पवित्र बाइबिल
ಹಳೆಯ ಒಡಂಬಡಿಕೆ
ಆದಿಕಾಂಡ
5ನೇ ಅಧ್ಯಾಯ
- Verse 1: ಆದಾಮನ ವಂಶದವರ ಚರಿತ್ರೆ: ಸೃಷ್ಟಿಕಾಲದಲ್ಲಿ ದೇವರು ಮಾನವನನ್ನು ತಮ್ಮ ಹೋಲಿಕೆಯಂತೆಯೇ ಸೃಷ್ಟಿಮಾಡಿದರು.
- Verse 2: ಅವರನ್ನು ಗಂಡನ್ನಾಗಿಯೂ ಹೆಣ್ಣನ್ನಾಗಿಯೂ ಮಾಡಿದರು. ಅಂದೇ ಅವರನ್ನು ಆಶೀರ್ವದಿಸಿ ಅವರಿಗೆ ‘ಮನುಷ್ಯ’ರೆಂದು ಹೆಸರಿಟ್ಟರು.
- Verse 3: ಆದಾಮನು 130 ವರ್ಷದವನಾದಾಗ ರೂಪದಲ್ಲಿ ತನ್ನಂತೆಯೇ ಇದ್ದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.
- Verse 4: ಸೇತನು ಹುಟ್ಟಿದ ಮೇಲೆ ಆದಾಮನು 800 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳು ಇದ್ದರು.
- Verse 5: ಸತ್ತಾಗ ಅವನಿಗೆ 930 ವರ್ಷಗಳಾಗಿದ್ದವು.
- Verse 6: ಸೇತನು 105 ವರ್ಷದವನಾದಾಗ ಎನೋಷನನ್ನು ಪಡೆದನು.
- Verse 7: ಎನೋಷನು ಹುಟ್ಟಿದ ಮೇಲೆ ಅವನು 807 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳೂ ಇದ್ದರು.
- Verse 8: ಸತ್ತಾಗ ಅವನಿಗೆ 912 ವರ್ಷಗಳಾಗಿದ್ದವು.
- Verse 9: ಎನೋಷನು 90 ವರ್ಷದವನಾದಾಗ ಕೇನಾನನ್ನು ಪಡೆದನು.
- Verse 10: ಕೇನಾನನು ಹುಟ್ಟಿದ ಮೇಲೆ ಎನೋಷನು 815 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳೂ ಇದ್ದರು.
- Verse 11: ಸತ್ತಾಗ ಅವನಿಗೆ ಒಟ್ಟು 905 ವರ್ಷಗಳಾಗಿದ್ದವು.
- Verse 12: ಕೇನಾನನು 70 ವರ್ಷದವನಾದಾಗ ಮಹಲಲೇಲನನ್ನು ಪಡೆದನು.
- Verse 13: ಮಹಲಲೇಲನು ಹುಟ್ಟಿದ ಮೇಲೆ ಕೇನಾನನು 840 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳಿದ್ದರು.
- Verse 14: ಸತ್ತಾಗ ಅವನಿಗೆ ಒಟ್ಟು 910 ವರ್ಷಗಳಾಗಿದ್ದವು.
- Verse 15: ಮಹಲಲೇಲನು 65 ವರ್ಷದವನಾದಾಗ ಯೆರೆದನನ್ನು ಪಡೆದನು.
- Verse 16: ಯೆರೆದನು ಹುಟ್ಟಿದ ಮೇಲೆ ಮಹಲಲೇಲನು 830 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳಿದ್ದರು.
- Verse 17: ಸತ್ತಾಗ ಅವನಿಗೆ ಒಟ್ಟು 895 ವರ್ಷಗಳಾಗಿದ್ದುವು.
- Verse 18: ಯೆರೆದನು 162 ವರ್ಷದವನಾದಾಗ ಹನೋಕನನ್ನು ಪಡೆದನು.
- Verse 19: ಹನೋಕನು ಹುಟ್ಟಿದ ಮೇಲೆ ಯೆರೆದನು 800 ವರ್ಷ ಬದುಕಿದನು.
- Verse 20: ಸತ್ತಾಗ ಅವನಿಗೆ ಒಟ್ಟು 962 ವರ್ಷಗಳಾಗಿದ್ದವು.
- Verse 21: ಹನೋಕನು 65 ವರ್ಷದವನಾದಾಗ ಮೆತೂಷೆಲಹನನ್ನು ಪಡೆದನು.
- Verse 22: ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ದೇವರಲ್ಲಿ ಅನ್ಯೋನ್ಯತೆಯಿಂದ 300 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳಿದ್ದರು.
- Verse 23: ಅವನು ಬದುಕಿದ ಕಾಲವೆಲ್ಲ 365 ವರ್ಷಗಳು.
- Verse 24: ಹನೋಕ ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇದ್ದಾಗ ದೇವರು ಅವನನ್ನು ಕರೆದುಕೊಂಡ ಕಾರಣ ಕಣ್ಮರೆಯಾದನು.
- Verse 25: ಮೆತೂಷೆಲಹನು 187 ವರ್ಷದವನಾದಾಗ ಲೆಮೆಕನನ್ನು ಪಡೆದನು.
- Verse 26: ಲೆಮೆಕನು ಹುಟ್ಟಿದ ಮೇಲೆ 782 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳಿದ್ದರು.
- Verse 27: ಸತ್ತಾಗ ಅವನಿಗೆ ಒಟ್ಟು 969 ವರ್ಷಗಳಾಗಿದ್ದವು.
- Verse 28: ಲೆಮೆಕನು 182 ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು.
- Verse 29: ಪ್ರಭು ಶಪಿಸಿದ ಭೂಮಿಯಲ್ಲಿ ನಾವು ಕೈಕೆಸರಾಗಿಸಿಕೊಂಡು ಪಡುವ ಶ್ರಮೆಯಲ್ಲಿ ಈ ಮಗನು ಉಪಶಮನ ತರುವನು ಎಂದುಕೊಂಡು ಅವನಿಗೆ ನೋಹ ಎಂದು ಹೆಸರಿಟ್ಟನು.
- Verse 30: ನೋಹನು ಹುಟ್ಟಿದ ಮೇಲೆ ಲೆಮೆಕನು 595 ವರ್ಷ ಬದುಕಿದನು. ಅವನಿಗೆ ಬೇರೆ ಗಂಡು ಮತ್ತು ಹೆಣ್ಣುಮಕ್ಕಳಿದ್ದರು.
- Verse 31: ಸತ್ತಾಗ ಅವನಿಗೆ ಒಟ್ಟು 777 ವರ್ಷಗಳಾಗಿದ್ದವು.
- Verse 32: ನೋಹನು 500 ವರ್ಷದವನಾದಾಗ ಶೆಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು.