ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೆಹೋಶುವ
15ನೇ ಅಧ್ಯಾಯ
- Verse 1: ಎದೋಮ್ ನಾಡು ಹಾಗೂ ಚಿನ್ ಮರುಭೂಮಿಯ ಎಲ್ಲೆಯಾಗಿರುವ ಕಾನಾನ್ ನಾಡಿನ ದಕ್ಷಿಣ ಭಾಗವು ಯೆಹೂದ ಕುಲದ ಗೋತ್ರಗಳಿಗೆ ದೊರಕಿದ ಸೊತ್ತು.
- Verse 2: ಅದರ ದಕ್ಷಿಣದ ಎಲ್ಲೆ, ಲವಣ ಸಮುದ್ರದ ತೆಂಕಣ ತುದಿಯಿಂದ ತೊಡಗಿ
- Verse 3: ಅಕ್ರಬ್ಬೀಮ್ ಎಂಬ ಕೊಲ್ಲಿಯ ದಕ್ಷಿಣ ಮಾರ್ಗವಾಗಿ ಚಿನ್ ಗೆ ಹೋಗುತ್ತದೆ.
- Verse 4: ಅಲ್ಲಿಂದ ಕಾದೇಶ್ ಬರ್ನೇಯದ ದಕ್ಷಿಣ ಮಾರ್ಗವಾಗಿ ಹೆಚ್ರೋನಿಗೂ ಅಲ್ಲಿಂದ ಏರುತ್ತಾ ಅದ್ದಾರಿಗೂ ಹೋಗಿ ಕರ್ಕದ ಕಡೆಗೆ ತಿರುಗಿಕೊಳ್ಳುತ್ತದೆ. ಅಚ್ಮೋನಿನ ಮೇಲೆ ಈಜಿಪ್ಟಿನ ನದಿಗೆ ಬಂದು ಸಮುದ್ರತೀರದಲ್ಲಿ ಮುಕ್ತಾಯಗೊಳ್ಳುತ್ತದೆ. ಇದು ಅದರ ತೆಂಕಣ ಎಲ್ಲೆ.
- Verse 5: ಜೋರ್ಡನ್ ನದಿಯ ಮುಖದಿಂದ ಲವಣಸಮುದ್ರವೆಲ್ಲ ಅದರ ಪೂರ್ವದಿಕ್ಕಿನ ಎಲ್ಲೆ ಆಗಿದೆ.
- Verse 6: ಅದರ ಉತ್ತರ ದಿಕ್ಕಿನ ಎಲ್ಲೆ ಜೋರ್ಡನ್ ನದಿಯು ಲವಣಸಮುದ್ರವನ್ನು ಕೂಡುವ ಸ್ಥಳದಿಂದ ತೊಡಗಿ ಬೇತ್ ಹೊಗ್ಲಾ, ಬೇತ್ ಅರಾಬದ ಉತ್ತರ ಪ್ರಾಂತ್ಯ, ರೂಬೇನನ ಮಗ ಬೋಹನನ ಬಂಡೆ, ಆಕೋರಿನ ಕಣಿವೆ
- Verse 7: ಇವುಗಳ ಮೇಲೆ ದೆಬೀರಿಗೆ ಹೋಗುತ್ತದೆ. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ನದಿಯ ದಕ್ಷಿಣದಲ್ಲಿರುವ ಅದುಮೀಮಿಗೆ ಹೋಗುವ ದಾರಿಯ ಎದುರಿನಲ್ಲಿರುವ ಗಿಲ್ಗಾಲ್, ಏನ್ ಷೆಮೆಷ್ ಎನ್ನುವ ಬುಗ್ಗೆ, ಏನ್ ರೋಗೆಲ್ ಇವುಗಳ ಮೇಲೆ
- Verse 8: ಬೆನ್ ಹಿನ್ನೋಮನ ಕಣಿವೆಗೆ ಹೊಗುತ್ತದೆ. ಅಲ್ಲಿಂದ ಅದು ಜೆರುಸಲೇಮ್ ನಗರವು ಕಟ್ಟಲ್ಪಟ್ಟಿರುವ ಯೆಬೂಸಿಯರ ಬೆಟ್ಟದ ದಕ್ಷಿಣ ಮಾರ್ಗವಾಗಿ ಹಿನ್ನೋಮ್ ಕಣಿವೆಯ ಪಶ್ಚಿಮದಲ್ಲೂ ರೆಫಾಯೀಮ್ ಕಣಿವೆಯ ಉತ್ತರದಲ್ಲೂ ಇರುವ ಬೆಟ್ಟದ ತುದಿಗೆ ಹೋಗುತ್ತದೆ.
- Verse 9: ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಪ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ನಗರಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಎನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ.
- Verse 10: ಅಲ್ಲಿಂದ ಪಶ್ಚಿಮದಲ್ಲಿ ಇರುವ ಸೇಯಿರ್ ಬೆಟ್ಟದ ಕಡೆಗೆ ತಿರುಗಿಕೊಂಡು ಕೆಸಾಲೋನ್ ಎನಿಸಿಕೊಳ್ಳುವ ಯಾರೀಮ್ ಬೆಟ್ಟದ ಉತ್ತರಮಾರ್ಗವಾಗಿ ಇಳಿಯುತ್ತಾ ಬೇತ್ ಷೆಮೆಷಿಗೂ ಅಲ್ಲಿಂದ ತಿಮ್ನಾ ಊರಿಗೂ ಬಂದು
- Verse 11: ಅಲ್ಲಿಂದ ಉತ್ತರ ದಿಕ್ಕಿನಲ್ಲಿರುವ ಎಕ್ರೋನ್ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೆ ತಿರುಗಿಕೊಂಡು ಬಾಲಾಗುಡ್ಡದ ಮೇಲೆ ಯೆಬ್ನೇಲಿಗೆ ಹೋಗಿ ಸಮುದ್ರ ತೀರದಲ್ಲಿ ಮುಗಿಯುತ್ತದೆ.
- Verse 12: ಮಹಾಸಾಗರದ ತೀರವೇ ಪಶ್ಚಿಮ ಎಲ್ಲೆ, ಯೆಹೂದ ಗೋತ್ರಗಳ ನಾಡಿನ ಸುತ್ತಣ ಎಲ್ಲೆಗಳು ಇವೇ.
- Verse 13: ಯೆಹೋಶುವನು ಸರ್ವೇಶ್ವರನ ಅಪ್ಪಣೆಯಂತೆ ಯೆಫುನ್ನೆಯ ಮಗ ಕಾಲೇಬನಿಗೆ ಯೆಹೂದ ಕುಲದವರ ನಡುವೆ ಅನಾಕನ ತಂದೆ ಆದ ಅರ್ಬನ ನಗರವಾಗಿದ್ದ ಹೆಬ್ರೋನನ್ನು ಕೊಟ್ಟನು.
- Verse 14: ಕಾಲೇಬನು ಶೇಷೈ, ಅಹೀಮನ್, ತಲ್ಮೈ ಎಂಬ ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟನು.
- Verse 15: ಅನಂತರ ಅವನು ಹೊರಟು ಕಿರ್ಯತ್ ಸೇಫೆರ್ ಎನ್ನಿಸಿಕೊಳ್ಳುತ್ತಿದ್ದ ದೆಬೀರಿನ ನಿವಾಸಿಗಳೊಡನೆ ಯುದ್ಧಮಾಡಿದನು.
- Verse 16: ಅವನು, “ಕಿರ್ಯತ್ ಸೇಫೆರದ ಮೇಲೆ ದಾಳಿಮಾಡಿ ಹಿಡಿದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆಮಾಡಿಕೊಡುತ್ತೇನೆ,” ಎಂದನು.
- Verse 17: ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನಿಯೇಲನು ಅದರ ಮೇಲೆ ದಾಳಿಮಾಡಿ ತೆಗೆದುಕೊಂಡನು. ಅವನಿಗೆ ಕಾಲೇಬನು ತನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆ ಮಾಡಿಕೊಟ್ಟನು.
- Verse 18: ಆಕೆ ಮನೆ ಸೇರಿದಾಗ ತನ್ನ ತಂದೆಯ ಬಳಿ ಭೂಮಿಯನ್ನು ಕೇಳಬೇಕೆಂದು ಒತ್ನಿಯೇಲನು ಅವಳನ್ನು ಪ್ರೋತ್ಸಾಹಿಸಿದನು. ಅಂತೆಯೇ ಅವಳು ಹೊರಟು ಹೇಸರಗತ್ತೆ ಮೇಲಿಂದ ಇಳಿದದ್ದೇ ಕಾಲೇಬನು, “ನಿನಗೇನು ಬೇಕು?” ಎಂದು ಕೇಳಿದನು.
- Verse 19: ಅವಳು, “ನನಗೊಂದು ಕೊಡುಗೆ ಬೇಕು. ನನ್ನನ್ನು ಬೆಂಗಾಡಿಗೆ ಕೊಟ್ಟುಬಿಟ್ಟಿದ್ದೀರಲ್ಲವೆ? ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡಿ,” ಎಂದಳು. ಆಗ ಕಾಲೇಬನು ಅವಳಿಗೆ ಬುಗ್ಗೆಗಳಿದ್ದ ಮೇಲಣ ಹಾಗೂ ಕೆಳಗಣ ಸ್ಥಳಗಳನ್ನು ಕೊಟ್ಟನು.
- Verse 20: ಯೆಹೂದ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಿನ ವಿವರ:
- Verse 21: ಎದೋಮ್ ಪ್ರಾಂತ್ಯವು ಮೇರೆಯಾಗಿರುವ ದಕ್ಷಿಣ ಭಾಗದಲ್ಲಿ ಕಬ್ಜೇಲ್, ಎದೆರ್, ಯಾಗೂರ್,
- Verse 22: ಕೀನಾ, ದೀಮೋನಾ, ಅದಾದಾ, ಕೆದೆಷ್, ಹಾಚೋರ್, ಇತ್ನಾನ್,
- Verse 23: ಕೀನಾ, ದೀಮೋನಾ, ಅದಾದಾ, ಕೆದೆಷ್, ಹಾಚೋರ್, ಇತ್ನಾನ್,
- Verse 24: ಜೀಪ್, ಟೆಲೆಮ್, ಬೆಯಾಲೋತ್,
- Verse 25: ಹಾಚೋರ್ ಹದತ್ತಾ, ಹಾಚೋರ್ ಎಂಬವ
- Verse 26: ಕಿರ್ಯೋತ್, ಹೆಚ್ರೋನ್, ಅಮಾಮ್, ಶೆಮ,
- Verse 27: ಮೋಲಾದ, ಹಚರ್ ಗದ್ದಾ, ಹೆಷ್ಮೋನ್, ಬೆತ್ಪೆಲೆಟ್, ಹಚರ್ ಷೂವಾಲ್,
- Verse 28: ಬೇರ್ಷಬ, ಬಿಜ್ಯೋತ್ಯಾ,
- Verse 29: ಬಾಲಾ, ಇಯ್ಯೀಮ್, ಎಚೆಮ್, ಎಲ್ಟೋಲದ್, ಕೆಸೀಲ್, ಹೊರ್ಮಾ,
- Verse 30: ಬಾಲಾ, ಇಯ್ಯೀಮ್, ಎಚೆಮ್, ಎಲ್ಟೋಲದ್, ಕೆಸೀಲ್, ಹೊರ್ಮಾ,
- Verse 31: ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ
- Verse 32: ಲೆಬಾವೋತ್, ಶಿಲ್ಹೀಮ್, ಆಯಿನ್, ರಿಮ್ಮೋನ್ ಎಂಬ ಇಪ್ಪತ್ತೊಂಬತ್ತು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
- Verse 33: ಇಳಿಜಾರು ಪ್ರದೇಶದಲ್ಲಿ
- Verse 34: ಎಷ್ಟಾವೋಲ್, ಚೊರ್ಗಾ, ಅಶ್ನಾ, ಜನೋಹ, ಎಂಗನ್ನೀಮ್,
- Verse 35: ತಪ್ಪೂಹ, ಏನಾಮ್, ಯರ್ಮೂತ್,
- Verse 36: ಅದುಲ್ಲಾಮ್, ಸೋಕೋ, ಅಜೇಕಾ, ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
- Verse 37: ಚೆನಾನ್, ಹದಾಷಾ, ಮಿಗ್ದಲ್ಗಾದ್, ದಿಲಾನ್, ಮಿಚ್ಪೆ, ಯೊಕ್ತೇಲ್,
- Verse 38: ಚೆನಾನ್, ಹದಾಷಾ, ಮಿಗ್ದಲ್ಗಾದ್, ದಿಲಾನ್, ಮಿಚ್ಪೆ, ಯೊಕ್ತೇಲ್,
- Verse 39: ಲಾಕೀಷ್, ಬೊಚ್ಕತ್, ಎಗ್ಲೋನ್,
- Verse 40: ಕಬ್ಬೋನ್, ಲಹ್ಮಾಮ್, ಕಿತ್ಲೀಷ್, ಗೆದೇರೋತ್, ಬೇತ್ ದಾಗೋನ್, ನಾಮಾ,
- Verse 41: ಮಕ್ಕೇದಾ ಎಂಬ ಹದಿನಾರು ನಗರಗಳು, ಅವುಗಳ ಗ್ರಾಮಗಳು;
- Verse 42: ಲಿಬ್ನಾ, ಎತೆರ್, ಅಷಾನ್, ಇಫ್ತಾಹ,
- Verse 43: ಲಿಬ್ನಾ, ಎತೆರ್, ಅಷಾನ್, ಇಫ್ತಾಹ,
- Verse 44: ಆಶ್ನಾ, ನೆಚೀಬ್, ಕೆಯೀಲಾ, ಅಕ್ಜೀಬ್, ಮಾರೇಷಾ ಎಂಬ ಒಂಬತ್ತು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
- Verse 45: ಎಕ್ರೋನ್ ಸಂಸ್ಥಾನ ಮತ್ತು ಅದಕ್ಕೆ ಸೇರಿದ ಗ್ರಾಮ-ನಗರಗಳು;
- Verse 46: ಎಕ್ರೋನಿನಿಂದ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು;
- Verse 47: ಅಷ್ಡೋದ್ ಸಂಸ್ಥಾನ ಮತ್ತು ಅದರ ಗ್ರಾಮ-ನಗರಗಳು; ಗಾಜಾ ಸಂಸ್ಥಾನ ಹಾಗೂ ಈಜಿಪ್ಟಿನ ನದಿಯ ಹತ್ತಿರದಲ್ಲಿ ಮತ್ತು ಮಹಾಸಾಗರದ ತೀರದಲ್ಲಿ ಇರುವ ಅದರ ಎಲ್ಲ ಗ್ರಾಮ, ನಗರಗಳು.
- Verse 48: ಮಲೆನಾಡಿನ ಪ್ರದೇಶದಲ್ಲಿರುವ ಶಾಮೀರ್, ಯತ್ತೀರ್, ಸೋಕೋ,
- Verse 49: ದನ್ನಾ, ದೆಬೀರ್ ಎಂಬ ಕಿರ್ಯತ್ ಸನ್ನಾ, ಅನಾಬ್,
- Verse 50: ದನ್ನಾ, ದೆಬೀರ್ ಎಂಬ ಕಿರ್ಯತ್ ಸನ್ನಾ, ಅನಾಬ್,
- Verse 51: ಎಷ್ಟೆಮೊ, ಅನೀಮ್, ಗೊಷೆನ್, ಹೋಲೋನ್, ಗಿಲೋ ಎಂಬ ಹನ್ನೊಂದು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
- Verse 52: ಅರಬ್, ದೂಮಾ, ಎಷಾನ್,
- Verse 53: ಯಾನೂಮ್, ಬೇತ್ ತಪ್ಪೂಹ, ಅಫೇಕಾ, ಹುಮ್ತಾ, ಹೆಬ್ರೋನ್ ಎಂಬ ಕಿರ್ಯತ್ ಅರ್ಬ, ಚಿಯೋರ್ ಎಂಬ ಒಂಬತ್ತು ನಗರಗಳು, ಅವುಗಳ ಗ್ರಾಮಗಳು.
- Verse 54: ಯಾನೂಮ್, ಬೇತ್ ತಪ್ಪೂಹ, ಅಫೇಕಾ, ಹುಮ್ತಾ, ಹೆಬ್ರೋನ್ ಎಂಬ ಕಿರ್ಯತ್ ಅರ್ಬ, ಚಿಯೋರ್ ಎಂಬ ಒಂಬತ್ತು ನಗರಗಳು, ಅವುಗಳ ಗ್ರಾಮಗಳು.
- Verse 55: ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ,
- Verse 56: ಇಜ್ರೇಲ್, ಯೊಗ್ದೆಯಾಮ್, ಜನೋಹ, ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ನಗರಗಳು ಮತ್ತು ಅವುಗಳ ಗ್ರಾಮಗಳು.
- Verse 57: ಇಜ್ರೇಲ್, ಯೊಗ್ದೆಯಾಮ್, ಜನೋಹ, ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ನಗರಗಳು ಮತ್ತು ಅವುಗಳ ಗ್ರಾಮಗಳು.
- Verse 58: ಹಲ್ಪೂಲ್, ಬೇತ್ ಚೂರ್, ಗೆದೋರ್,
- Verse 59: ಮಾರಾತ್, ಬೇತನೋತ್ ಎಲ್ಟೆಕೋನ್ ಎಂಬ ಆರು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು
- Verse 60: ಕಿರ್ಯಾತ್ಯಾರಿಮ್ ಅನ್ನಿಸಿಕೊಳ್ಳುವ ಕಿರ್ಯತ್ ಬಾಳ್, ರಬ್ಬಾ ಎಂಬ ಎರಡು ನಗರಗಳು ಮತ್ತು ಅವುಗಳ ಗ್ರಾಮಗಳು.
- Verse 61: ಮರುಭೂಮಿಯಲ್ಲಿರುವ ಬೇತ್ ಅರಾಬಾ,
- Verse 62: ಮಿದ್ದೀನ್, ಸೆಕಾಕಾ, ನಿಬಾನ್ ಉಪ್ಪಿನಪಟ್ಟಣ, ಏಂಗೇದಿ ಎಂಬ ಆರು ನಗರಗಳು ಮತ್ತು ಅವುಗಳ ಗ್ರಾಮಗಳು.
- Verse 63: ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಯೆಹೂದ ಕುಲದವರಿಂದ ಆಗದೆ ಹೋಯಿತು. ಆದುದರಿಂದ ಅವರು ಇಂದಿನವರೆಗೂ ಯೆಹೂದ ಕುಲದವರೊಡನೆ ಜೆರುಸಲೇಮಿನಲ್ಲೇ ವಾಸವಾಗಿದ್ದಾರೆ.