पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
52ನೇ ಅಧ್ಯಾಯ
- Verse 1: ನೀಚಕಾರ್ಯವೆಸಗಿ ಹಿಗ್ಗುವ ಘನ ಮಾನವನೆ I ದೇವರ ಅನಂತ ಕೃಪೆಯನು ಪ್ರತಿಭಟಿಸುವವನೆ I ದೇವರ ದೃಷ್ಟಿಯಲಿ ನೀನು ಹೀನಾಯನೆ II
- Verse 2: ಕ್ಷೌರಗತ್ತಿಗೂ ಹರಿತ ನಿನ್ನ ನಾಲಿಗೆ, ವಂಚಕನೆ I ಕಲ್ಪಿಸುವೆಯಾ ದಿನವೆಲ್ಲಾ ನಾಶವಿನಾಶವನೆ? II
- Verse 3: ಒಳಿತಿಗಿಂತ ಕೆಡಕು ಮಾಡುವುದು ನಿನಗಿಷ್ಟ I ಸತ್ಯಕ್ಕಿಂತ ಸುಳ್ಳಾಡುವುದೇ ನಿನ್ನ ಚಟ II
- Verse 4: ಓ ನಾಲಿಗೆಯೇ, ನೀನು ಕಪಟ I ಹಾನಿಕರ ಮಾತೇ ನಿನಗಪ್ಪಟ II
- Verse 5: ನಸುಕುವನು ದೇವರು ನಿನ್ನನು ನಿರುತ I ದೂರಮಾಡುವನು ನಿನ್ನಾ ಗುಡಾರದಿಂದ I ಕಿತ್ತೆಸೆದುಬಿಡುವನು ಜೀವದ ನಾಡಿಂದ II
- Verse 6: ಸಜ್ಜನರು ಚಕಿತರಾಗುವರು ಕಂಡಿದನು I “ದೇವರನು ಆಶ್ರಯಿಸಿಕೊಳ್ಳದವನಿವನು I ಸಿರಿ ಸಂಪತ್ತಿನಲೆ ಭರವಸೆಯಿಟ್ಟವನು I ತುಚ್ಛಕಾರ್ಯಗಳಲೆ ಹೆಚ್ಚಳಪಟ್ಟವನು” I ಎಂದು ಜರೆದು ಮಾಡುವರು ಪರಿಹಾಸ್ಯವನು II
- Verse 7: ಸಜ್ಜನರು ಚಕಿತರಾಗುವರು ಕಂಡಿದನು I “ದೇವರನು ಆಶ್ರಯಿಸಿಕೊಳ್ಳದವನಿವನು I ಸಿರಿ ಸಂಪತ್ತಿನಲೆ ಭರವಸೆಯಿಟ್ಟವನು I ತುಚ್ಛಕಾರ್ಯಗಳಲೆ ಹೆಚ್ಚಳಪಟ್ಟವನು” I ಎಂದು ಜರೆದು ಮಾಡುವರು ಪರಿಹಾಸ್ಯವನು II
- Verse 8: ನಾನಾದರೋ ದೇಗುಲದಲಿ ಬೆಳೆದಿಹ ಎಣ್ಣೆಮರದಂತಿರುವೆನು I ದೇವರ ಸ್ಥಿರಪ್ರೀತಿಯನು ಯುಗಾಂತರಕು ನಂಬಿಕೊಂಡಿರುವೆನು II
- Verse 9: ನಿನ್ನುಪಕಾರವನು ಹೇ ದೇವಾ, ನಾ ಸದಾ ಸ್ಮರಿಸುವೆನು I ನಿನ್ನ ಶ್ರೇಷ್ಠ ನಾಮವನು ಭಕ್ತರ ಮುಂದೆ ಸ್ತುತಿಸುವೆನು II