P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
137ನೇ ಅಧ್ಯಾಯ
1 : ಬಾಬಿಲೋನಿನ ನದಿಗಳ ತೀರದಲಿ ಕುಳಿತು I ಅತ್ತು ಪ್ರಲಾಪಿಸಿದೆವು ಸಿಯೋನನ್ನು ನೆನೆದು II
2 : ಆ ನಾಡಿನಲಿ ಕಿನ್ನರಿಗಳನ್ನೆ ತೂಗುಹಾಕಿದೆವು I ನೀರವಂಜಿ ಮರಗಳಿಗೆ ಅವನ್ನು ನೇತುಹಾಕಿದೆವು II
3 : ಸೆರೆಹಿಡಿದು ಬಂಧಿಸಿದಾ ಜನ ಈ ಪರಿ ಪೀಡಿಸಿದರೆಮ್ಮನು: I “ಹಾಡಿ, ನಮ್ಮ ವಿನೋದಕ್ಕಾಗಿ ಸಿಯೋನಿನ ಗೀತೆಗಳಲೊಂದನು” II
4 : ಪ್ರಭುಗೀತೆಗಳ ನಾವು ಗಾನ ಮಾಡುವುದೆಂತು I ಅನ್ಯನಾಡಿನೊಳು ಅವುಗಳನು ಹಾಡುವುದೆಂತು II
5 : ಜೆರುಸಲೇಮ್, ನಾನು ನಿನ್ನ ಮರೆತಲ್ಲಿ I ನನ್ನ ಬಲಹಸ್ತ ಬತ್ತಿಹೋಗಿಬಿಡಲಿ II
6 : ಜೆರುಸಲೇಮನು ನಾ ಸ್ಮರಣೆಮಾಡದಿದ್ದಲ್ಲಿ I ಆ ಸ್ಮರಣೆ ಸರ್ವೋತ್ತಮ ನಲಿವು ನನಗಾಗದಿದ್ದಲ್ಲಿ I ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ II
7 : ನೆನೆಸಿಕೊ ಪ್ರಭು, ಜೆರುಸಲೇಮಿನ ನಾಶನದಿನ ಅವರಾಡಿದ್ದನು: I “ಕೆಡವಿ ನೆಲಕೆ, ಬುಡಸಹಿತ ಕೆಡವಿ” ಎಂದಾ ಅಧಮ ಎದೋಮ್ಯರನು II
8 : ಬಾಬಿಲೋನ್ ನಗರವೇ ಕೇಳು : ಅಳಿವು ಕಾದಿದೆ ನಿನಗೆ I ಭಲೆ, ನೀನೆಮಗೆ ಮಾಡಿದ್ದಕ್ಕೆ ಮುಯ್ ತೀರಿಸುವವಗೆ I ನಿನ್ನ ಮಕ್ಕಳನೆತ್ತಿ ಬಂಡೆಗಪ್ಪಳಿಸುವವನಿಗೆ II
9 : ಬಾಬಿಲೋನ್ ನಗರವೇ ಕೇಳು : ಅಳಿವು ಕಾದಿದೆ ನಿನಗೆ I ಭಲೆ, ನೀನೆಮಗೆ ಮಾಡಿದ್ದಕ್ಕೆ ಮುಯ್ ತೀರಿಸುವವಗೆ I ನಿನ್ನ ಮಕ್ಕಳನೆತ್ತಿ ಬಂಡೆಗಪ್ಪಳಿಸುವವನಿಗೆ II