ಮತ್ತು ಮಾಕತೀಯರ ಪ್ರಾಂತ್ಯಗಳು, ಹೆರ್ಮೋನ್ ಬೆಟ್ಟದ ಮೇಲಿನ ಪ್ರದೇಶ
- Verse 12: ಅಷ್ಟರೋತ್, ಎದ್ರೈ ಎಂಬ ಊರುಗಳಲ್ಲಿ ಆಳುತ್ತಿದ್ದ ರೆಫಾಯರ ವಂಶಸ್ಥನಾದ ಓಗನ ರಾಜ್ಯವಾಗಿದ್ದು ಸಲ್ಕಾ ನಗರದವರೆಗೆ ವಿಸ್ತರಿಸಿಕೊಂಡಿದ್ದ ಬಾಷಾನಿನ ಎಲ್ಲಾ ಪ್ರಾಂತ್ಯಗಳು. ಮೋಶೆಯೇ ಅವರನ್ನು ಜಯಿಸಿ ಅವರ ನಾಡುಗಳನ್ನು ಸ್ವಾಧೀನಮಾಡಿಕೊಂಡಿದ್ದನು.
- Verse 13: ಇಸ್ರಯೇಲರು ಗೆಷೂರ್ಯರನ್ನೂ ಮಾಕತೀಯರನ್ನೂ ನಾಡಿನೊಳಗಿಂದ ಅಟ್ಟಿಬಿಡಲಿಲ್ಲ. ಅವರು ಇಂದಿನವರೆಗೂ ಇಸ್ರಯೇಲರ ಮಧ್ಯದಲ್ಲೇ ಇದ್ದಾರೆ.
- Verse 14: ಲೇವಿ ಕುಲದವರಿಗೆ ಮಾತ್ರ ಯಾವ ಪಾಲೂ ಸಿಕ್ಕಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನು ಆಜ್ಞಾಪಿಸಿದಂತೆ ಯಜ್ಞಶೇಷವೇ ಅವರ ಸೊತ್ತಾಗಿತ್ತು.
- Verse 15: ಮೋಶೆ ರೂಬೇನ್ಯರ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಕೊಟ್ಟ ಪ್ರದೇಶಗಳು ಇವು :
- Verse 16: ಅರ್ನೋನ್ ಕಣಿವೆಯ ಅಂಚಿನಲ್ಲಿದ್ದ ಅರೋಯೇರ್ ನಗರ, ಅದೇ ಕಣಿವೆಯ ಮಧ್ಯೆಯಿದ್ದ ನಗರ;
- Verse 17: ಮೇದೆಬದ ಬಯಲುನಾಡಿಗೆ ಸೇರಿದ ಹೆಷ್ಬೋನ್ ನಗರ, ಅಲ್ಲೆ ಎತ್ತರವಾದ ಬಯಲಿನಲ್ಲಿರುವ ದೀಬೋನ್, ಬಾಮೋತ್ ಬಾಳ್, ಬೇತ್ಬಾಳ್ಮೆಯೋನ್ ಯಹಚಾ,
- Verse 18: ಕೆದೇಮೋತ್, ಮೆಫಾಯತ್,
- Verse 19: ಕಿರ್ಯಾತಯಿಮ್, ಸಿಬ್ಮಾ ಎಂಬ ಹೆಷ್ಬೋನಿನ ಉಪಗ್ರಾಮಗಳು, ಕಣಿವೆಯಲ್ಲಿ ಇರುವ ಗುಡ್ಡದ ಮೇಲಿನ ಚೆರೆತ್ ಶಹರ್, ಬೇತ್ಪೆಗೋರ್ ಎಂಬ ನಗರಗಳು,
- Verse 20: ಪಿಸ್ಗದ ಬುಡದಲ್ಲಿ ಇರುವ ಪ್ರದೇಶ, ಬೇತ್ ಯೆಷಿಮೋತ್ ನಗರ,
- Verse 21: ಒಟ್ಟಾರೆ ಮೀಶೋರೆಂಬ ಎತ್ತರವಾದ ಬಯಲಿನಲ್ಲಿದ್ದ ಎಲ್ಲ ನಗರಗಳು, ಹೆಷ್ಬೋನಿನಲ್ಲಿ ಆಳುತ್ತಿದ್ದ ಅಮೋರಿಯರ ಅರಸ ಸೀಹೋನನ ಸಮಸ್ತ ರಾಜ್ಯ. ಮೋಶೆ ಈ ನಾಡಿನಲ್ಲಿ ವಾಸವಾಗಿದ್ದ ಸೀಹೋನನನ್ನೂ ಎವೀ, ರೆಕೆಮ್, ಚೂರ್, ಹೂರ್, ರೆಬಾ ಎಂಬ ಮಿದ್ಯಾನ್ ಪ್ರಭುಗಳಾಗಿದ್ದ ಅವನ ಸರದಾರರನ್ನೂ ಸದೆಬಡಿದನು.
- Verse 22: ಇಸ್ರಯೇಲರು ಕತ್ತಿಗೆ ತುತ್ತಾಗಿಸಿದವರಲ್ಲಿ ಬೆಯೋರನ ಮಗನೂ ಶಕುನ ನೋಡುವವನೂ ಆಗಿದ್ದ ಬಿಳಾಮನೂ ಸೇರಿದ್ದನು.
- Verse 23: ಜೋರ್ಡನ್ ನದಿ ರೂಬೇನ್ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಸಿಕ್ಕಿದ ಗ್ರಾಮನಗರಗಳು ಇವೇ.
- Verse 24: ಮೋಶೆ ಗಾದ್ ಕುಲದ ಗೋತ್ರಗಳಿಗೆ ಸ್ವಂತ ಆಸ್ತಿಯಾಗಿ ಕೊಟ್ಟ ಪ್ರದೇಶಗಳು ಇವು:
- Verse 25: ಹೆಷ್ಬೋನಿನ ಅರಸ ಸೀಹೋನನ ರಾಜ್ಯದ ಉಳಿದ ಭಾಗವಾಗಿರುವ ಯಗ್ಜೇರ್, ಗಿಲ್ಯಾದಿನ ಎಲ್ಲ ನಗರಗಳು, ರಬ್ಬಾ ಊರಿನ ಪೂರ್ವದಲ್ಲಿ ಇರುವ ಅರೋಯೇರ್ ನಗರದವರೆಗೆ ವಿಸ್ತರಿಸಿಕೊಂಡಿರುವ ಅಮ್ಮೋನಿಯರ ಅರ್ಧರಾಜ್ಯ,
- Verse 26: ಹೆಷ್ಬೋನಿನಿಂದ ರಾಮತ್ ಮಿಚ್ಫೆ, ಬೆಟೋನೀಮ್ ಎಂಬ ಊರುಗಳವರೆಗೆ ಇರುವ ಪ್ರದೇಶ, ಮಹನಯಿಮಿನಿಂದ ದೇಬೀರ್ ಪ್ರಾಂತ್ಯದವರೆಗೆ ಇರುವ ನಾಡು,
- Verse 27: ಜೋರ್ಡನ್ ಕಣಿವೆಯಲ್ಲಿರುವ ಬೇತ್ ಹಾರಾಮ್, ಬೇತ್ ನಿಮ್ರಾ, ಸುಕ್ಕೋತ್, ಚಾಫೋನ್ ಎಂಬ ನಗರಗಳು, ಕಿನ್ನೆರೆತ್ ಸರೋವರ, (ದಕ್ಷಿಣ ದಿಕ್ಕಿನ) ಮೂಲೆಯವರೆಗೆ ವಿಸ್ತರಿಸಿಕೊಂಡಿರುವ ಜೋರ್ಡನ್ ಪೂರ್ವಪ್ರದೇಶ.
- Verse 28: ಈ ಎಲ್ಲ ಗ್ರಾಮನಗರಗಳು ಗಾದ್ ಕುಲದ ಆಸ್ತಿಪಾಸ್ತಿ ಆದವು.
- Verse 29: ಮಹನಯಿಮಿನ (ಉತ್ತರದಲ್ಲಿದ್ದ) ಹಾಗೂ ಮೊದಲು ಬಾಷಾನಿನ ಅರಸ ಓಗನ ರಾಜ್ಯವಾಗಿದ್ದ ಬಾಷಾನ್ ನಾಡನ್ನು
- Verse 30: ಮನಸ್ಸೆ ಕುಲದ ಅರ್ಧಕುಲಗಳಿಗೆ ಮೋಶೆ ಕೊಟ್ಟನು, ಯಾಯಿರನ ಗ್ರಾಮಗಳೆನಿಸಿಕೊಳ್ಳುವ ಅರವತ್ತು ಊರುಗಳು ಇದರಲ್ಲೆ ಇವೆ.
- Verse 31: ಗಿಲ್ಯಾದಿನ ಅರ್ಧಭಾಗ ಓಗನ ರಾಜಧಾನಿಗಳಾಗಿದ್ದ ಬಾಷಾನಿನ ಅಷ್ಟರೋತ್ ಹಾಗೂ ಎದ್ರೈ ಎಂಬ ನಗರಗಳು ಮನಸ್ಸೆಯ ಮಗ ಮಾಕೀರನ ಗೋತ್ರದ ಅರ್ಧಜನರಿಗೆ ಸಿಕ್ಕಿದವು.
- Verse 32: ಮೋಶೆ ಜೋರ್ಡನಿನ ಆಚೆ ಜೆರಿಕೋವಿನ ಎದುರಿನಲ್ಲಿರುವ ಮೋವಾಬ್ಯರ ಬಯಲು ಪ್ರದೇಶದಲ್ಲಿದ್ದಾಗ ಇವುಗಳನ್ನು ಅವರಿಗೆ ಸ್ವಂತ ಆಸ್ತಿಯಾಗಿ ಕೊಟ್ಟನು.
- Verse 33: ಆದರೆ ಲೇವಿಯ ಕುಲಕ್ಕೆ ಮೋಶೆ ಯಾವ ಸೊತ್ತನ್ನೂ ಕೊಡಲಿಲ್ಲ. ಏಕೆಂದರೆ ಇಸ್ರಯೇಲಿನ ದೇವರಾದ ಸರ್ವೇಶ್ವರನೇ ಅವರ ಸೊತ್ತೆಂದು ವಾಗ್ದಾನ ಮಾಡಲಾಗಿತ್ತು.