पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
129ನೇ ಅಧ್ಯಾಯ
- Verse 1: ಯೌವನಾರಭ್ಯ ಶತ್ರುಕಾಡಿದ್ದು ಎಂತೆಂದು I ಇಸ್ರಯೇಲ್ ಜನಾಂಗ ವರದಿ ಮಾಡಲಿ ನಮಗಿಂದು II
- Verse 2: ಯೌವನಾರಭ್ಯ ನನ್ನನು ಎನಿತೋ ಬಾಧಿಸಿಹರು I ನನ್ನ ಮೇಲಾದರೋ ಜಯಗಳಿಸಲಿಲ್ಲ ಅವರು II
- Verse 3: ಉಳುವವರು ಎನ್ನ ಬೆನ್ನನೆ ಉತ್ತಿರುವರು I ಆಳವಾದ ಗಾಯಗೆರೆಗಳನ್ನು ಮಾಡಿಹರು II
- Verse 4: ನಮ್ಮ ಪ್ರಭುವಾದರೋ ಸತ್ಯಸ್ವರೂಪನು I ಕಡಿದಿಹನು ದುರುಳರು ಹಾಕಿದ ಕಟ್ಟುಗಳನು II
- Verse 5: ಸಿಯೋನನ್ನು ದ್ವೇಷಿಸುವ ಜನ I ಹಿಂದಿರುಗಲಿ ಪಡೆದು ಅಪಮಾನ II
- Verse 6: ಅವರಾಗಲಿ ಮಾಳಿಗೆ ಮೇಲಿನ ಹುಲ್ಲಿನಂತೆ I ಒಣಗಿಹೋಗುವುದದು ಹೂ ಬಿಡುವುದಕ್ಕೆ ಮುಂಚೆ II
- Verse 7: ತುಂಬುವುದಿಲ್ಲಾ ಕೊಯ್ಯುವವನ ಹಿಡಿಯು I ಅದರ ಸಿವುಡು ಕಟ್ಟುವವನಾ ಮಡಿಲು II
- Verse 8: ‘ಪ್ರಭು ನಿನ್ನನು ಆಶೀರ್ವದಿಸಲಿ’ ಎಂಬ ಮಾತನ್ನಾಗಲಿ I ‘ಪ್ರಭು ನಾಮದಲಿ ನಿನಗೆ ಶುಭ’ ಎಂದಾಗಲಿ I ಹಾದುಹೋಗುವ ಜನಜಂಗುಳಿ ಅವರಿಗೆ ಹೇಳದಿರಲಿ” II