P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
61ನೇ ಅಧ್ಯಾಯ
- Verse 1: ದೇವಾ ಆಲಿಸೆನ್ನ ಮೊರೆಯನು I ಕಿವಿಗೊಟ್ಟು ಕೇಳೆನ್ನ ಜಪವನು II
- Verse 2: ಎದೆಗುಂದಿ ಮೊರೆಯಿಡುತ್ತಿರುವೆ ಜಗದೆಲ್ಲೆಯಿಂದ I ಹತ್ತಲಾಗದ ಆಶ್ರಯಗಿರಿಗೆ ಹತ್ತಿಸೆನ್ನ II
- Verse 3: ದೇವಾ, ನೀನೆನಗೆ ಶರಣು ಮಹತ್ತರ I ಶತ್ರುಗೆಟುಕದ ಸುಭದ್ರ ಗೋಪುರ II
- Verse 4: ನಿನ್ನ ಗುಡಾರವಾಗಲಿ ನನಗೆ ನಿರಂತರ ಬಿಡಾರ I ನಿನ್ನ ರೆಕ್ಕೆಗಳ ಮರೆಯೆ ನನಗೆ ಆಶ್ರಯದಾಗರ II
- Verse 5: ನಾ ಹೊತ್ತ ಹರಕೆಗಳಿಗೆ ದೇವಾ ನೀ ಲಕ್ಷ್ಯವಿತ್ತೆ I ನಿನ್ನ ಭಕ್ತರಿಗೆ ಸಿಗುವ ಭಾದ್ಯತೆಯ ನನಗೂ ಇತ್ತೆ II
- Verse 6: ದೀರ್ಘಾಯುಸ್ಸನು ದಯಪಾಲಿಸು ರಾಜನಿಗೆ I ತಲತಲಾಂತರಕು ಉಳಿಯಲಿ ಆತನಾಳ್ವಿಕೆ II
- Verse 7: ದೇವರ ಸಾನ್ನಿಧ್ಯದಲಿ ಆತನು ಸದಾ ಸಾಮ್ರಾಜ್ಯವಾಳಲಿ I ನಿನ್ನಯ ಪ್ರೀತಿ ಸತ್ಯತೆಗಳು ಆತನಿಗೆ ಬೆಂಗಾವಲಾಗಿರಲಿ II
- Verse 8: ಸಲ್ಲಿಸುವೆನಾಗ ದಿನಬಿಡದೆ ನಿನಗೆ ಹರಕೆಗಳನು I ಸಂಕೀರ್ತಿಸುವೆನು ಸದಾ ನಿನ್ನ ಶ್ರೀನಾಮವನು II