ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
70ನೇ ಅಧ್ಯಾಯ
- Verse 1: ಕರುಣೆಯಿಂದೆನ್ನನು ದೇವಾ, ರಕ್ಷಿಸು I ತ್ವರೆಯಾಗಿ ಬಂದು ಪ್ರಭು, ಉದ್ಧರಿಸು II
- Verse 2: ಪಡಲಿ ಮಾನಭಂಗ ನನ್ನ ಹತ್ಯವನು ಕೋರುವವರು I ನಾಚಿ ಓಡಲಿ ಹಿಂದಕೆ ನನಗಾಪತ್ತನು ಬಯಸುವವರು I
- Verse 3: “ಆಹಾಹಾ” ಎಂದೆನ್ನ ಜರೆಯುವವರು I ಬೆಂಗೊಟ್ಟು ಓಡಲಿ ಆ ಲಜ್ಜೆಗೆಟ್ಟವರು II
- Verse 4: ನಿನ್ನ ದರ್ಶನಾರ್ಥಿಗಳು ಹರ್ಷಿಸಲಿ, ನಿನ್ನಲಿ ನಲಿದು ಆನಂದಿಸಲಿ I ನಿನ್ನ ಉದ್ಧಾರಕ ಶಕ್ತಿ ಪ್ರಿಯರು ಸತತ “ದೇವನಿಗೆ ಉಘೇ” ಎನ್ನಲಿ II
- Verse 5: ದೇವಾ, ನಾ ದಿಕ್ಕಿಲ್ಲದವನು, ಕುಗ್ಗಿದವನು, ನನ್ನ ಬಳಿಗೆ ಬಾ I ನೀನೆನಗೆ ಸಹಾಯಕನು, ರಕ್ಷಕನು ಪ್ರಭು, ತಡಮಾಡದೆ ಬಾ II