పరిశుద్ధ గ్రంథము
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
26ನೇ ಅಧ್ಯಾಯ
- Verse 1: ಆ ದೊಡ್ಡರೋಗ ನಿಂತ ಮೇಲೆ ಸರ್ವೇಶ್ವರ ಸ್ವಾಮಿ ಮೋಶೆಗೆ ಮತ್ತು ಆರೋನನ ಮಗ ಎಲ್ಲಾಜಾರನಿಗೆ:
- Verse 2: “ನೀವು ಇಸ್ರಯೇಲ ಸಮಾಜದವರಲ್ಲಿ ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸುಳ್ಳವರನ್ನು ಅಂದರೆ ಸೈನಿಕಸೇವೆಗೆ ಅರ್ಹರಾದವರನ್ನು ಗೋತ್ರ ಗೋತ್ರಗಳ ಪ್ರಕಾರ ಜನಗಣತಿ ಮಾಡಿ,” ಎಂದು ಹೇಳಿದರು.
- Verse 3: ಅಂತೆಯೇ ಮೋಶೆ ಮತ್ತು ಮಹಾಯಾಜಕ ಎಲ್ಲಾಜಾರನು ಜೋರ್ಡನ್ ನದಿಯ ತೀರದಲ್ಲಿ ಜೆರಿಕೋ ಪಟ್ಟಣದ ಹತ್ತಿರ ಮೋವಾಬ್ಯರ ಮೈದಾನದಲ್ಲಿ ಜನಗಣತಿ ಮಾಡಿದರು.
- Verse 4: ಸರ್ವೇಶ್ವರ ಮೋಶೆಗೂ ಈಜಿಪ್ಟಿನಿಂದ ಬಂದಿದ್ದ ಇಸ್ರಯೇಲರಿಗೂ ಆಜ್ಞಾಪಿಸಿದ್ದಂತೆ ಇಪ್ಪತ್ತು ವರ್ಷ ಮತ್ತು ಮೇಲ್ಪಟ್ಟ ವಯಸ್ಸಿನ ಇಸ್ರಯೇಲರನ್ನು ಲೆಕ್ಕಿಸಿದರು: ಅದರ ವಿವರ ಇದು.
- Verse 5: ಯಕೋಬನ ಜೇಷ್ಠ ಪುತ್ರನಾದ ರೂಬೇನನ ವಂಶಸ್ಥರು ಇವರು: ಹನೋಕನಿಂದ ಹನೋಕ್ಯರು, ಪಲ್ಲೂವಿನಿಂದ ಪಲ್ಲೂವಿನವರು,
- Verse 6: ಹೆಚ್ರೋನನಿಂದ ಹೆಚ್ರೋನ್ಯರು ಹಾಗು ಕರ್ಮೀಯನಿಂದ ಕರ್ಮೀಯರು.
- Verse 7: ರುಬೇನ್ಯರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ 43,730:
- Verse 8: ಪಲ್ಲೂವಿನ ಮಗ ಎಲೀಯಾಬ್;
- Verse 9: ಎಲೀಯಾಬನ ಮಕ್ಕಳು ಇವರು - ನೆಮೂವೇಲ್, ದಾತಾನ್ ಮತ್ತು ಅಬೀರಾಮ್, ಕೋರಹನ ಪಂಗಡದವರು ಸರ್ವೇಶ್ವರನಿಗೆ ವಿರುದ್ಧ ವಾದಿಸಿದ ಕಾಲದಲ್ಲಿ ಅವರೊಂದಿಗೆ ಸೇರಿಕೊಂಡು ಮೋಶೆ ಮತ್ತು ಆರೋನರಿಗೆ ವಿರುದ್ಧ ಪ್ರತಿಭಟಿಸಿದ ಆಲೋಚನಾಕರ್ತರು ದಾತಾನ್ ಮತ್ತು ಅಬೀರಾಮ್.
- Verse 10: ಇವರನ್ನು ಹಾಗು ಕೋರಹನನ್ನು ಭೂಮಿ ಬಾಯ್ದೆರೆದು ನುಂಗಿಬಿಟ್ಟಿತು. ಆ ಪಂಗಡದವರಲ್ಲಿ ಬೇರೆ ಇನ್ನೂರೈವತ್ತು ಮಂದಿಯನ್ನು ಬೆಂಕಿ ಸುಟ್ಟು ಹಾಕಿತು. ಹೀಗೆ ಇಸ್ರಯೇಲರಿಗೆ ಎಚ್ಚರಿಕೆ ಉಂಟಾಗುವಂತೆ ಮಾಡಿತು.
- Verse 11: ಆ ಪಂಗಡದವರೆಲ್ಲರು ಸತ್ತರು. ಆದರೆ ಕೋರಹನ ಮಕ್ಕಳು ಆ ಕಾಲದಲ್ಲಿ ಸಾಯಲಿಲ್ಲ.
- Verse 12: ಸಿಮೆಯೋನ್ ಕುಲದ ಕುಟುಂಬಗಳು ಇವು: ನೆಮೂವೇಲನಿ0ದ ನೆಮೂವೇಲ್ಯರು, ಯಾಮೀನನಿ೦ದ ಯಾಮೀನ್ಯರು, ಯಾಕೀನನಿ0ದ ಯಾಕೀನ್ಯರು,
- Verse 13: ಜೆರಹನಿಂದ ಜೆರಹಿಯರು, ಸೌಲನಿಂದ ಸೌಲ್ಯರು ಎ0ಬ ವ0ಶಸ್ಥರು.
- Verse 14: ಸಿಮೆಯೋನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸ೦ಖ್ಯೆ: 22,200:
- Verse 15: ಗಾದ್ ಕುಲದ ಕುಟು೦ಬಗಳು ಇವು: ಚೆಫೋನನಿ೦ದ ಚೆಫೋನ್ಯರು, ಹಗ್ಗೀಯನಿ೦ದ ಹಗ್ಗೀಯರು, ಶೂನೀಯನಿ೦ದ ಶೂನೀಯರು,
- Verse 16: ಒಜ್ನೀಯನಿ೦ದ ಒಜ್ನೀಯರು, ಏರೀಯನಿ೦ದ ಏರೀಯರು,
- Verse 17: ಆರೋದನಿ೦ದ ಆರೋದ್ಯರು, ಅರೇಲೀಯನಿ೦ದ ಅರೇಲಿಯರು ಎ೦ಬ ವ೦ಶಸ್ಥರು.
- Verse 18: ಗಾದ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸ೦ಖ್ಯೆ: 40,500:
- Verse 19: ಯೆಹೂದನ ಮಕ್ಕಳಲ್ಲಿ ಏರ್, ಓನಾನ್ಯರು ಕಾನಾನ ನಾಡಿನಲ್ಲಿ ಸತ್ತರು.
- Verse 20: ಯೆಹೂದ ಕುಲದಲ್ಲಿ ಉಳಿದ ಕುಟು೦ಬಗಳು ಇವು - ಶೆಲಹನಿ೦ದ ಶೇಲಾನ್ಯರು, ಪೆರೆಚನಿ೦ದ ಪೆರೆಚ್ಯರು, ಹಾಗು ಜೆರಹನಿ೦ದ ಜೆರಹಿಯರು.
- Verse 21: ಪೆರಚನಿ೦ದ ಬೆಳೆದ ಕುಟು೦ಬಗಳು - ಹೆಚ್ರೋನನಿ೦ದ ಹೆಚ್ರೋನ್ಯರು ಮತ್ತು ಹಾಮೂಲನಿ೦ದ ಹಾಮೂಲ್ಯರು ಎ೦ಬ ವ೦ಶಸ್ಥರು.
- Verse 22: ಯೆಹೂದ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸ೦ಖ್ಯೆ: 76,500:
- Verse 23: ಇಸ್ಸಾಕಾರ್ ಕುಲದ ಕುಟುಂಬಗಳು ಯಾವುವೆಂದರೆ - ತೋಲನಿಂದ ತೋಲಾಯರು, ಪುವ್ವನಿಂದ ಪೂನ್ಯರು,
- Verse 24: ಯಾಶೂಬನಿಮದ ಯಶೂಬ್ಯರು ಮತ್ತು ಶಿಮ್ರೋನನಿಂದ ಶಿಮ್ರೋನ್ಯರು ಎಂಬ ವಂಶಸ್ಥರು.
- Verse 25: ಇಸ್ಸಾಕಾರ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರ ಸಂಖ್ಯೆ : 64,300:
- Verse 26: ಜೆಬುಲೂನ್ ಕುಲದ ಕುಟುಂಬಗಳು ಇವು - ಸೆರೆದನಿಂದ ಸೆರೆದ್ಯರು, ಏಲೋನನಿಂದ ಏಲೋನ್ಯರು ಮತ್ತು ಯಹಲೇಲನಿಂದ ಯಹಲೇಲ್ಯರು.
- Verse 27: ಜೆಬುಲೂನ್ ಕುಲದವರಾದ ಇವರಲ್ಲಿ ಲೆಕ್ಕಿಸಲ್ಪಟ್ಟವರ ಸಂಖ್ಯೆ : 60,500:
- Verse 28: ಜೋಸೆಫನ ಮಕ್ಕಳು ಮನಸ್ಸೆ ಮತ್ತು ಎಫ್ರಾಯಿಮ್.
- Verse 29: ಮನಸ್ಸೆ ಕುಲದ ಕುಟುಂಬಗಳು ಯಾವುವೆಂದರೆ - ಮಾಕೀರನಿಂದ ಮಾಕೀರ್ಯರು ಮತ್ತು ಮಾಕೀರನ ಮಗ ಗಿಲ್ಯಾದನಿಂದ ಗಿಲ್ಯಾದ್ಯರು ಎಂಬ ವಂಶಸ್ಥರು.
- Verse 30: ಗಿಲ್ಯಾದನ ವಂಶದವರು ಇವರು : ಈಯೆಜೆರನಿಂದ ಈಯೆಜೆರ್ಯರು, ಹೇಲಿಕನಿಂದ ಹೇಲಿಕ್ಯರು,
- Verse 31: ಅಸ್ರೀಯೇಲನಿಂದ ಅಸ್ರೀಯೇಲ್ಯರು, ಶೆಕೆಮನಿಂದ ಶೆಕೆಮ್ಯರು,
- Verse 32: ಶೆಮೀದಾಯನಿಂದ ಶೆಮೀದಾಯರು ಮತ್ತು ಹೇಫೆರನಿಂದ ಹೇಫೆರ್ಯರು ಎಂಬ ವಂಶಸ್ಥರು.
- Verse 33: ಹೇಫೆಕನ ಮಗ ಚಲ್ಪಹಾದನಿಗೆ ಹೆಣ್ಣು ಮಕ್ಕಳು ಹುಟ್ಟಿದರೇ ಹೊರತು ಗಂಡು ಮಕ್ಕಳು ಹುಟ್ಟಲಿಲ್ಲ. ಅವನ ಹೆಣ್ಣು ಮಕ್ಕಳ ಹೆಸರು ಮಹ್ಲಾ, ನೋವಾ, ಹೊಗ್ಲಾ, ಮಿಲ್ಕಾ ಮತ್ತು ತಿರ್ಚಾ.
- Verse 34: ಮನಸ್ಸೆ ಕುಲದವರಲ್ಲಿ ಲೆಕ್ಕಿಸಲ್ಪಟ್ಟವರ ಸಂಖ್ಯೆ : 52,700:
- Verse 35: ಎಫ್ರಯಿಮ್ ಕುಲದ ಕುಟುಂಬಗಳು ಇವು - ಶೂತೆಲಹನಿಂದ ಶೂತೆಲಹ್ಯರು, ಬೆಕೆರನಿಂದ ಬೆಕೆರ್ಯರು, ತಹನನಿಂದ ತಹನಿಯರು.
- Verse 36: ಶೂತೆಲಹನ ಮಗ ಏರಾನನಿಂದ ಏರಾನ್ಯರು ಎಂಬ ವಂಶಸ್ಥರು. ಎಫ್ರಯಿಮ್ ಕುಲದವರಾದ
- Verse 37: ಇವರಲ್ಲಿ ಲೆಕ್ಕಿಸಲ್ಪಟ್ಟವರ ಸಂಖ್ಯೆ : 32,500: ಇದೇ ಜೋಸೆಫ್ ವಂಶದ ಕುಟುಂಬಗಳ ವಿವರ.
- Verse 38: ಬೆನ್ಯಾಮೀನ್ ಕುಲದ ಕುಟುಂಬಗಳ ಹೆಸರು ಹೀಗಿದೆ - ಬೆಲಗನಿಂದ ಬೆಲಗ್ಯರು,ಅಷ್ಬೇಲನಿಂದ ಅಷ್ಬೇಲ್ಯರು, ಅಹೀರಾಮನಿಂದ ಅಹೀರಾಮ್ಯರು,
- Verse 39: ಶೂಫಾಮನಿಂದ ಶೂಫಾಮ್ಯರು, ಹೂಫಾಮನಿಂದ ಹೂಫಾಮ್ಯರು ಎಂಬ ವಂಶಸ್ಥರು.
- Verse 40: ಬೆಲಗನಿಗೆ ಅರ್ದ್ ಮತ್ತು ನಾಮಾನ್ ಎಂಬ ಇಬ್ಬರು ಮಕ್ಕಳಿದ್ದರು. ಅರ್ದನಿಂದ ಅರ್ದ್ಯರು ಮತ್ತು ನಾಮಾನನಿಂದ ನಾಮಾನ್ಯರು ಎಂಬ ವಂಶಸ್ಥರಾದರು.
- Verse 41: ಬೆನ್ಯಾಮೀನ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ : 45,600:
- Verse 42: ದಾನ್ ಕುಲದ ಕುಟುಂಬಗಳು ಇವು: ಶೂಹಾಮನಿಂದ ಶೂಹಾಮ್ಯರು ಎಂಬ ವಂಶಸ್ಥರು.
- Verse 43: ದಾನ್ ಕುಲದವರಲ್ಲಿ ಲೆಕ್ಕಿತರಾದವರ ಸಂಖ್ಯೆ: 64,400:
- Verse 44: ಅಶೇರ್ ಕುಲದ ಕುಟುಂಬಗಳ ಹೆಸರು ಇವು: ಇಮ್ಮಾಹನಿಂದ ಇಮ್ಮಾಹ್ಯರು, ಇಷ್ವೀಯನಿಂದ ಇಷ್ವೀಯರು ಮತ್ತು ಬೆರೀಯನಿಂದ ಬೆರೀಯ ವಂಶಸ್ಥರು.
- Verse 45: ಬೆರೀಯನ ಮಕ್ಕಳಿಂದ ಉಂಟಾದ ಕುಟುಂಬಗಳು ಇವು - ಹೇಬೆರನಿಂದ ಹೇಬೆರ್ಯರು ಮತ್ತು ಮಲ್ಕಿಯೇಲನಿಂದ ಮಲ್ಕಿಯೇಲ್ಯರು.
- Verse 46: ಆಶೇರನಿಗೆ ಸೆರಹಳೆಂಬ ಮಗಳು ಸಹ ಇದ್ದಳು.
- Verse 47: ಆಶೇರ್ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ: 53,400:
- Verse 48: ನಫ್ತಾಲಿ ಕುಲದ ಕುಟುಂಬಗಳು ಯಾವುವೆಂದರೆ - ಯಹಚೇಲನಿಂದ ಯಹಚೇಲ್ಯರು, ಗೂನೀಯನಿಂದ ಗೂನೀಯರು,
- Verse 49: ಯೇಚೆರನಿಂದ ಯೇಚೆರ್ಯರು ಮತ್ತು ಶಿಲ್ಲೇಮನಿಂದ ಶಿಲ್ಲೇಮ್ಯರು,
- Verse 50: ನಫ್ತಾಲಿ ಕುಲದವರಾದ ಇವರಲ್ಲಿ ಲೆಕ್ಕಿತರಾದವರ ಸಂಖ್ಯೆ : 45,400:
- Verse 51: ಇಸ್ರಯೇಲರಲ್ಲಿ ಲೆಕ್ಕಿತರಾದವರ ಒಟ್ಟು ಸಂಖ್ಯೆ ; 601,730:
- Verse 52: ಸರ್ವೇಶ್ವರ ಸ್ವಾಮಿ ಮೋಶೆಗೆ,
- Verse 53: “ಈ ಕುಲಗಳಿಗೆ ಅವರವರ ಸಂಖ್ಯೆಯ ಪ್ರಕಾರ ಆ ನಾಡನ್ನು ಸ್ವಂತ ನಾಡಾಗಿ ಹಂಚಿಕೊಡು.
- Verse 54: ಹೆಚ್ಚುಮಂದಿಯುಳ್ಳ ಕುಲಕ್ಕೆ ಹೆಚ್ಚಾಗಿಯೂ ಕಡಿಮೆಯಾದ ಕುಲಕ್ಕೆ ಕಡಿಮೆಯಾಗಿಯೂ ಕೊಡು. ಲೆಕ್ಕಿಸಿದ ಸಂಖ್ಯೆಯ ಪ್ರಕಾರವೇ ಪ್ರತಿ ಒಂದು ಕುಲಕ್ಕೆ ಭೂಮಿಯನ್ನು ಸೊತ್ತಾಗಿ ಕೊಡು.
- Verse 55: ಪ್ರತಿಯೊಂದು ಕುಲದ ಮೂಲಪುರುಷನ ಹೆಸರನ್ನು ಬರೆದು ಚೀಟು ಹಾಕಿ ಆಯಾ ಕುಲಕ್ಕೆ ಸೊತ್ತನ್ನು ಗೊತ್ತುಮಾಡು.
- Verse 56: ಹೆಚ್ಚು ಮಂದಿಯುಳ್ಳ ಕುಲಕ್ಕಾಗಲಿ, ಕಡಿಮೆ ಮಂದಿಯುಳ್ಳ ಕುಲಕ್ಕಾಗಲಿ ಚೀಟು ಬಂದ ಪ್ರಕಾರವೇ ಸೊತ್ತನ್ನು ಗೊತ್ತುಮಾಡು.
- Verse 57: ಲೇವಿಯರಲ್ಲಿ ಎಣಿಕೆಯಾದ ಕುಟುಂಬಗಳು ಇವು : ಗೇರ್ಷೋನನಿಂದ ಗೇರ್ಷೋನ್ಯರು, ಕೆಹಾತನಿಂದ ಕೆಹಾತ್ಯರು ಮತ್ತು ಮೆರಾರೀಯನಿಂದ ಮೆರಾರೀಯರು, ಎಂಬ ವಂಶಸ್ಥರು.
- Verse 58: ಲೇವಿ ಕುಲದವರ ಕುಟುಂಬಗಳು ಯಾವುವೆಂದರೆ - ಲಿಬ್ನೀ, ಹೆಬ್ರೋನ್, ಮಹ್ಲೀಯ, ಮೂಷೀಯ ಮತ್ತು ಕೋರಹಿಯ ಎಂಬ ಕುಟುಂಬಗಳು.
- Verse 59: ಕೆಹಾತನು ಅಮ್ರಾಮನನ್ನು ಪಡೆದನು. ಅಮ್ರಾಮನ ಹೆಂಡತಿ ಈಜಿಪ್ಟ್ ದೇಶದಲ್ಲಿ ಲೇವಿಯಿಂದ ಹುಟ್ಟಿದ ಯೋಕೆಬೆದ ಎಂಬವಳು. ಈಕೆಯಲ್ಲಿ ಅಮ್ರಾಮನಿಂದ ಆರೋನ, ಮೋಶೆ ಮತ್ತು ಅಕ್ಕ ಮಿರ್ಯಾಮಳೂ ಹುಟ್ಟಿದರು.
- Verse 60: ಆರೋನನಿಂದ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬವರು ಹುಟ್ಟಿದರು.
- Verse 61: ನಾದಾಬ್ ಮತ್ತು ಅಬೀಹೂ ಎಂಬ ಇಬ್ಬರು ಸರ್ವೇಶ್ವರನ ಸನ್ನಿಧಿಯಲ್ಲಿ ಬಹಿಷ್ಕೃತ ಅಗ್ನಿಯಿಂದ ಧೂಪಾರತಿ ಎತ್ತಿದುದರಿಂದ ಸತ್ತುಹೋದರು.
- Verse 62: ಬೇರೆ ಇಸ್ರಯೇಲರಿಗೆ ಸೊತ್ತು ದೊರಕಿದಂತೆ ಲೇವಿಯರಿಗೆ ದೊರಕದೆ ಹೋದುದರಿಂದ ಅವರು ಇಸ್ರಯೇಲರ ಸಮೇತ ಎಣಿಕೆ ಆಗಲಿಲ್ಲ. ಲೇವಿಯರಲ್ಲಿ ಒಂದು ತಿಂಗಳು ಮತ್ತು ಮೇಲ್ಪಟ್ಟ ವಯಸ್ಸಿನ ಗಂಡಸರನ್ನು ಲೆಕ್ಕ ಹಾಕಿದಾಗ ಅವರ ಸಂಖ್ಯೆ : 23,000 ಇತ್ತು.
- Verse 63: ಜೋರ್ಡನ್ ನದಿ ತೀರದಲ್ಲಿ, ಜೆರಿಕೋ ಪಟ್ಟಣದ ಹತ್ತಿರವಿದ್ದ ಮೋವಾಬ್ಯರ ಮೈದಾನದಲ್ಲಿ ಮೋಶೆ ಮತ್ತು ಯಾಜಕ ಎಲ್ಲಾಜಾರನು ಇಸ್ರಯೇಲರ ಜನಗಣತಿ ಮಾಡಿದಾಗ ಇದ್ದ ಜನಸಂಖ್ಯೆ ಇದು.
- Verse 64: ಮೋಶೆ ಮತ್ತು ಯಾಜಕ ಆರೋನನು ಸೀನಾಯಿ ಮರುಭೂಮಿಯಲ್ಲಿ ಇಸ್ರಯೇಲರ ಜನಗಣತಿ ಮಾಡಿದಾಗ ಎಣಿಕೆಯಾದವರಲ್ಲಿ ಒಬ್ಬರಾದರೂ ಇವರಲ್ಲಿರಲಿಲ್ಲ.
- Verse 65: ಏಕೆಂದರೆ ನಿಶ್ಚಯವಾಗಿ ಅವರು ಮರುಭೂಮಿಯಲ್ಲೇ ಸಾಯುವರೆಂದು ಸರ್ವೇಶ್ವರ ಸ್ವಾಮಿ ಹೇಳಿದ್ದರು. ಆದ್ದರಿಂದ ಯೆಫುನ್ನೆಯ ಮಗ ಕಾಲೇಬ್ ಮತ್ತು ನೂನನ ಮಗ ಯೆಹೋಶುವ ಇವರಿಬ್ಬರನ್ನು ಬಿಟ್ಟರೆ ಅವರಲ್ಲಿ ಯಾರೂ ಉಳಿಯಲಿಲ್ಲ.