வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
82ನೇ ಅಧ್ಯಾಯ
- Verse 1: ಸ್ವರ್ಗಸಭೆಯಲಿ ದೇವ ಅಗ್ರಸ್ಥಾನ ವಹಿಸಿಹನು I ದೇವರುಗಳ ಸಮೂಹದಲಿ ನ್ಯಾಯವಿಚಾರಿಸುತಿಹನು II
- Verse 2: “ಎಲ್ಲಿಯತನಕ ನೀಡುವಿರಿ ಅನ್ಯಾಯವಾದ ತೀರ್ಪನು? I ಎಲ್ಲಿಯವರೆಗೆ ತೋರುವಿರಿ ದುಷ್ಟರಿಗೆ ಪಕ್ಷಪಾತವನು? II
- Verse 3: ಅಬಲರಿಗೆ, ಅನಾಥರಿಗೆ ದೊರಕಿಸಿರಿ ನ್ಯಾಯವನು I ಕಾದಿರಿಸಿರಿ ದೀನದಲಿತರ ಹಕ್ಕು ಬಾಧ್ಯತೆಯನು II
- Verse 4: ಬಿಡುಗಡೆಮಾಡಿರಿ ದೀನ ಬಡಬಗ್ಗರನು I ದುರುಳರ ಕೈಯಿಂದ ರಕ್ಷಿಸಿರಿ ಅವರನು II
- Verse 5: ಬುದ್ಧಿಹೀನರು, ಮಂದಮತಿಗಳು, ಕತ್ತಲಲಿ ನಡೆವವರು ನೀವು I ಇದರಿಂದಲೆ ಕದಲುತ್ತಿರುವುವು ಧರೆಯ ಅಸ್ತಿವಾರಗಳು II
- Verse 6: ‘ನೀವು ದೇವರುಗಳು’, ‘ನೀವೆಲ್ಲರು ಪರಾತ್ಪರನ ಮಕ್ಕಳು’ ನಾನೆಂದೆ I ಆದರೂ ಅಳಿಯುವಿರಿ ಅರಸರಂತೆ, ಸಾಯುವಿರಿ ಬರಿ ಮಾನವರಂತೆ” II
- Verse 7: ‘ನೀವು ದೇವರುಗಳು’, ‘ನೀವೆಲ್ಲರು ಪರಾತ್ಪರನ ಮಕ್ಕಳು’ ನಾನೆಂದೆ I ಆದರೂ ಅಳಿಯುವಿರಿ ಅರಸರಂತೆ, ಸಾಯುವಿರಿ ಬರಿ ಮಾನವರಂತೆ” II
- Verse 8: ಎದ್ದೇಳು ದೇವ, ಸ್ಥಾಪಿಸು ನ್ಯಾಯವನು ಧರೆಯೊಳು I ನಿನ್ನ ಸೊತ್ತಾಗಿವೆಯಲ್ಲವೆ ಸಮಸ್ತ ರಾಷ್ಟ್ರಗಳು II