ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
27ನೇ ಅಧ್ಯಾಯ
- Verse 1: ಇಸ್ರಯೇಲರ ಕುಲಪ್ರಧಾನರು, ಸಹಸ್ರಾಧಿಪತಿಗಳು, ಶತಾಧಿಪತಿಗಳು, ಅರಸನ ವಿವಿಧ ಸೇವೆಯನ್ನು ಮಾಡಬೇಕಾಗಿದ್ದ ವರ್ಗಗಳ ಅಧಿಪತಿಗಳು ಹಾಗು ಇವರ ಕಾರ್ಯಕ್ರಮಗಳ ಪಟ್ಟಿ: ವರ್ಷದ ಎಲ್ಲಾ ತಿಂಗಳುಗಳಲ್ಲಿ, ತಿಂಗಳಿಗೆ ಒಂದು ವರ್ಗದಂತೆ, ಸರದಿಯ ಮೇಲೆ ಕೆಲಸಕ್ಕಾಗಿ ಬರುತ್ತಿದ್ದ ಪ್ರತಿಯೊಂದು ವರ್ಗದಲ್ಲಿ ಇಪ್ಪತ್ತನಾಲ್ಕು ಸಾವಿರ ಮಂದಿ ಇದ್ದರು.
- Verse 2: ಪೆರೆಚನ ಸಂತಾನದವನೂ ಜಬ್ದೀಯೇಲನ ಮಗನೂ ಆದ ಯಾಷೊಬ್ಬಾಮನು ಮೊದಲನೆಯ ವರ್ಗದ ನಾಯಕ.
- Verse 3: ಇವನು ಮೊದಲನೆಯ ತಿಂಗಳಿನ ಸೇನಾಪತಿಗಳ ಮುಖ್ಯಸ್ಥ. ಮೊದಲನೆಯ ತಿಂಗಳಿನಲ್ಲಿ ಸೇವೆ ಸಲ್ಲಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 4: ಅಹೋಹಿಯನಾದ ದೋದೈಯು ಎರಡನೆಯ ತಿಂಗಳಿನ ವರ್ಗದ ನಾಯಕ; ಆ ವರ್ಗದಲ್ಲಿ ಮಿಕ್ಲೋತನೆಂಬವನೂ ನಾಯಕನು. ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 5: ಯಾಜಕನಾದ ಯೆಹೋಯಾದನ ಮಗನೂ ಪ್ರಧಾನನೂ ಆದ ಬೆನಾಯನು ಮೂರನೆಯ ವರ್ಗದ ನಾಯಕ. ಮೂರನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 6: ಈ ಬೆನಾಯನು ಮೂವತ್ತು ಮಂದಿಯಲ್ಲಿ ಪ್ರಸಿದ್ಧ ರಣವೀರನೂ ಅವರ ಮುಖ್ಯಸ್ಥನೂ ಆಗಿದ್ದನು. ಅವನ ವರ್ಗದಲ್ಲಿ ಅವನ ಮಗನಾದ ಅಮ್ಮೀಜಾಬಾದನೂ ಇದ್ದನು.
- Verse 7: ಯೋವಾಬನ ತಮ್ಮನಾದ ಅಸಾಹೇಲನೂ ಅವನು ಸತ್ತನಂತರ ಅವನ ಮಗ ಜೆಬದ್ಯನೂ ನಾಲ್ಕನೆಯ ವರ್ಗದ ನಾಯಕರು; ನಾಲ್ಕನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವರ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 8: ಇಜ್ರಾಹ್ಯನಾದ ಶಮ್ಹೂತನು ಐದನೆಯ ವರ್ಗದ ನಾಯಕ. ಐದನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 9: ತೆಕೋವಿನ ಇಕ್ಕೇಷನ ಮಗ ಈರ ಎಂಬವನು ಆರನೆಯ ವರ್ಗದ ನಾಯಕ. ಆರನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 10: ಎಫ್ರಯಿಮ್ ಕುಲದ ಪೆಲೋನ್ಯನಾದ ಹೆಲೆಚನು ಏಳನೆಯ ವರ್ಗದ ನಾಯಕ; ಏಳನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ಮಾರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 11: ಹುಷ ಊರಿನ ಜೆರಹೀಯನಾದ ಸಿಬ್ಬೆಕೈಯು ಎಂಟನೆಯ ವರ್ಗದ ನಾಯಕ. ಎಂಟನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 12: ಬೆನ್ಯಾಮೀನ್ ಕುಲದ ಅನತೋತ್ ಊರಿನವನಾದ ಅಬ್ಬೀಯೆಜೆರನು ಒಂಬತ್ತನೆಯ ವರ್ಗದ ನಾಯಕ. ಒಂಬತ್ತನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 13: ನೆಟೋಫ ಊರಿನ ಜಿರಹೀಯನಾದ ಮಹರೈಯು ಹತ್ತನೆಯ ವರ್ಗದ ನಾಯಕ; ಹತ್ತನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 14: ಎಫ್ರಯಿಮ್ ಕುಲದ ಪಿರ್ರಾತೋನ್ಯನಾದ ಬೆನಾಯನು ಹನ್ನೊಂದನೆಯ ವರ್ಗದ ನಾಯಕ. ಹನ್ನೊಂದನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 15: ನೆಟೋಫ ಊರಿನವನೂ ಒತ್ನೀಯೇಲನ ಸಂತಾನದವನೂ ಆದ ಹೆಲ್ದೈಯು ಹನ್ನೆರಡನೆಯ ವರ್ಗದ ನಾಯಕ; ಹನ್ನೆರಡನೆಯ ತಿಂಗಳಿನಲ್ಲಿ ಸೇವಿಸತಕ್ಕ ಅವನ ವರ್ಗದವರ ಸಂಖ್ಯೆ ಇಪ್ಪತ್ತನಾಲ್ಕು ಸಾವಿರ.
- Verse 16: ಇಸ್ರಯೇಲ್ ಕುಲಗಳ ಅಧ್ಯಕ್ಷರುಗಳು: ರೂಬೇನ್ ಜಿಕ್ರಿಯ ಮಗ ಎಲೀಯೆಜೆರ್ ಸಿಮೆಯೋನ್ ಮಾಕನ ಮಗ ಶೆಫಟ್ಯ 17 ಲೇವಿ ಕೆಮುವೇಲನ ಮಗ ಹಷಬ್ಯ 18 ಆರೋನ ಚಾದೋಕ್ ಯೂದ ಎಲೀಹು, ಅರಸ ದಾವೀದನ ಸಹೋದರರಲ್ಲಿ ಒಬ್ಬ ಇಸ್ಸಾಕಾರ್ ಮೀಕಾಯೇಲನ ಮಗ ಒಮ್ರಿ 19 ಜೆಬುಲೂನ ಓಬದ್ಯನ ಮಗ ಇಷ್ಮಾಯ ನಫ್ತಾಲಿ ಅಜ್ರೀಯೇಲನ ಮಗ ಯೆರೀಮೋತ್ 20 ಎಫ್ರಯಿಮ ಅಜಜ್ಯನ ಮಗ ಹೊಷೇಯ ಪಶ್ಚಿಮ ಮನಸ್ಸೆ ಪೆದಾಯನ ಮಗ ಯೋವೇಲ್ 2೧ ಪೂರ್ವ. ಮನಸ್ಸೆ ಜೆಕರ್ಯನ ಮಗ ಇದ್ದೋ ಬೆನ್ಯಾಮೀನ ಅಬ್ನೇರನ ಮಗ ಯಗಸೀಯೇಲ್ 22 ದಾನ ಯೆರೋಹಾಮನ ಮಗ ಅಜರೇಲ್
- Verse 17: ಇಸ್ರಯೇಲ್ ಕುಲಗಳ ಅಧ್ಯಕ್ಷರುಗಳು: ರೂಬೇನ್ ಜಿಕ್ರಿಯ ಮಗ ಎಲೀಯೆಜೆರ್ ಸಿಮೆಯೋನ್ ಮಾಕನ ಮಗ ಶೆಫಟ್ಯ 17 ಲೇವಿ ಕೆಮುವೇಲನ ಮಗ ಹಷಬ್ಯ 18 ಆರೋನ ಚಾದೋಕ್ ಯೂದ ಎಲೀಹು, ಅರಸ ದಾವೀದನ ಸಹೋದರರಲ್ಲಿ ಒಬ್ಬ ಇಸ್ಸಾಕಾರ್ ಮೀಕಾಯೇಲನ ಮಗ ಒಮ್ರಿ 19 ಜೆಬುಲೂನ ಓಬದ್ಯನ ಮಗ ಇಷ್ಮಾಯ ನಫ್ತಾಲಿ ಅಜ್ರೀಯೇಲನ ಮಗ ಯೆರೀಮೋತ್ 20 ಎಫ್ರಯಿಮ ಅಜಜ್ಯನ ಮಗ ಹೊಷೇಯ ಪಶ್ಚಿಮ ಮನಸ್ಸೆ ಪೆದಾಯನ ಮಗ ಯೋವೇಲ್ 2೧ ಪೂರ್ವ. ಮನಸ್ಸೆ ಜೆಕರ್ಯನ ಮಗ ಇದ್ದೋ ಬೆನ್ಯಾಮೀನ ಅಬ್ನೇರನ ಮಗ ಯಗಸೀಯೇಲ್ 22 ದಾನ ಯೆರೋಹಾಮನ ಮಗ ಅಜರೇಲ್
- Verse 18: ಇಸ್ರಯೇಲ್ ಕುಲಗಳ ಅಧ್ಯಕ್ಷರುಗಳು: ರೂಬೇನ್ ಜಿಕ್ರಿಯ ಮಗ ಎಲೀಯೆಜೆರ್ ಸಿಮೆಯೋನ್ ಮಾಕನ ಮಗ ಶೆಫಟ್ಯ 17 ಲೇವಿ ಕೆಮುವೇಲನ ಮಗ ಹಷಬ್ಯ 18 ಆರೋನ ಚಾದೋಕ್ ಯೂದ ಎಲೀಹು, ಅರಸ ದಾವೀದನ ಸಹೋದರರಲ್ಲಿ ಒಬ್ಬ ಇಸ್ಸಾಕಾರ್ ಮೀಕಾಯೇಲನ ಮಗ ಒಮ್ರಿ 19 ಜೆಬುಲೂನ ಓಬದ್ಯನ ಮಗ ಇಷ್ಮಾಯ ನಫ್ತಾಲಿ ಅಜ್ರೀಯೇಲನ ಮಗ ಯೆರೀಮೋತ್ 20 ಎಫ್ರಯಿಮ ಅಜಜ್ಯನ ಮಗ ಹೊಷೇಯ ಪಶ್ಚಿಮ ಮನಸ್ಸೆ ಪೆದಾಯನ ಮಗ ಯೋವೇಲ್ 2೧ ಪೂರ್ವ. ಮನಸ್ಸೆ ಜೆಕರ್ಯನ ಮಗ ಇದ್ದೋ ಬೆನ್ಯಾಮೀನ ಅಬ್ನೇರನ ಮಗ ಯಗಸೀಯೇಲ್ 22 ದಾನ ಯೆರೋಹಾಮನ ಮಗ ಅಜರೇಲ್
- Verse 19: ಇಸ್ರಯೇಲ್ ಕುಲಗಳ ಅಧ್ಯಕ್ಷರುಗಳು: ರೂಬೇನ್ ಜಿಕ್ರಿಯ ಮಗ ಎಲೀಯೆಜೆರ್ ಸಿಮೆಯೋನ್ ಮಾಕನ ಮಗ ಶೆಫಟ್ಯ 17 ಲೇವಿ ಕೆಮುವೇಲನ ಮಗ ಹಷಬ್ಯ 18 ಆರೋನ ಚಾದೋಕ್ ಯೂದ ಎಲೀಹು, ಅರಸ ದಾವೀದನ ಸಹೋದರರಲ್ಲಿ ಒಬ್ಬ ಇಸ್ಸಾಕಾರ್ ಮೀಕಾಯೇಲನ ಮಗ ಒಮ್ರಿ 19 ಜೆಬುಲೂನ ಓಬದ್ಯನ ಮಗ ಇಷ್ಮಾಯ ನಫ್ತಾಲಿ ಅಜ್ರೀಯೇಲನ ಮಗ ಯೆರೀಮೋತ್ 20 ಎಫ್ರಯಿಮ ಅಜಜ್ಯನ ಮಗ ಹೊಷೇಯ ಪಶ್ಚಿಮ ಮನಸ್ಸೆ ಪೆದಾಯನ ಮಗ ಯೋವೇಲ್ 2೧ ಪೂರ್ವ. ಮನಸ್ಸೆ ಜೆಕರ್ಯನ ಮಗ ಇದ್ದೋ ಬೆನ್ಯಾಮೀನ ಅಬ್ನೇರನ ಮಗ ಯಗಸೀಯೇಲ್ 22 ದಾನ ಯೆರೋಹಾಮನ ಮಗ ಅಜರೇಲ್
- Verse 20: ಇಸ್ರಯೇಲ್ ಕುಲಗಳ ಅಧ್ಯಕ್ಷರುಗಳು: ರೂಬೇನ್ ಜಿಕ್ರಿಯ ಮಗ ಎಲೀಯೆಜೆರ್ ಸಿಮೆಯೋನ್ ಮಾಕನ ಮಗ ಶೆಫಟ್ಯ 17 ಲೇವಿ ಕೆಮುವೇಲನ ಮಗ ಹಷಬ್ಯ 18 ಆರೋನ ಚಾದೋಕ್ ಯೂದ ಎಲೀಹು, ಅರಸ ದಾವೀದನ ಸಹೋದರರಲ್ಲಿ ಒಬ್ಬ ಇಸ್ಸಾಕಾರ್ ಮೀಕಾಯೇಲನ ಮಗ ಒಮ್ರಿ 19 ಜೆಬುಲೂನ ಓಬದ್ಯನ ಮಗ ಇಷ್ಮಾಯ ನಫ್ತಾಲಿ ಅಜ್ರೀಯೇಲನ ಮಗ ಯೆರೀಮೋತ್ 20 ಎಫ್ರಯಿಮ ಅಜಜ್ಯನ ಮಗ ಹೊಷೇಯ ಪಶ್ಚಿಮ ಮನಸ್ಸೆ ಪೆದಾಯನ ಮಗ ಯೋವೇಲ್ 2೧ ಪೂರ್ವ. ಮನಸ್ಸೆ ಜೆಕರ್ಯನ ಮಗ ಇದ್ದೋ ಬೆನ್ಯಾಮೀನ ಅಬ್ನೇರನ ಮಗ ಯಗಸೀಯೇಲ್ 22 ದಾನ ಯೆರೋಹಾಮನ ಮಗ ಅಜರೇಲ್
- Verse 21: ಇಸ್ರಯೇಲ್ ಕುಲಗಳ ಅಧ್ಯಕ್ಷರುಗಳು: ರೂಬೇನ್ ಜಿಕ್ರಿಯ ಮಗ ಎಲೀಯೆಜೆರ್ ಸಿಮೆಯೋನ್ ಮಾಕನ ಮಗ ಶೆಫಟ್ಯ 17 ಲೇವಿ ಕೆಮುವೇಲನ ಮಗ ಹಷಬ್ಯ 18 ಆರೋನ ಚಾದೋಕ್ ಯೂದ ಎಲೀಹು, ಅರಸ ದಾವೀದನ ಸಹೋದರರಲ್ಲಿ ಒಬ್ಬ ಇಸ್ಸಾಕಾರ್ ಮೀಕಾಯೇಲನ ಮಗ ಒಮ್ರಿ 19 ಜೆಬುಲೂನ ಓಬದ್ಯನ ಮಗ ಇಷ್ಮಾಯ ನಫ್ತಾಲಿ ಅಜ್ರೀಯೇಲನ ಮಗ ಯೆರೀಮೋತ್ 20 ಎಫ್ರಯಿಮ ಅಜಜ್ಯನ ಮಗ ಹೊಷೇಯ ಪಶ್ಚಿಮ ಮನಸ್ಸೆ ಪೆದಾಯನ ಮಗ ಯೋವೇಲ್ 2೧ ಪೂರ್ವ. ಮನಸ್ಸೆ ಜೆಕರ್ಯನ ಮಗ ಇದ್ದೋ ಬೆನ್ಯಾಮೀನ ಅಬ್ನೇರನ ಮಗ ಯಗಸೀಯೇಲ್ 22 ದಾನ ಯೆರೋಹಾಮನ ಮಗ ಅಜರೇಲ್
- Verse 22: ಇಸ್ರಯೇಲ್ ಕುಲಗಳ ಅಧ್ಯಕ್ಷರುಗಳು: ರೂಬೇನ್ ಜಿಕ್ರಿಯ ಮಗ ಎಲೀಯೆಜೆರ್ ಸಿಮೆಯೋನ್ ಮಾಕನ ಮಗ ಶೆಫಟ್ಯ 17 ಲೇವಿ ಕೆಮುವೇಲನ ಮಗ ಹಷಬ್ಯ 18 ಆರೋನ ಚಾದೋಕ್ ಯೂದ ಎಲೀಹು, ಅರಸ ದಾವೀದನ ಸಹೋದರರಲ್ಲಿ ಒಬ್ಬ ಇಸ್ಸಾಕಾರ್ ಮೀಕಾಯೇಲನ ಮಗ ಒಮ್ರಿ 19 ಜೆಬುಲೂನ ಓಬದ್ಯನ ಮಗ ಇಷ್ಮಾಯ ನಫ್ತಾಲಿ ಅಜ್ರೀಯೇಲನ ಮಗ ಯೆರೀಮೋತ್ 20 ಎಫ್ರಯಿಮ ಅಜಜ್ಯನ ಮಗ ಹೊಷೇಯ ಪಶ್ಚಿಮ ಮನಸ್ಸೆ ಪೆದಾಯನ ಮಗ ಯೋವೇಲ್ 2೧ ಪೂರ್ವ. ಮನಸ್ಸೆ ಜೆಕರ್ಯನ ಮಗ ಇದ್ದೋ ಬೆನ್ಯಾಮೀನ ಅಬ್ನೇರನ ಮಗ ಯಗಸೀಯೇಲ್ 22 ದಾನ ಯೆರೋಹಾಮನ ಮಗ ಅಜರೇಲ್
- Verse 23: ಇಸ್ರಯೇಲರನ್ನು ಆಕಾಶದ ನಕ್ಷತ್ರಗಳಂತೆ ಅಸಂಖ್ಯವಾಗಿ ಮಾಡುವೆನೆಂದು ಸರ್ವೇಶ್ವರ ಕೊಟ್ಟ ಮಾತನ್ನು ದಾವೀದನು ನಂಬಿ ಇಪ್ಪತ್ತು ವರ್ಷಕ್ಕಿಂತ ಕಡಿಮೆಯಾದ ವಯಸ್ಸುಳ್ಳವರನ್ನು ಲೆಕ್ಕಿಸಲಿಲ್ಲ.
- Verse 24: ಚೆರೂಯಳ ಮಗ ಯೋವಾಬನು ಅವರನ್ನು ಲೆಕ್ಕಿಸಲಾರಂಭಿಸಿದರೂ, ಇದರ ನಿಮಿತ್ತ ಇಸ್ರಯೇಲರ ಮೇಲೆ ದೇವರ ಕೋಪವುಂಟಾಗಿ, ಅದನ್ನು ಪೂರ್ತಿಗೊಳಿಸಲಿಲ್ಲ. ಈ ಜನಗಣತಿ ದಾವೀದನ ರಾಜ್ಯದ ಇತಿಹಾಸದಲ್ಲಿ ಲಿಖಿತವಾಗಲಿಲ್ಲ.
- Verse 25: ಅರಸ ದಾವೀದನ ಸೊತ್ತಿನ ಮೇಲ್ವಿಚಾರಕರಾಗಿ ನೇಮಕಗೊಂಡವರು ಯಾರೆಂದರೆ: ಅರಸನ ಭಂಡಾರಗಳ ಮೇಲೆ ಅದೀಯೇಲನ ಮಗ ಅಜ್ಮಾವೆತ್; ಹೊಲದಲ್ಲು, ಪಟ್ಟಣಗಳಲ್ಲು, ಹಳ್ಳಿಗಳಲ್ಲು ಹಾಗೂ ಬರುಜುಗಳ ಮೇಲೂ ಇದ್ದ ಉಗ್ರಾಣಗಳ ಮೇಲೆ ಉಜ್ಜೀಯನ ಮಗ ಯೋನಾತಾನ್;
- Verse 26: ಹೊಲಗಳನ್ನು ವ್ಯವಸಾಯ ಮಾಡುವ ಆಳುಗಳ ಮೇಲೆ ಕೆಲೂಬನ ಮಗನಾದ ಎಜ್ರೀ;
- Verse 27: ದ್ರಾಕ್ಷೀತೋಟಗಳ ಮೇಲೆ ರಾಮಾ ಊರಿನ ಶಿಮ್ಮೀ; ದ್ರಾಕ್ಷೀತೋಟಗಳಲ್ಲಿರುವ ದ್ರಾಕ್ಷಾರಸದ ಉಗ್ರಾಣಗಳ ಮೇಲೆ ಶಿಷ್ಮೀಯನಾದ ಜಬ್ದೀ;
- Verse 28: ಎಣ್ಣೇಮರದ ತೋಪುಗಳ ಮೇಲೆ ಹಾಗೂ ಇಳುಕಲಿನ ಪ್ರದೇಶದಲ್ಲಿರುವ ಅತ್ತಿಮರಗಳ ತೋಪುಗಳ ಮೇಲೆ ಗೆದೆರೂರಿನವನಾದ ಬಾಳ್ಷಾನಾನ್; ಎಣ್ಣೆಯ ಉಗ್ರಾಣಗಳ ಮೇಲೆ ಯೋವಾಷ್;
- Verse 29: ಶಾರೋನಿನಲ್ಲಿ ಮೇಯುವ ದನಗಳ ಮೇಲೆ ಶಾರೋನ್ಯನಾದ ಶಿಟ್ರೈ; ಕಣಿವೆಗಳಲ್ಲಿ ಮೇಯುವ ದನಗಳ ಮೇಲೆ ಅದ್ಲೈಯ ಮಗನಾದ ಶಾಫಾಟ್;
- Verse 30: ಒಂಟೆಗಳ ಮೇಲೆ ಇಷ್ಮಾಯೇಲ್ಯನಾದ ಓಬೀಲ್; ಹೆಣ್ಣುಕತ್ತೆಗಳ ಮೇಲೆ ಮೇರೊನೋತ್ಯನಾದ ಯೆಹ್ದೆಯ;
- Verse 31: ಆಡುಕುರಿಗಳ ಮೇಲೆ ಹಗ್ರೀಯನಾದ ಯಾಜೀಜ್.
- Verse 32: ವಿವೇಕಿಯೂ ಶಾಸ್ತ್ರಜ್ಞನೂ ಆದ ಯೋನಾತಾನನೆಂಬ ದಾವೀದನ ಚಿಕ್ಕಪ್ಪನು ಮಂತ್ರಿಯಾಗಿದ್ದನು; ಹಕ್ಮೋನಿಯ ಮಗ ಯೆಹೀಯೇಲನು ರಾಜಪುತ್ರ ಪಾಲಕನಾಗಿದ್ದನು.
- Verse 33: ಅಹೀತೋಫೆಲನು ಅರಸನ ಮಂತ್ರಿ; ಅಕೀರ್ಯನಾದ ಹೂಷೈಯು ಅವನ ಮಿತ್ರ;
- Verse 34: ಬೆನಾಯನ ಮಗ ಯೆಹೋಯಾದಾವನೂ ಎಬ್ಯಾತಾರನೂ ಅಹೀತೋಫೆಲನ ಉತ್ತರಾಧಿಕಾರಿಗಳು; ಯೋವಾಬನು ಅರಸನ ಸೈನ್ಯಾಧಿಪತಿ.