పరిశుద్ధ గ్రంథము
ಹಳೆಯ ಒಡಂಬಡಿಕೆ
ಯೆಹೋಶುವ
15ನೇ ಅಧ್ಯಾಯ
1 : ಎದೋಮ್ ನಾಡು ಹಾಗೂ ಚಿನ್ ಮರುಭೂಮಿಯ ಎಲ್ಲೆಯಾಗಿರುವ ಕಾನಾನ್ ನಾಡಿನ ದಕ್ಷಿಣ ಭಾಗವು ಯೆಹೂದ ಕುಲದ ಗೋತ್ರಗಳಿಗೆ ದೊರಕಿದ ಸೊತ್ತು.
2 : ಅದರ ದಕ್ಷಿಣದ ಎಲ್ಲೆ, ಲವಣ ಸಮುದ್ರದ ತೆಂಕಣ ತುದಿಯಿಂದ ತೊಡಗಿ
3 : ಅಕ್ರಬ್ಬೀಮ್ ಎಂಬ ಕೊಲ್ಲಿಯ ದಕ್ಷಿಣ ಮಾರ್ಗವಾಗಿ ಚಿನ್ ಗೆ ಹೋಗುತ್ತದೆ.
4 : ಅಲ್ಲಿಂದ ಕಾದೇಶ್ ಬರ್ನೇಯದ ದಕ್ಷಿಣ ಮಾರ್ಗವಾಗಿ ಹೆಚ್ರೋನಿಗೂ ಅಲ್ಲಿಂದ ಏರುತ್ತಾ ಅದ್ದಾರಿಗೂ ಹೋಗಿ ಕರ್ಕದ ಕಡೆಗೆ ತಿರುಗಿಕೊಳ್ಳುತ್ತದೆ. ಅಚ್ಮೋನಿನ ಮೇಲೆ ಈಜಿಪ್ಟಿನ ನದಿಗೆ ಬಂದು ಸಮುದ್ರತೀರದಲ್ಲಿ ಮುಕ್ತಾಯಗೊಳ್ಳುತ್ತದೆ. ಇದು ಅದರ ತೆಂಕಣ ಎಲ್ಲೆ.
5 : ಜೋರ್ಡನ್ ನದಿಯ ಮುಖದಿಂದ ಲವಣಸಮುದ್ರವೆಲ್ಲ ಅದರ ಪೂರ್ವದಿಕ್ಕಿನ ಎಲ್ಲೆ ಆಗಿದೆ.
6 : ಅದರ ಉತ್ತರ ದಿಕ್ಕಿನ ಎಲ್ಲೆ ಜೋರ್ಡನ್ ನದಿಯು ಲವಣಸಮುದ್ರವನ್ನು ಕೂಡುವ ಸ್ಥಳದಿಂದ ತೊಡಗಿ ಬೇತ್ ಹೊಗ್ಲಾ, ಬೇತ್ ಅರಾಬದ ಉತ್ತರ ಪ್ರಾಂತ್ಯ, ರೂಬೇನನ ಮಗ ಬೋಹನನ ಬಂಡೆ, ಆಕೋರಿನ ಕಣಿವೆ
7 : ಇವುಗಳ ಮೇಲೆ ದೆಬೀರಿಗೆ ಹೋಗುತ್ತದೆ. ಅದು ಅಲ್ಲಿಂದ ಉತ್ತರಕ್ಕೆ ತಿರುಗಿಕೊಂಡು ನದಿಯ ದಕ್ಷಿಣದಲ್ಲಿರುವ ಅದುಮೀಮಿಗೆ ಹೋಗುವ ದಾರಿಯ ಎದುರಿನಲ್ಲಿರುವ ಗಿಲ್ಗಾಲ್, ಏನ್ ಷೆಮೆಷ್ ಎನ್ನುವ ಬುಗ್ಗೆ, ಏನ್ ರೋಗೆಲ್ ಇವುಗಳ ಮೇಲೆ
8 : ಬೆನ್ ಹಿನ್ನೋಮನ ಕಣಿವೆಗೆ ಹೊಗುತ್ತದೆ. ಅಲ್ಲಿಂದ ಅದು ಜೆರುಸಲೇಮ್ ನಗರವು ಕಟ್ಟಲ್ಪಟ್ಟಿರುವ ಯೆಬೂಸಿಯರ ಬೆಟ್ಟದ ದಕ್ಷಿಣ ಮಾರ್ಗವಾಗಿ ಹಿನ್ನೋಮ್ ಕಣಿವೆಯ ಪಶ್ಚಿಮದಲ್ಲೂ ರೆಫಾಯೀಮ್ ಕಣಿವೆಯ ಉತ್ತರದಲ್ಲೂ ಇರುವ ಬೆಟ್ಟದ ತುದಿಗೆ ಹೋಗುತ್ತದೆ.
9 : ಅದು ಆ ಬೆಟ್ಟದ ತುದಿಯಿಂದ ಮುಂದೆ ನೆಪ್ತೋಹ ಬುಗ್ಗೆ, ಎಫ್ರೋನ್ ಬೆಟ್ಟದ ನಗರಗಳು ಇವುಗಳ ಮೇಲೆ ಕಿರ್ಯತ್ಯಾರೀಮ್ ಎನಿಸಿಕೊಳ್ಳುವ ಬಾಲಾ ಎಂಬ ಊರಿಗೆ ಹೋಗುತ್ತದೆ.
10 : ಅಲ್ಲಿಂದ ಪಶ್ಚಿಮದಲ್ಲಿ ಇರುವ ಸೇಯಿರ್ ಬೆಟ್ಟದ ಕಡೆಗೆ ತಿರುಗಿಕೊಂಡು ಕೆಸಾಲೋನ್ ಎನಿಸಿಕೊಳ್ಳುವ ಯಾರೀಮ್ ಬೆಟ್ಟದ ಉತ್ತರಮಾರ್ಗವಾಗಿ ಇಳಿಯುತ್ತಾ ಬೇತ್ ಷೆಮೆಷಿಗೂ ಅಲ್ಲಿಂದ ತಿಮ್ನಾ ಊರಿಗೂ ಬಂದು
11 : ಅಲ್ಲಿಂದ ಉತ್ತರ ದಿಕ್ಕಿನಲ್ಲಿರುವ ಎಕ್ರೋನ್ ಗುಡ್ಡಕ್ಕೆ ಹೋಗಿ ಶಿಕ್ಕೆರೋನಿಗೆ ತಿರುಗಿಕೊಂಡು ಬಾಲಾಗುಡ್ಡದ ಮೇಲೆ ಯೆಬ್ನೇಲಿಗೆ ಹೋಗಿ ಸಮುದ್ರ ತೀರದಲ್ಲಿ ಮುಗಿಯುತ್ತದೆ.
12 : ಮಹಾಸಾಗರದ ತೀರವೇ ಪಶ್ಚಿಮ ಎಲ್ಲೆ, ಯೆಹೂದ ಗೋತ್ರಗಳ ನಾಡಿನ ಸುತ್ತಣ ಎಲ್ಲೆಗಳು ಇವೇ.
13 : ಯೆಹೋಶುವನು ಸರ್ವೇಶ್ವರನ ಅಪ್ಪಣೆಯಂತೆ ಯೆಫುನ್ನೆಯ ಮಗ ಕಾಲೇಬನಿಗೆ ಯೆಹೂದ ಕುಲದವರ ನಡುವೆ ಅನಾಕನ ತಂದೆ ಆದ ಅರ್ಬನ ನಗರವಾಗಿದ್ದ ಹೆಬ್ರೋನನ್ನು ಕೊಟ್ಟನು.
14 : ಕಾಲೇಬನು ಶೇಷೈ, ಅಹೀಮನ್, ತಲ್ಮೈ ಎಂಬ ಅನಾಕನ ಮೂರು ಮಂದಿ ಮಕ್ಕಳನ್ನು ಅಲ್ಲಿಂದ ಹೊರಡಿಸಿಬಿಟ್ಟನು.
15 : ಅನಂತರ ಅವನು ಹೊರಟು ಕಿರ್ಯತ್ ಸೇಫೆರ್ ಎನ್ನಿಸಿಕೊಳ್ಳುತ್ತಿದ್ದ ದೆಬೀರಿನ ನಿವಾಸಿಗಳೊಡನೆ ಯುದ್ಧಮಾಡಿದನು.
16 : ಅವನು, “ಕಿರ್ಯತ್ ಸೇಫೆರದ ಮೇಲೆ ದಾಳಿಮಾಡಿ ಹಿಡಿದುಕೊಳ್ಳುವವನಿಗೆ ನನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆಮಾಡಿಕೊಡುತ್ತೇನೆ,” ಎಂದನು.
17 : ಕೆನಜನ ಮಗನೂ ಕಾಲೇಬನ ತಮ್ಮನೂ ಆದ ಒತ್ನಿಯೇಲನು ಅದರ ಮೇಲೆ ದಾಳಿಮಾಡಿ ತೆಗೆದುಕೊಂಡನು. ಅವನಿಗೆ ಕಾಲೇಬನು ತನ್ನ ಮಗಳಾದ ಅಕ್ಷಾ ಎಂಬಾಕೆಯನ್ನು ಮದುವೆ ಮಾಡಿಕೊಟ್ಟನು.
18 : ಆಕೆ ಮನೆ ಸೇರಿದಾಗ ತನ್ನ ತಂದೆಯ ಬಳಿ ಭೂಮಿಯನ್ನು ಕೇಳಬೇಕೆಂದು ಒತ್ನಿಯೇಲನು ಅವಳನ್ನು ಪ್ರೋತ್ಸಾಹಿಸಿದನು. ಅಂತೆಯೇ ಅವಳು ಹೊರಟು ಹೇಸರಗತ್ತೆ ಮೇಲಿಂದ ಇಳಿದದ್ದೇ ಕಾಲೇಬನು, “ನಿನಗೇನು ಬೇಕು?” ಎಂದು ಕೇಳಿದನು.
19 : ಅವಳು, “ನನಗೊಂದು ಕೊಡುಗೆ ಬೇಕು. ನನ್ನನ್ನು ಬೆಂಗಾಡಿಗೆ ಕೊಟ್ಟುಬಿಟ್ಟಿದ್ದೀರಲ್ಲವೆ? ಬುಗ್ಗೆಗಳಿರುವ ಸ್ಥಳವನ್ನು ನನಗೆ ಕೊಡಿ,” ಎಂದಳು. ಆಗ ಕಾಲೇಬನು ಅವಳಿಗೆ ಬುಗ್ಗೆಗಳಿದ್ದ ಮೇಲಣ ಹಾಗೂ ಕೆಳಗಣ ಸ್ಥಳಗಳನ್ನು ಕೊಟ್ಟನು.
20 : ಯೆಹೂದ ಕುಲದ ಗೋತ್ರಗಳಿಗೆ ಸಿಕ್ಕಿದ ಸೊತ್ತಿನ ವಿವರ:
21 : ಎದೋಮ್ ಪ್ರಾಂತ್ಯವು ಮೇರೆಯಾಗಿರುವ ದಕ್ಷಿಣ ಭಾಗದಲ್ಲಿ ಕಬ್ಜೇಲ್, ಎದೆರ್, ಯಾಗೂರ್,
22 : ಕೀನಾ, ದೀಮೋನಾ, ಅದಾದಾ, ಕೆದೆಷ್, ಹಾಚೋರ್, ಇತ್ನಾನ್,
23 : ಕೀನಾ, ದೀಮೋನಾ, ಅದಾದಾ, ಕೆದೆಷ್, ಹಾಚೋರ್, ಇತ್ನಾನ್,
25 : ಹಾಚೋರ್ ಹದತ್ತಾ, ಹಾಚೋರ್ ಎಂಬವ
26 : ಕಿರ್ಯೋತ್, ಹೆಚ್ರೋನ್, ಅಮಾಮ್, ಶೆಮ,
27 : ಮೋಲಾದ, ಹಚರ್ ಗದ್ದಾ, ಹೆಷ್ಮೋನ್, ಬೆತ್ಪೆಲೆಟ್, ಹಚರ್ ಷೂವಾಲ್,
29 : ಬಾಲಾ, ಇಯ್ಯೀಮ್, ಎಚೆಮ್, ಎಲ್ಟೋಲದ್, ಕೆಸೀಲ್, ಹೊರ್ಮಾ,
30 : ಬಾಲಾ, ಇಯ್ಯೀಮ್, ಎಚೆಮ್, ಎಲ್ಟೋಲದ್, ಕೆಸೀಲ್, ಹೊರ್ಮಾ,
31 : ಚಿಕ್ಲಗ್, ಮದ್ಮನ್ನಾ, ಸನ್ಸನ್ನಾ
32 : ಲೆಬಾವೋತ್, ಶಿಲ್ಹೀಮ್, ಆಯಿನ್, ರಿಮ್ಮೋನ್ ಎಂಬ ಇಪ್ಪತ್ತೊಂಬತ್ತು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
34 : ಎಷ್ಟಾವೋಲ್, ಚೊರ್ಗಾ, ಅಶ್ನಾ, ಜನೋಹ, ಎಂಗನ್ನೀಮ್,
36 : ಅದುಲ್ಲಾಮ್, ಸೋಕೋ, ಅಜೇಕಾ, ಶಾರಯಿಮ್, ಅದೀತಯಿಮ್, ಗೆದೇರಾ, ಗೆದೆರೋತಯಿಮ್ ಎಂಬ ಹದಿನಾಲ್ಕು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
37 : ಚೆನಾನ್, ಹದಾಷಾ, ಮಿಗ್ದಲ್ಗಾದ್, ದಿಲಾನ್, ಮಿಚ್ಪೆ, ಯೊಕ್ತೇಲ್,
38 : ಚೆನಾನ್, ಹದಾಷಾ, ಮಿಗ್ದಲ್ಗಾದ್, ದಿಲಾನ್, ಮಿಚ್ಪೆ, ಯೊಕ್ತೇಲ್,
39 : ಲಾಕೀಷ್, ಬೊಚ್ಕತ್, ಎಗ್ಲೋನ್,
40 : ಕಬ್ಬೋನ್, ಲಹ್ಮಾಮ್, ಕಿತ್ಲೀಷ್, ಗೆದೇರೋತ್, ಬೇತ್ ದಾಗೋನ್, ನಾಮಾ,
41 : ಮಕ್ಕೇದಾ ಎಂಬ ಹದಿನಾರು ನಗರಗಳು, ಅವುಗಳ ಗ್ರಾಮಗಳು;
42 : ಲಿಬ್ನಾ, ಎತೆರ್, ಅಷಾನ್, ಇಫ್ತಾಹ,
43 : ಲಿಬ್ನಾ, ಎತೆರ್, ಅಷಾನ್, ಇಫ್ತಾಹ,
44 : ಆಶ್ನಾ, ನೆಚೀಬ್, ಕೆಯೀಲಾ, ಅಕ್ಜೀಬ್, ಮಾರೇಷಾ ಎಂಬ ಒಂಬತ್ತು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
45 : ಎಕ್ರೋನ್ ಸಂಸ್ಥಾನ ಮತ್ತು ಅದಕ್ಕೆ ಸೇರಿದ ಗ್ರಾಮ-ನಗರಗಳು;
46 : ಎಕ್ರೋನಿನಿಂದ ಸಮುದ್ರದವರೆಗೆ ಅಷ್ಡೋದಿನ ಬಳಿಯಲ್ಲಿರುವ ಸಮಸ್ತ ಗ್ರಾಮಗಳು;
47 : ಅಷ್ಡೋದ್ ಸಂಸ್ಥಾನ ಮತ್ತು ಅದರ ಗ್ರಾಮ-ನಗರಗಳು; ಗಾಜಾ ಸಂಸ್ಥಾನ ಹಾಗೂ ಈಜಿಪ್ಟಿನ ನದಿಯ ಹತ್ತಿರದಲ್ಲಿ ಮತ್ತು ಮಹಾಸಾಗರದ ತೀರದಲ್ಲಿ ಇರುವ ಅದರ ಎಲ್ಲ ಗ್ರಾಮ, ನಗರಗಳು.
48 : ಮಲೆನಾಡಿನ ಪ್ರದೇಶದಲ್ಲಿರುವ ಶಾಮೀರ್, ಯತ್ತೀರ್, ಸೋಕೋ,
49 : ದನ್ನಾ, ದೆಬೀರ್ ಎಂಬ ಕಿರ್ಯತ್ ಸನ್ನಾ, ಅನಾಬ್,
50 : ದನ್ನಾ, ದೆಬೀರ್ ಎಂಬ ಕಿರ್ಯತ್ ಸನ್ನಾ, ಅನಾಬ್,
51 : ಎಷ್ಟೆಮೊ, ಅನೀಮ್, ಗೊಷೆನ್, ಹೋಲೋನ್, ಗಿಲೋ ಎಂಬ ಹನ್ನೊಂದು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು.
53 : ಯಾನೂಮ್, ಬೇತ್ ತಪ್ಪೂಹ, ಅಫೇಕಾ, ಹುಮ್ತಾ, ಹೆಬ್ರೋನ್ ಎಂಬ ಕಿರ್ಯತ್ ಅರ್ಬ, ಚಿಯೋರ್ ಎಂಬ ಒಂಬತ್ತು ನಗರಗಳು, ಅವುಗಳ ಗ್ರಾಮಗಳು.
54 : ಯಾನೂಮ್, ಬೇತ್ ತಪ್ಪೂಹ, ಅಫೇಕಾ, ಹುಮ್ತಾ, ಹೆಬ್ರೋನ್ ಎಂಬ ಕಿರ್ಯತ್ ಅರ್ಬ, ಚಿಯೋರ್ ಎಂಬ ಒಂಬತ್ತು ನಗರಗಳು, ಅವುಗಳ ಗ್ರಾಮಗಳು.
55 : ಮಾವೋನ್, ಕರ್ಮೆಲ್, ಜೀಫ್, ಯುಟ್ಟಾ,
56 : ಇಜ್ರೇಲ್, ಯೊಗ್ದೆಯಾಮ್, ಜನೋಹ, ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ನಗರಗಳು ಮತ್ತು ಅವುಗಳ ಗ್ರಾಮಗಳು.
57 : ಇಜ್ರೇಲ್, ಯೊಗ್ದೆಯಾಮ್, ಜನೋಹ, ಕಯಿನ್, ಗಿಬೆಯಾ, ತಿಮ್ನಾ ಎಂಬ ಹತ್ತು ನಗರಗಳು ಮತ್ತು ಅವುಗಳ ಗ್ರಾಮಗಳು.
58 : ಹಲ್ಪೂಲ್, ಬೇತ್ ಚೂರ್, ಗೆದೋರ್,
59 : ಮಾರಾತ್, ಬೇತನೋತ್ ಎಲ್ಟೆಕೋನ್ ಎಂಬ ಆರು ನಗರಗಳು ಮತ್ತು ಅವುಗಳಿಗೆ ಸೇರಿದ ಗ್ರಾಮಗಳು
60 : ಕಿರ್ಯಾತ್ಯಾರಿಮ್ ಅನ್ನಿಸಿಕೊಳ್ಳುವ ಕಿರ್ಯತ್ ಬಾಳ್, ರಬ್ಬಾ ಎಂಬ ಎರಡು ನಗರಗಳು ಮತ್ತು ಅವುಗಳ ಗ್ರಾಮಗಳು.
61 : ಮರುಭೂಮಿಯಲ್ಲಿರುವ ಬೇತ್ ಅರಾಬಾ,
62 : ಮಿದ್ದೀನ್, ಸೆಕಾಕಾ, ನಿಬಾನ್ ಉಪ್ಪಿನಪಟ್ಟಣ, ಏಂಗೇದಿ ಎಂಬ ಆರು ನಗರಗಳು ಮತ್ತು ಅವುಗಳ ಗ್ರಾಮಗಳು.
63 : ಜೆರುಸಲೇಮಿನಲ್ಲಿ ವಾಸವಾಗಿದ್ದ ಯೆಬೂಸಿಯರನ್ನು ಹೊರಡಿಸಲು ಯೆಹೂದ ಕುಲದವರಿಂದ ಆಗದೆ ಹೋಯಿತು. ಆದುದರಿಂದ ಅವರು ಇಂದಿನವರೆಗೂ ಯೆಹೂದ ಕುಲದವರೊಡನೆ ಜೆರುಸಲೇಮಿನಲ್ಲೇ ವಾಸವಾಗಿದ್ದಾರೆ.