पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
114ನೇ ಅಧ್ಯಾಯ
- Verse 1: ಇಸ್ರಯೇಲ್ ಜನರು ಈಜಿಪ್ಟನು ಬಿಟ್ಟು ಹೊರಟಾಗ I ಯಕೋಬ್ಯರು ಪರ ನುಡಿಯಾಡುವರನು ಬಿಟ್ಟಗಲಿದಾಗ, II
- Verse 2: ಜುದೇಯ ಆಯಿತಾತನಿಗೆ ದೇವಾಲಯ I ಇಸ್ರಯೇಲ್ ಆಯಿತಾತನಿಗೆ ಸ್ವರಾಜ್ಯ II
- Verse 3: ಇದ ಕಂಡು ಓಡಿಹೋಯಿತು ಕಡಲು I ಮರಳಿ ಬಂದಿತು ಜೋರ್ಡಾನ್ ಹೊನಲು II
- Verse 4: ಕುಪ್ಪಳಿಸಿದವು ಪರ್ವತಗಳು ಟಗರುಗಳಂತೆ I ಕುಣಿದವು ಬೆಟ್ಟಗುಡ್ಡಗಳು ಕುರಿಮರಿಗಳಂತೆ II
- Verse 5: ಕಡಲೇ, ಓಡುತ್ತಿರುವೆ ಏಕೆ? I ಜೋರ್ಡನ್, ಮರಳುತಿರುವೆ ಏಕೆ? II
- Verse 6: ಪರ್ವತಗಳೇ, ಕುಪ್ಪಳಿಸಿದಿರೇಕೆ ಟಗರುಗಳಂತೆ? I ಬೆಟ್ಟಗುಡ್ಡಗಳೇ, ಕುಣಿದಿರೇಕೆ ಕುರಿಮರಿಗಳಂತೆ? II
- Verse 7: ನಡುಗು ಭೂಲೋಕವೇ, ಪ್ರಭುವಿನ ಮುಂದೆ I ನಡುನಡುಗು ಯಕೋಬ ದೇವರ ಮುಂದೆ II
- Verse 8: ಮಾರ್ಪಡಿಸಿಹನು ಗೋರ್ಕಲ್ಲನು ಕೊಳವಾಗಿ I ಕಲ್ಲು ಬಂಡೆಯನು ನೀರಿನ ಬುಗ್ಗೆಯಾಗಿ II