P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
11ನೇ ಅಧ್ಯಾಯ
1 : ನಾನು ಆಶ್ರಯಿಸಿಕೊಂಡಿರಲು ಪ್ರಭುವನು I ನೀವು ಹೇಳುವುದೆಂತು ನನಗೀ ಮಾತನು: II
2 : “ನೇರ ಮನಸ್ಕರನು ಕೊಲ್ಲಲು ಇರುಳೊಳು I ಬಿಲ್ಲು ಬಗ್ಗಿಸಿಹರಿದೋ ಆ ದುರುಳರು I ಎದೆಗೆ ಬಾಣವನು ಹೂಡಿ ನಿಂತಿರುವರು” II “ಓಡಿರಿ, ಪಕ್ಷಿಪಾರಿವಾಳಗಳಂತೆ ಗಿರಿಶಿಖರಗಳಿಗೆ I ಅಸ್ತಿವಾರವೆ ಕಿತ್ತಿರಲು, ಗತಿಯೆನಿತು ಸತ್ಯವಂತರಿಗೆ?” II
3 : “ನೇರ ಮನಸ್ಕರನು ಕೊಲ್ಲಲು ಇರುಳೊಳು I ಬಿಲ್ಲು ಬಗ್ಗಿಸಿಹರಿದೋ ಆ ದುರುಳರು I ಎದೆಗೆ ಬಾಣವನು ಹೂಡಿ ನಿಂತಿರುವರು” II “ಓಡಿರಿ, ಪಕ್ಷಿಪಾರಿವಾಳಗಳಂತೆ ಗಿರಿಶಿಖರಗಳಿಗೆ I ಅಸ್ತಿವಾರವೆ ಕಿತ್ತಿರಲು, ಗತಿಯೆನಿತು ಸತ್ಯವಂತರಿಗೆ?” II
4 : ಪ್ರಭು ಪ್ರಸನ್ನವಿರುವನು ಪವಿತ್ರಾಲಯದಲಿ I ಸ್ಥಾಪಿಸಿಹನು ಸಿಂಹಾಸನವನು ಪರದಲಿ I ನರಮಾನವರನು ನೋಡುತಿಹನು ನೇತ್ರಗಳಲಿ I ಪರೀಕ್ಷಿಸುತಿಹನು ಅವರನು ಸೂಕ್ಷ್ಮರೀತಿಯಲಿ II
5 : ಪರೀಕ್ಷಿಸುವನು ಪ್ರಭು ಸಜ್ಜನ ದುರ್ಜನರನು I ದ್ವೇಷಿಸುವನು ಮನಸಾರೆ ಹಿಂಸಾತ್ಮಕರನು II
6 : ಅಗ್ನಿಗಂಧಕಗಳನು ದುರುಳರ ಮೇಲೆ ಮಳೆಗರೆಯಲಿ I ಉರಿಗಾಳಿಯೆ ಅವರ ಪಾಲಿನ ಧೂಮಪಾನವಾಗಲಿ II
7 : ಸತ್ಯಸ್ವರೂಪನಾದ ಪ್ರಭು ಸತ್ಯ ಪ್ರಿಯನು I ಸತ್ಪುರುಷನು ಸೇರುವನು ಆತನ ಸನ್ನಿಧಿಯನು II