வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
12ನೇ ಅಧ್ಯಾಯ
1 : ನೆರವಾಗು ಪ್ರಭು, ಭಕ್ತರಿಲ್ಲವಾದರು ಜಗದೊಳು I ಶರಣರಾರೂ ಕಾಣಸಿಗರೆನಗೆ ನರಮಾನವರೊಳು II
2 : ಹುಸಿಯ ನುಡಿವರು ನೆರೆಯವರೊಡನೆ ಪ್ರತಿಯೋರ್ವರು I ಕಪಟ ಮನದ ತುಟಿಮಾತಿನ ಸ್ತುತಿಗಾರರವರು II
3 : ಕಪಟವಾಡುವ ತುಟಿಗಳನು ಪ್ರಭು ಕಡಿದುಬಿಡಲಿ I ಬಡಾಯಿಕೊಚ್ಚುವ ಜಿಹ್ವೆಯನು ಕತ್ತರಿಸಿಬಿಡಲಿ II
4 : “ನಮ್ಮ ತುಟಿಗೆ ಹತೋಟಿ ಬೇಕಿಲ್ಲ; ನಾಲಗೆಯೇ ಗೆಲುವಿನ ಮೂಲ I ನಮಗೊಡೆಯನ ಅವಶ್ಯವಿಲ್ಲ” ಎಂದವರಾಡುವುದು ಸಲ್ಲ II
5 : ಬಡವರ ಬವಣೆ ತಿಳಿಯಿತೆನಗೆ; ದಲಿತರ ನರಳಾಟ ಕೇಳಿಸಿತೆನಗೆ I ಎದ್ದು ಬರುವೆ, ಹಗೆಗಳಿಂದವರನು ಉದ್ಧರಿಸುವೆ” ಇದು ಪ್ರಭುವಿನ ಹೇಳಿಕೆ II
6 : ಪ್ರಭುವಿನ ಈ ವಾಗ್ದಾನ ಪ್ರಮಾಣಬದ್ಧ I ಏಳ್ಮಡಿ ಪುಟಕ್ಕಿಟ್ಟ ಬೆಳ್ಳಿಯಷ್ಟು ಶುದ್ಧ II
7 : ಅಲೆದಾಡುತಿಹರು ದುರುಳ ದ್ರೋಹಿಗಳು ಎಲ್ಲೆಡೆ I ದುಷ್ಟರಿಗಿದೆ ಮಾನವರ ನಡುವೆ ಪ್ರತಿಷ್ಟೆ II ನಮ್ಮನಿವರ ಕೈಯಿಂದ ತಪ್ಪಿಸಿ ಕಾಪಾಡು I ಹೇ ಪ್ರಭು, ನಮ್ಮನು ಸದಾ ಸುರಕ್ಷಿತವಾಗಿಡು II
8 : ಅಲೆದಾಡುತಿಹರು ದುರುಳ ದ್ರೋಹಿಗಳು ಎಲ್ಲೆಡೆ I ದುಷ್ಟರಿಗಿದೆ ಮಾನವರ ನಡುವೆ ಪ್ರತಿಷ್ಟೆ II ನಮ್ಮನಿವರ ಕೈಯಿಂದ ತಪ್ಪಿಸಿ ಕಾಪಾಡು I ಹೇ ಪ್ರಭು, ನಮ್ಮನು ಸದಾ ಸುರಕ್ಷಿತವಾಗಿಡು II