पवित्र बाइबिल
ಹಳೆಯ ಒಡಂಬಡಿಕೆ
ನೆಹೆಮೀಯ
11ನೇ ಅಧ್ಯಾಯ
- Verse 1: ಇಸ್ರಯೇಲರ ಪ್ರಮುಖರು ಮಾತ್ರ ಜೆರುಸಲೇಮಿನಲ್ಲಿ ವಾಸಿಸುತ್ತಿದ್ದರು. ಉಳಿದ ಜನರೊಳಗೆ ಹತ್ತುಹತ್ತು ಮಂದಿಯಲ್ಲಿ ಒಂಬತ್ತುಮಂದಿ ತಮ್ಮ ತಮ್ಮ ಊರುಗಳಲ್ಲಿ ಇದ್ದುಕೊಂಡು, ಒಬ್ಬನು ಪವಿತ್ರ ನಗರವಾದ ಜೆರುಸಲೇಮಿನಲ್ಲಿ ವಾಸಿಸುವುದಕ್ಕಾಗಿ, ಅಲ್ಲಿಗೆ ಬರುವಂತೆ ಚೀಟುಹಾಕಿ ಗೊತ್ತುಮಾಡಿದರು.
- Verse 2: ಮತ್ತು ಸ್ವಂತ ಇಚ್ಛೆಯಿಂದ ಜೆರುಸಲೇಮಿನಲ್ಲಿ ವಾಸಿಸುವುದಕ್ಕೆ ಮನಸ್ಸು ಮಾಡಿದಂಥವರನ್ನು ಜನರು ಆಶೀರ್ವದಿಸಿದರು.
- Verse 3: ಯೆಹೂದ ಕುಲದವರಲ್ಲಿ - ಒಬ್ಬನು ಅತಾಯ; ಇವನು ಉಜ್ಜೀಯನ ಮಗ; ಇವನು ಜೆಕರ್ಯನ ಮಗ; ಇವನು ಅಮರ್ಯನ ಮಗ; ಇವನು ಶೆಫಟ್ಯನ ಮಗ; ಇವನು ಮಹಲಲೇಲನ ಮಗ; ಇವನು ಪೆರೆಚ್ ಸಂತಾನದವನು.
- Verse 4: ಯೆಹೂದ ಕುಲದವರಲ್ಲಿ - ಒಬ್ಬನು ಅತಾಯ; ಇವನು ಉಜ್ಜೀಯನ ಮಗ; ಇವನು ಜೆಕರ್ಯನ ಮಗ; ಇವನು ಅಮರ್ಯನ ಮಗ; ಇವನು ಶೆಫಟ್ಯನ ಮಗ; ಇವನು ಮಹಲಲೇಲನ ಮಗ; ಇವನು ಪೆರೆಚ್ ಸಂತಾನದವನು.
- Verse 5: ಇನ್ನೊಬ್ಬನು ಮಾಸೇಯ; ಇವನು ಬಾರೂಕನ ಮಗ; ಇವನು ಕೊಲ್ಹೋಜೆಯ ಮಗ; ಇವನು ಹಜಾಯನ ಮಗ; ಇವನು ಆದಾಯನ ಮಗ; ಇವನು ಯೋಯಾರೀಬನ ಮಗ; ಇವನು ಜೆಕರ್ಯನ ಮಗ; ಇವನು ಶೇಲಹನ ಸಂತಾನದವನು.
- Verse 6: ಜೆರುಸಲೇಮಿನಲ್ಲಿ ವಾಸಿಸುತ್ತಿದ್ದ ಪೆರೆಚ್ ಸಂತಾನದ ರಣವೀರರು ನಾನೂರ ಅರವತ್ತೆಂಟು ಮಂದಿ
- Verse 7: ಬೆನ್ಯಾಮೀನ್ ಕುಲದವರಲ್ಲಿ - ಸಲ್ಲು; ಇವನು ಮೆಷುಲ್ಲಾಮನ ಮಗ; ಇವನು ಯೋವೇದನ ಮಗ; ಇವನು ಪೆದಾಯನ ಮಗ; ಇವನು ಕೋಲಾಯನ ಮಗ; ಇವನು ಮಾಸೇಯನ ಮಗ; ಇವನು ಈತೀಯೇಲನ ಮಗ; ಇವನು ಯೆಶಾಯನ ಮಗ.
- Verse 8: ರಣವೀರರಾದ ಇವನ ಬಂಧುಜನರು ಒಂಬೈನೂರಿಪ್ಪತ್ತೆಂಟು ಮಂದಿ.
- Verse 9: ಜೆಕ್ರಿಯ ಮಗನಾದ ಯೋವೇಲನು ಇವರ ನಾಯಕ; ಹಸ್ಸೆನೂವನ ಮಗನಾದ ಯೆಹೂದನು ಎರಡನೆಯ ಪುರಾಧಿಕಾರಿ.
- Verse 10: ಯಾಜಕರಲ್ಲಿ - ಯೆದಾಯ, ಯೋಯಾರೀಬ್, ಯಾಕೀನ್, ಅಹೀಟೂಬನ
- Verse 11: ಸಂತಾನದವನಾದ ಮೆರಾಯೋತನಿಂದ ಹುಟ್ಟಿದ ಚಾದೋಕನ ಮರಿಮಗನೂ ಮೆಷುಲ್ಲಾಮನ ಮೊಮ್ಮಗನೂ ಹಿಲ್ಕೀಯನ ಮಗನೂ ದೇವಾಲಯದ ಅಧಿಪತಿಯೂ ಆದ ಸೆರಾಯ, ಇವರು.
- Verse 12: ಇವರೂ ದೇವಾಲಯದ ಸೇವೆ ನಡೆಸುತ್ತಿದ್ದ ಇವರ ಬಂಧುಗಳೂ ಎಂಟುನೂರಿಪ್ಪತ್ತ ಎರಡು ಮಂದಿ. ಇವರಲ್ಲದೆ ಅದಾಯನೆಂಬವನು ಇನ್ನೊಬ್ಬನು. ಇವನು ಯೆರೋಹಾಮನ ಮಗ; ಇವನು ಪೆಲಲ್ಯನ ಮಗ; ಇವನು ಅಮ್ಚೀಯ ಮಗ; ಇವನು ಜೆಕರ್ಯನ ಮಗ; ಇವನು ಪಷ್ಹೂರನ ಮಗ; ಇವನು ಮಲ್ಕೀಯನ ಮಗ.
- Verse 13: ಗೋತ್ರಪ್ರಧಾನರಾದ ಈ ಅದಾಯನ ಬಂಧುಗಳು ಇನ್ನೂರ ನಾಲ್ವತ್ತೆರಡು ಮಂದಿ. ಅಮಷ್ಷೈ ಎಂಬುವನು ಮತ್ತೊಬ್ಬನು. ಇವನು ಅಜರೇಲನ ಮಗ; ಇವನು ಅಹಜೈಯ ಮಗ; ಇವನು ಮೆಷಿಲ್ಲೇಮೋತನ ಮಗ; ಇವನು ಇಮ್ಮೇರನ ಮಗ;
- Verse 14: ರಣವೀರರಾಗಿದ್ದ ಈ ಅಮಷ್ಷೈಯ ಬಂಧುಗಳು ನೂರಿಪ್ಪತ್ತೆಂಟು ಮಂದಿ. ಹಗ್ಗೆದೋಲೀಮನ ಮಗನಾದ ಜಬ್ದೀಯೇಲನು ಇವರ ನಾಯಕ.
- Verse 15: ಲೇವಿಯರಲ್ಲಿ - ಹಷ್ಷೂಬನ ಮಗನೂ ಅಜ್ರೀಕಾಮನ ಮೊಮ್ಮಗನೂ ಹಷಬ್ಯನ ಮರಿಮಗನೂ ಬುನ್ನೀ ವಂಶದವನೂ ಆದ ಶೆಮಾಯನು;
- Verse 16: ಲೇವಿ ಗೋತ್ರಪ್ರಧಾನರಲ್ಲಿ ದೇವಾಲಯದ ಲೌಕಿಕ ಕಾರ್ಯಗಳ ಮೇಲ್ವಿಚಾರಕರಾದ ಶಬ್ಬೆತೈ, ಯೋಜಾಬಾದ್ ಎಂಬವರು;
- Verse 17: ಮೀಕನ ಮಗ ಜಬ್ದೀಯ ಮೊಮ್ಮಗ, ಆಸಾಫನ ಮರಿಮಗ ಪ್ರಾರ್ಥನಾ ಸಮಯದಲ್ಲಿ ಕೃತಜ್ಞತಾ ಸ್ತುತಿಮಾಡಿರಿ ಎಂದು ಹೇಳಿ ಭಜಕರನ್ನು ನಡೆಸುತ್ತಿದ್ದ ಮತ್ತನ್ಯ, ತನ್ನ ಬಂಧುಗಳಲ್ಲಿ ದ್ವಿತೀಯ ಸ್ಥಾನದವನಾದ ಬಕ್ಬುಕ್ಯ, ಶಮ್ಮೂವನ ಮಗನು; ಗಾಲಾಲನ ಮೊಮ್ಮಗನು, ಯೆದೂತೂನನ ಮರಿಮಗನು ಆದ ಅಬ್ದ ಎಂಬವರು.
- Verse 18: ಪರಿಶುದ್ಧ ನಗರದಲ್ಲಿದ್ದ ಎಲ್ಲ ಲೇವಿಯರು ಇನ್ನೂರ ಎಂಬತ್ತನಾಲ್ಕುಮಂದಿ.
- Verse 19: ದ್ವಾರಪಾಲಕರಲ್ಲಿ - ಅಕ್ಕೂಬ್ ಟಲ್ಮೋನರೂ ಬಾಗಿಲುಗಳನ್ನು ಕಾಯುತ್ತಿದ್ದ ಇವರ ಬಂಧುಗಳೂ; ಒಟ್ಟು ನೂರೆಪ್ಪತ್ತೆರಡು ಮಂದಿ.
- Verse 20: ಉಳಿದ ಇಸ್ರಯೇಲರು, ಯಾಜಕರು ಹಾಗು ಲೇವಿಯರು ತಮ್ಮ ತಮ್ಮ ಸೊತ್ತುಗಳಿದ್ದ ಜುದೇಯದ ಎಲ್ಲ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.
- Verse 21: ದೇವಸ್ಥಾನದ ದಾಸರು ಓಪೇಲ್ ಗುಡ್ಡದಲ್ಲಿ ವಾಸಿಸುತ್ತಿದ್ದರು. ಚೀಹ, ಗಿಷ್ಟ ಎಂಬವರು ಇವರ ನಾಯಕರು.
- Verse 22: ದೇವಾಲಯ ಸೇವಾಸಂಬಂಧದಲ್ಲಿ ಗಾಯಕರಾದ ಆಸಾಫ್ಯರಿಗೆ ಸೇರಿದ ಬಾನೀಯ ಮಗನೂ ಹಷಬ್ಯನ ಮೊಮ್ಮಗನೂ ಮತ್ತನ್ಯನ ಮರಿಮಗನೂ ಮೀಕನ ವಂಶದವನೂ ಆದ ಉಜ್ಜೀಯು ಜೆರುಸಲೇಮಿನಲ್ಲಿದ್ದ ಲೇವಿಯರ ನಾಯಕನು.
- Verse 23: ಇವರ ಮತ್ತು ಗಾಯಕರ ಅನುದಿನದ ಕರ್ತವ್ಯಾಂಶಗಳ ವಿಷಯವಾಗಿ ರಾಜನಿಯಮವಿತ್ತು.
- Verse 24: ಮೆಷೇಜಬೇಲನ ಮಗನೂ ಜೆರಹನ ಸಂತಾನದವನೂ ಯೆಹೂದ ಕುಲದವನೂ ಆದ ಪೆತಹ್ಯನು ಪ್ರಜೆಗಳ ಎಲ್ಲ ಕಾರ್ಯಗಳ ಸಂಬಂಧದಲ್ಲಿ ರಾಜನ ಕಾರಭಾರಿಯಾಗಿದ್ದನು.
- Verse 25: ಹೊಲಗದ್ದೆಗಳಿದ್ದವರು ವಾಸಿಸುತ್ತಿದ್ದ ಊರುಗಳು - ಕಿರ್ಯತರ್ಬ, ದೀಬೋನ್, ಯೆಕಬ್ಜೆಯೇಲ್, ಇವುಗಳೂ ಇವುಗಳ ಗ್ರಾಮಗಳೂ;
- Verse 26: ಯೇಷೂವ, ಮೋಲಾದ,
- Verse 27: ಬೇತ್ಪೆಲೆಟ್, ಹಚರ್ಷೂವಲ್ ಇವುಗಳೂ ಬೇರ್ಷೆಬವೂ ಅದರ ಗ್ರಾಮಗಳೂ;
- Verse 28: ಚಿಕ್ಲಗ್ ಊರೂ ಮೆಕೋನವೂ ಅದರ ಗ್ರಾಮಗಳೂ;
- Verse 29: ಏನ್ರಿಮ್ಮೋನ್, ಚೊರ್ರ,
- Verse 30: ಯರ್ಮೂತ್ ಇವುಗಳೂ ಇವುಗಳ ಗ್ರಾಮಗಳೂ, ಲಾಕೀಷ್ ಊರೂ ಇದರ ಪ್ರಾಂತ್ಯಗಳೂ, ಅಜೇಕವೂ ಅದರ ಗ್ರಾಮಗಳೂ; ಇವು ಯೆಹೂದ ಕುಲದವರ ನಿವಾಸಸ್ಥಾನಗಳು. ಅವರು ಬೇರ್ಷೆಬದಿಂದ ಹಿನ್ನೋಮ್ ಕಣಿವೆಯವರೆಗೂ ವಾಸಿಸುತ್ತಿದ್ದರು.
- Verse 31: ಗೆಬ, ಮಿಕ್ಮಾಷ್, ಅಯ್ಯಾ, ಗ್ರಾಮಸಹಿತವಾದ ಬೇತೇಲ್ ಎಂಬ ಊರುಗಳು;
- Verse 32: ಅನಾತೋತ್, ನೋಬ್,
- Verse 33: ಅನನ್ಯ, ಹಾಜೋರ್, ರಾಮಾ, ಗಿತ್ತಯೆಮ್,
- Verse 34: ಹಾದೀದ್, ಚೆಬೋಯೀಮ್, ನೆಬಲ್ಲಾಟ್, ಲೋದ್,
- Verse 35: ಓನೋ, ಗೇಹರಾಷೀಮ್ ಎಂಬ ಊರುಗಳು, ಇವು ಬೆನ್ಯಾಮೀನ್ ಕುಲದವರ ನಿವಾಸಸ್ಥಾನಗಳು.
- Verse 36: ಲೇವಿಯರಲ್ಲಿ ಕೆಲವು ವರ್ಗಗಳವರು ಯೆಹೂದ್ಯರಲ್ಲಿ, ಕೆಲವರು ಬೆನ್ಯಾಮೀನ್ಯರಲ್ಲಿ, ವಾಸಿಸುತ್ತಿದ್ದರು.