வேதாகமம்
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
25ನೇ ಅಧ್ಯಾಯ
1 : ದಾವೀದನು ಹಾಗೂ ಆರಾಧಕ ಮಂಡಲಿಯ ಮುಖ್ಯಸ್ಥರು ಕಿನ್ನರಿ, ಸ್ವರಮಂಡಲ, ತಾಳ ಇವುಗಳನ್ನು ಬಾರಿಸುತ್ತಾ, ಪರವಶರಾಗಿ ಗಾಯನ ಸೇವೆ ಮಾಡುವುದಕ್ಕಾಗಿ ಆಸಾಫ್ಯರನ್ನೂ ಹೇಮಾನ್ಯರನ್ನೂ ಯೆದುತೂನ್ಯರನ್ನೂ ಆರಿಸಿದರು. ಈ ಸೇವೆಯನ್ನು ಮಾಡಬೇಕಾಗಿದ್ದ ಪುರುಷರ ಪಟ್ಟಿ:
2 : ಆಸಾಫ್ಯರಲ್ಲಿ ಜಕ್ಕೂರ್, ಜೋಸೆಫ್, ನೆತನ್ಯ, ಅಶರೇಲ ಎಂಬವರು. ಇವರು ಆಸ್ಥಾನದ ಗಾಯಕ ಆಸಾಫನ ಸಹಾಯಕರು.
3 : ಯೆದುತೂನ್ಯರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಇವರು ಕಿನ್ನರಿಯನ್ನು ಬಾರಿಸುತ್ತಾ ಪರವಶರಾಗಿ, ಸರ್ವೇಶ್ವರನ ಕೀರ್ತನೆ ಮಾಡುವ ತಮ್ಮ ತಂದೆಯಾದ ಯೆದುತೂನನಿಗೆ ಈ ಆರು ಮಂದಿ ಸಹಾಯಕರು.
4 : ಹೇಮಾನ್ಯರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂವೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತೀ, ಹೋತೀರ್, ಮಹಜೀಯೋತ್,
5 : ಇವರೆಲ್ಲರೂ ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಅವನಿಗೆ, “ನೀನು ಅಭಿವೃದ್ಧಿಯಾಗುವ ಹಾಗೆ ಮಾಡುವೆನು,” ಎಂಬುದಾಗಿ ವಾಗ್ದಾನ ಮಾಡಿದ್ದರು. ಅದರಂತೆಯೇ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳನ್ನೂ ಮೂರು ಮಂದಿ ಹೆಣ್ಣುಮಕ್ಕಳನ್ನೂ ದಯಪಾಲಿಸಿದರು.
6 : ದೇವರಾದ ಸರ್ವೇಶ್ವರನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಆಸಾಫ್, ಯೆದುತೂನ್, ಹೇಮಾನರು ಅರಸನ ಸೇವೆಯಲ್ಲಿದ್ದರು.
7 : ಇವರೂ ಸರ್ವೇಶ್ವರನ ಕೀರ್ತನೆಗಳನ್ನು ಕಲಿತ ಇವರ ಸಹೋದರರೂ ಒಟ್ಟು ಇನ್ನೂರ ಎಂಬತ್ತೆಂಟು ಮಂದಿ ಗಾಯನಪ್ರವೀಣರು ಇದ್ದರು.
8 : ಇವರಲ್ಲಿ ಹಿರಿಕಿರಿಯರೂ ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾಕ್ರಮವನ್ನು ಗೊತ್ತುಮಾಡಿಕೊಳ್ಳುತ್ತಿದ್ದರು. ಈ ಚೀಟಿನ ಪ್ರಕಾರ ಇನ್ನೂರ ಎಂಬತ್ತೆಂಟು ಮಂದಿ ಸದಸ್ಯರು ಇಪ್ಪತ್ತನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದರು. ಪ್ರತಿಯೊಂದು ಗುಂಪಿಗೆ ಒಬ್ಬ ನಾಯಕನು, ಅವನ ಸಹೋದರರು ಹಾಗೂ ಮಕ್ಕಳು ಕೂಡಿ ಹನ್ನೆರಡು ಮಂದಿ ಸದಸ್ಯರು ಇದ್ದರು. ಕ್ರಮಾನುಸಾರ ಇಪ್ಪತ್ತನಾಲ್ಕು ನಾಯಕರ ಹೆಸರುಗಳು ಇವು:
9 : ಮೊದಲನೆಯವನು ಆಸಾಫ್ಯನಾದ ಜೋಸೆಫನು; ಎರಡನೆಯವನು ಗೆದಲ್ಯ
29 : ಇಪ್ಪತ್ತೆರಡನೆಯವನು ಗಿದ್ದಲ್ತಿ