ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
121ನೇ ಅಧ್ಯಾಯ
1 : ಕಣ್ಣೆತ್ತಿ ನಾ ನೋಡುವೆ ಪರ್ವತದತ್ತ I ಕೇಳುವೆ : “ನನಗೆ ಒತ್ತಾಸೆ ಎತ್ತಣಿಂದ?” II
2 : ನನಗೆ ಒತ್ತಾಸೆ ಪ್ರಭುವಿನಿಂದ I ಭೂಮ್ಯಾಕಾಶ ಸೃಜಿಸಿದವನಿಂದ II
3 : ನಿನ್ನ ಕಾಲೆಡವದಂತೆ ನೋಡುವನಾತ I ತೂಕಡಿಸಲಾರನು ನಿನ್ನ ಕಾಯುವಾತ II
4 : ಇಗೋ, ಇಸ್ರಯೇಲನು ಕಾಯುವಾತನು I ನಿದ್ರಿಸಲಾರನು, ತೂಕಡಿಸಲಾರನು II
5 : ನಿನ್ನನು ಕಾಯುತಿಹನು ಪ್ರಭುವೇ I ಬಲಗಡೆ ನೆರಳಂತಿಹನು ವಿಭುವೇ II
6 : ನಿನ್ನ ಬಾಧಿಸನು ಸೂರ್ಯನು ಹಗಲೊಳು I ನಿನ್ನ ಪೀಡಿಸನು ಚಂದ್ರನು ಇರುಳೊಳು II
7 : ಪ್ರಭು ಕಾಯುವನು ನಿನ್ನ ಪ್ರಾಣವನು I ಸಕಲ ಕೇಡಿನಿಂದ ಕಾಪಾಡುವನು II
8 : ಪ್ರಭು ಕಾಯುವನು ನಿನ್ನ ಆಗುಹೋಗುಗಳನು I ಇಂದಿಗೂ ಎಂದೆಂದಿಗೂ ನಿನ್ನ ಕಾಯುವನು II