ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಆದಿಕಾಂಡ
10ನೇ ಅಧ್ಯಾಯ
- Verse 1: ನೋಹನ ಮಕ್ಕಳಾದ ಶೇಮ್, ಹಾಮ್ ಮತ್ತು ಯೆಫೆತರಿಗೆ ಜಲಪ್ರಳಯ ಮುಗಿದ ಮೇಲೆ ಮಕ್ಕಳಾದರು. ಅವರ ವಂಶಾವಳಿ ಇದು :
- Verse 2: ಯೆಫೆತನ ಮಕ್ಕಳು ಇವರು - ಗೋಮೆರ್, ಮಾಗೋಗ್, ಮಾದಯ್, ಯಾವಾನ್, ತೂಬಲ್, ಮೆಷೆಕ್ ಮತ್ತು ತೀರಾಸ್.
- Verse 3: ಗೋಮೆರನ ಮಕ್ಕಳು ಅಷ್ಕೆನಸ್, ರೀಫತ್ ಮತ್ತು ತೋಗರ್ಮ.
- Verse 4: ಯಾವಾನನ ಮಕ್ಕಳು - ಎಲಿಷಾ, ಸ್ಪೇಯಿನ್ (ತಾರ್ಷಿಸ್), ಸೈಪ್ರಸ್ (ಕಿತ್ತೀಮ್) ಮತ್ತು ದೋದಾ ಎಂಬ ಸ್ಥಳದವರು. ಇವರು ಸಮುದ್ರದ ರೇವುಗಳಲ್ಲಿ ಹರಡಿಕೊಂಡರು.
- Verse 5: ದೇಶ - ಭಾಷಾ - ಕುಲ - ಜನಾಂಗಗಳ ಪ್ರಕಾರ ಇವರೇ ಯೆಫೆತನ ವಂಶದವರು.
- Verse 6: ಹಾಮನ ಮಕ್ಕಳು ಯಾರೆಂದರೆ - ಕೂಷ್, ಈಜಿಪ್ಟ್ (ಮಿಚ್ರಯಿಮ್) ಲಿಬಿಯಾ (ಪೂತ್) ಮತ್ತು ಕಾನಾನ್ ಎಂಬುವರು.
- Verse 7: ಕೂಷನ ಮಕ್ಕಳು - ಸೆಬಾ, ಹವೀಲ, ಸಬ್ತಾ, ರಗ್ಮ, ಸಬ್ತಕಾ ಎಂಬ ಜನಾಂಗಗಳು. ರಗ್ಮ ಸಂತಾನದವರು - ಶೆಬಾ, ದೆದಾನ್ ಎಂಬ ಜನಾಂಗಗಳು.
- Verse 8: ಕೂಷನು ನಿಮ್ರೋದನನ್ನು ಪಡೆದನು. ಇವನೇ ಪರಾಕ್ರಮದಲ್ಲಿ ಮೊದಲನೆಯ ಭೂರಾಜ.
- Verse 9: ದೇವರ ದೃಷ್ಟಿಯಲ್ಲಿ ದಿಟ್ಟ ಬೇಟೆಗಾರ. "ಪ್ರಭು ನಿನ್ನನ್ನು ನಿಮ್ರೋದನಂಥ ದಿಟ್ಟಬೇಟೆಗಾರನಾಗಿಸಲಿ" ಎಂಬ ನಾಣ್ನುಡಿ ಇಂದಿಗೂ ಇದೆ.
- Verse 10: ಬಾಬಿಲೋನಿಯ (ಶಿನಾರ್) ನಾಡಿನಲ್ಲಿರುವ ಯೆರೆಕ್, ಅಕ್ಕದ್ ಬಾಬಿಲೋನ್ ಕಲ್ನೇ ಈ ಎಲ್ಲ ಪಟ್ಟಣಗಳೇ ಅವನ ರಾಜ್ಯದ ಮೂಲ ಪಟ್ಟಣಗಳು.
- Verse 11: ಅವನು ಆ ನಾಡಿನಿಂದ ಹೊರಟು ಅಸ್ಸೀರಿಯಾ ನಾಡಿಗೆ ಬಂದು ನಿನೆವೆ, ರಹೋಬೋತೀರ್, ಕೆಲಹ ಎಂಬ ಪಟ್ಟಣಗಳನ್ನೂ
- Verse 12: ನಿನೆವೆಗೂ ಮಹಾ ಪಟ್ಟಣವಾದ ಕೆಲಹಕ್ಕೂ ನಡುವೆ ಇರುವ ರೆಸೆನ್ ಪಟ್ಟಣವನ್ನೂ ಕಟ್ಟಿಸಿದನು.
- Verse 13: ಈಜಿಪ್ಟ್ (ಮಿಚ್ರಯಿಮ್)ನವರಿಂದ ಲಿಡ್ಯರೂ ಅನಾಮ್ಯರೂ ಲೆಹಾಬ್ಯರೂ ನಪ್ತುಹ್ಯರೂ ಪತ್ರುಸ್ಯರೂ
- Verse 14: ಕಸ್ಲುಹ್ಯರೂ ಕೆಪ್ತೋರ್ಯರೂ ಹುಟ್ಟಿದರು. ಕಸ್ಲುಹ್ಯರಿಂದ ಬಂದವರು ಫಿಲಿಷ್ಟಿಯರು.
- Verse 15: ಕಾನಾನ್ ವಂಶದಲ್ಲಿ ಮೊದಲು ಹುಟ್ಟಿದವನು ಸೀದೋನ್; ಆಮೇಲೆ ಹೇತ್ ಹುಟ್ಟಿದನು.
- Verse 16: ಇದಲ್ಲದೆ ಯೆಬೂಸಿಯರೂ ಅಮೋರಿಯರೂ ಗಿರ್ಗಾಷಿಯರೂ
- Verse 17: ಹಿವ್ವಿಯರೂ ಅರ್ಕಿಯರೂ ಸೀನಿಯರೂ.
- Verse 18: ಅರ್ವಾದಿಯರೂ ಚೆಮಾರಿಯರೂ ಹಮಾತಿಯರೂ ಕಾನಾನನಿಂದ ಹುಟ್ಟಿದರು. ಕಾಲಕ್ರಮೇಣ ಈ ಕಾನಾನ್ ಕುಲಗಳವರು ಹರಡಿಕೊಂಡರು.
- Verse 19: ಕಾನಾನ್ಯರ ನಾಡು ಸೀದೋನ್ ಪಟ್ಟಣದಿಂದ ಗೆರಾರಿಗೆ ಹೋಗುವ ದಾರಿಯಲ್ಲಿ ಇರುವ ಗಾಜಾ ಪಟ್ಟಣದವರೆಗೂ ಮತ್ತು ಸೊದೋಮ್, ಗೊಮೋರ, ಆದ್ಮಾ, ಚೆಬೋಯಿಮ್ ಎಂಬ ಪಟ್ಟಣಗಳಿಗೆ ಹೋಗುವ ದಾರಿಯಲ್ಲಿದ್ದ ಲೆಷಾ ಊರಿನವರೆಗೂ ಹಬ್ಬಿತ್ತು.
- Verse 20: ಕುಲ - ಭಾಷಾ - ದೇಶ - ಜನಾಂಗಗಳ ಪ್ರಕಾರ ಇವರೇ ಹಾಮನ ವಂಶದವರು.
- Verse 21: ಹಿಬ್ರಿಯರೆಲ್ಲರಿಗೆ ಮೂಲಪುರುಷನೂ ಯೆಫೆತನ ಅಣ್ಣನೂ ಆಗಿದ್ದ ಶೇಮನಿಗು ಸಹ ಮಕ್ಕಳಾದರು.
- Verse 22: ಶೇಮನ ಮಕ್ಕಳು ಇವರು - ಏಲಾಮ್, ಅಶ್ಯೂರ್, ಅರ್ಪಕ್ಷದ್, ಲೂದ್ ಮತ್ತು ಆರಾಮ್.
- Verse 23: ಆರಾಮ್ ಸಂತಾನದವರು - ಊಸ್, ಹೂಲ್, ಗೆತೆರ್ ಮತ್ತು ಮಷ್.
- Verse 24: ಅರ್ಪಕ್ಷದನಿಂದ ಶೆಲಹನೂ ಶೆಲಹನಿಂದ ಎಬರನೂ ಹುಟ್ಟಿದರು.
- Verse 25: ಎಬರನಿಗೆ ಇಬ್ಬರು ಮಕ್ಕಳು. ಒಬ್ಬನಿಗೆ ಪೆಲೆಗೆಂಬ ಹೆಸರು. ಇವನ ಕಾಲದಲ್ಲೇ ಭೂಜನದ ವಿಭಜನೆ ಆದುದು. ಅವನ ತಮ್ಮನ ಹೆಸರು ಯೊಕ್ತಾನ್.
- Verse 26: ಯೊಕ್ತಾನನ ಮಕ್ಕಳು ಇವರು - ಆಲ್ಮೋದಾದ್, ಶೆಲಿಪ್, ಹಜರ್ಮಾವೆತ್, ಯೆರೆಹ.
- Verse 27: ಹದೋರಾಮ್, ಊಜಾಲ್, ದೀಕ್ಲಾ,
- Verse 28: ಓಬಾಲ್, ಅಬೀಮಯೇಲ್, ಶೆಬಾ,
- Verse 29: ಓಫೀರ್, ಹವೀಲ, ಯೋಬಾಬ್ ಎಂಬ ಸ್ಥಳಗಳವರು. ಈ ಕುಲಗಳೆಲ್ಲ ಯೋಕ್ತಾನನಿಂದ ಹುಟ್ಟಿದವು.
- Verse 30: ಇವರ ನಿವಾಸವು ಮೇಶಾ ನಾಡು ಮೊದಲುಗೊಂಡು ಪೂರ್ವಕ್ಕಿರುವ ಸೆಫಾರ್ ಎಂಬ ಬೆಟ್ಟದವರೆಗೂ ಹರಡಿತ್ತು.
- Verse 31: ಕುಲ, ಭಾಷೆ, ಜನಾಂಗಗಳ ಪ್ರಕಾರ ಇವರೇ ಶೇಮನ ವಂಶದವರು.
- Verse 32: ಸಂತತಿ - ಜನಾಂಗಗಳ ಪ್ರಕಾರ ಇವರೇ ನೋಹನ ವಂಶದವರು. ಜಲಪ್ರಳಯವಾದ ನಂತರ ಭೂಮಿಯ ಮೇಲೆ ಹರಡಿಕೊಂಡ ಜನಾಂಗಗಳು ಇವರೇ.