పరిశుద్ధ గ్రంథము
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
2ನೇ ಅಧ್ಯಾಯ
1 : ಯಕೋಬನ ಹನ್ನೆರಡು ಜನ ಮಕ್ಕಳು ಇವರು: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬೂಲೂನ್,
2 : ದಾನ್, ಜೋಸೆಫ್, ಬಿನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್.
3 : ಯೆಹೂದನ ಹೆಂಡತಿ ಶೂನನ ಮಗಳಾದ ಕಾನಾನಳು. ಅವಳಿಂದ ಏರ್, ಓನಾನ್, ಶೇಲಹ ಎಂಬ ಮೂರು ಮಕ್ಕಳು ಜನಿಸಿದರು. ಅವನ ಹಿರಿಯ ಮಗ ಏರನು ಬಹಳ ದುಷ್ಟ. ಆದುದರಿಂದ ಸರ್ವೇಶ್ವರ ಅವನನ್ನು ಕೊಂದುಹಾಕಿದರು.
4 : ಯೆಹೂದನಿಗೆ ಅವನ ಸೊಸೆ ತಾಮಾರಳಿಂದ ಪೆರೆಜ್ ಹಾಗೂ ಜೆರಹ ಎಂಬ ಮಕ್ಕಳು ಜನಿಸಿದರು. ಯೆಹೂದನ ಮಕ್ಕಳು ಒಟ್ಟು ಐದು ಮಂದಿ.
5 : ಪೆರೆಚನಿಗೆ ಹೆಚ್ರೋನ್, ಹಾಮುಲ್ ಎಂಬಿಬ್ಬರು ಮಕ್ಕಳು.
6 : ಅವನ ಸಹೋದರ ಜೆರಹನಿಗೆ ಐದು ಜನ ಮಕ್ಕಳು: ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್, ಮತ್ತು ದಾರ.
7 : ಜೆರಹನ ಸಂತತಿಯಲ್ಲಿ ಕರ್ಮಿಯ ಮಗ ಆಕಾರನು ಸರ್ವೇಶ್ವರನಿಗೆ ಮೀಸಲಾಗಿಟ್ಟಿದ್ದ ವಸ್ತುಗಳನ್ನು ಕದ್ದುಕೊಂಡದ್ದರಿಂದ ಇಸ್ರಯೇಲರಿಗೆ ಆಪತ್ತನ್ನು ತಂದಿದ್ದನು.
8 : ಏತಾನನಿಗೆ ಅಜರ್ಯನೆಂಬ ಒಬ್ಬ ಮಗನಿದ್ದನು.
9 : ಹೆಚ್ರೋನನಿಗೆ ಮೂರು ಜನ ಮಕ್ಕಳು ಇದ್ದರು. ಅವರು - ಯೆರಹ್ಮೇಲ್, ರಾಮ್ ಮತ್ತು ಕೆಲೂಬಾಯ್ ಎಂಬವರು.
10 : ರಾಮನಿಂದ ಜೆಸ್ಸೆವರೆಗಿನ ವಂಶಜರು: ಅಮ್ಮೀನಾದಾಬ್, ಯೆಹೂದ ಗೋತ್ರದ ಪ್ರಮುಖ ವ್ಯಕ್ತಿಯಾದ ನಹಶೋನ,
13 : ಜೆಸ್ಸೆಯ ಏಳು ಜನ ಮಕ್ಕಳು: ಎಲೀಯಾಬ್, ಅಬೀನಾದಾಬ್, ಶಿಮ್ಮ,
16 : ಅವನ ಇಬ್ಬರು ಹೆಣ್ಣು ಮಕ್ಕಳು: ಚೆರೂಯ ಹಾಗೂ ಅಬೀಗೈಲ ಎಂಬವರು. ಜೆಸ್ಸೆಯ ಮಗಳು ಚೆರೂಯಳಿಗೆ ಅಬೈ , ಯೋವಾಬ್ , ಅಸಾಹೇಲ್ ಎಂಬ ಮೂರು ಜನ ಮಕ್ಕಳಿದ್ದರು .
17 : ಅವನ ಇನ್ನೊಬ್ಬ ಮಗಳು ಅಬೀಗೈಲಳು ಇಷ್ಮಾಯೇಲನ ವಂಶಜ ಯೆತೆರ್ ಎಂಬವನನ್ನು ವಿವಾಹವಾಗಿ ಅಮಾಸ ಎಂಬ ಮಗನನ್ನು ಪಡೆದಳು.
18 : ಹೆಚ್ರೋನನ ಮಗ ಕಾಲೇಬ, ಅಜೂಬಳನ್ನು ಮದುವೆಯಾಗಿ ಯೆರ್ಯೋತ್ ಎಂಬ ಮಗಳನ್ನು ಪಡೆದನು. ಆಕೆಯ ಮೂರು ಜನ ಗಂಡುಮಕ್ಕಳು: ಯೇಷೆರ್, ಶೊಬಾಬ್, ಅರ್ದೋನ್ ಎಂಬವರು.
19 : ಅಜೂಬಳ ಮರಣದ ನಂತರ ಕಾಲೇಬನು ಎಫ್ರಾತಳನ್ನು ಮದುವೆ ಆಗಿ ಹೂರ್ ಎಂಬ ಮಗನನ್ನು ಪಡೆದನು.
20 : ಹೂರನಿಗೆ ಊರಿಯ ಎಂಬ ಮಗ ಮತ್ತು ಬೆಚಲೇಲ ಎಂಬ ಮೊಮ್ಮಗ ಇದ್ದರು.
21 : ಹೆಚ್ರೋನ ಅರುವತ್ತು ವರ್ಷದವನಾದಾಗ ಗಿಲ್ಯಾದನ ಸೋದರಿಯಾದ ಮಾಕೀರನ ಮಗಳನ್ನು ಮದುವೆಯಾದನು. ಅವರಿಗೆ ಸೆಗೂಬ ಎಂಬ ಮಗ ಜನಿಸಿದ.
22 : ಸೆಗೂಬನಿಗೆ ಯಾಯೀರ ಎಂಬ ಮಗ ಜನಿಸಿದ. ಯಾಯೀರ ಗಿಲ್ಯಾದನ ಇಪ್ಪತ್ಮೂರು ಪಟ್ಟಣಗಳ ಮೇಲೆ ಆಡಳಿತ ಮಾಡಿದನು.
23 : ಆದರೆ ಗೆಷೂರ್ಯರ ಮತ್ತು ಅರಾಮ್ಯರ ರಾಜ್ಯಗಳವರು ಯಾಯೀರನ ಹಾಗೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನೂ ಅವುಗಳ ಸಮೀಪದ ಪಟ್ಟಣಗಳನ್ನೂ ಸೇರಿ ಒಟ್ಟು ಅರುವತ್ತು ಪಟ್ಟಣಗಳನ್ನು ಗೆದ್ದುಕೊಂಡರು. ಅಲ್ಲಿ ವಾಸಿಸಿದ್ದ ಎಲ್ಲಾ ಜನರೂ ಗಿಲ್ಯಾದನ ತಂದೆ ಮಾಕೀರನ ವಂಶಜರೇ ಆಗಿದ್ದರು.
24 : ಹೆಚ್ರೋನನು ಮರಣ ಹೊಂದಿದ ನಂತರ ಅವನ ಮಗ ಕಾಲೇಬ್ ತನ್ನ ತಂದೆಯ ವಿಧವೆ ಎಫ್ರಾತಳನ್ನು ಮದುವೆಯಾದನು. ಅವರಿಗೆ ಅಷ್ಹೂರ ಎಂಬ ಮಗ ಜನಿಸಿದ. ತೆಕೋವ ಪಟ್ಟಣವನ್ನು ಕಟ್ಟಿದವನು ಇವನೇ.
25 : ಹೆಚ್ರೋನನ ಚೊಚ್ಚಲ ಮಗ ಯೆರಹ್ಮೇಲನಿಗೆ ಐದು ಜನ ಮಕ್ಕಳು ಇದ್ದರು. ಅವರು - ಹಿರಿಯವನಾದ ರಾಮ್ ಮತ್ತು ಬೂನ, ಓರೆನ್, ಓಚೆಮ್, ಹಾಗೂ ಅಹೀಯ ಎಂಬವರು.
26 : ರಾಮನಿಗೆ ಮಾಚ್, ಯಾಮೀನ್, ಏಕೆರ್ ಎಂಬ ಮೂರು ಮಕ್ಕಳಿದ್ದರು. ಯೆರೆಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಅವಳಿಂದ ಓನಾಮ ಎಂಬ ಮಗ ಜನಿಸಿದ.
27 : ರಾಮನಿಗೆ ಮಾಚ್, ಯಾಮೀನ್, ಏಕೆರ್ ಎಂಬ ಮೂರು ಮಕ್ಕಳಿದ್ದರು. ಯೆರೆಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಅವಳಿಂದ ಓನಾಮ ಎಂಬ ಮಗ ಜನಿಸಿದ.
28 : ಓನಾಮನಿಗೆ ಶಮ್ಮೈ, ಮತ್ತು ಯಾದ ಎಂಬ ಇಬ್ಬರು ಮಕ್ಕಳಿದ್ದರು. ಶಮ್ಮೈ ಮಕ್ಕಳು: ನಾದಾಬ್ ಹಾಗೂ ಅಬೀಷೂರ್.
29 : ಅಬೀಷೂರ ಅಬೀಹೈಲ್ ಎಂಬವಳೊಂದಿಗೆ ವಿವಾಹವಾಗಿ ಅಹ್ಬಾನ್, ಮೋಲೀದ್ ಎಂಬಿಬ್ಬರು ಮಕ್ಕಳನ್ನು ಪಡೆದನು.
30 : ಅಬೀಷೂರನ ಸಹೋದರ ನಾದಾಬನಿಗೆ ಸೆಲೆದ್, ಅಪ್ಪಯಿಮ್ ಎಂಬಿಬ್ಬರು ಮಕ್ಕಳಿದ್ದರು. ಆದರೆ ಸೆಲೆದನು ಮಕ್ಕಳಿಲ್ಲದೇ ಮರಣ ಹೊಂದಿದನು.
31 : ಅಪ್ಪಯಿಮ್ ಇಷ್ಷೀಯ ತಂದೆ. ಇಷ್ಷೀ ಶೇಷಾನ್ ನ ತಂದೆ, ಶೇಷಾನನು ಅಹ್ಲ್ಯೋ ತಂದೆ.
32 : ಶಮ್ಮೆಯ ತಮ್ಮನಾದ ಯಾದಾನಿಗೆ ಯೆತೆರ್ ಮತ್ತು ಯೋನಾತಾನ್ ಎಂಬ ಮಕ್ಕಳು ಇದ್ದರು. ಯೆತೆರ್ ಮಕ್ಕಳಿಲ್ಲದೇ ಮಡಿದನು.
33 : ಯೋನಾತಾನನಿಗೆ ಪೆಲಿತ್, ಜಾಜ ಎಂಬ ಮಕ್ಕಳಿದ್ದರು. ಇವರೆಲ್ಲರೂ ಯೆರಹ್ಮೇಲನ ವಂಶಜರು.
34 : ಶೇಷಾನನಿಗೆ ಗಂಡುಮಕ್ಕಳಿರಲಿಲ್ಲ; ಹೆಣ್ಣು ಮಕ್ಕಳೇ ಇದ್ದರು. ಅವನಿಗೆ ಯರ್ಹ ಎಂಬ ಸೇವಕನಿದ್ದನು.
35 : ಅವನಿಗೆ ತನ್ನ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಟ್ಟನು. ಅವರಿಗೆ ಜನಿಸಿದ ಮಗನ ಹೆಸರು ಅತ್ತೈ ಎಂದು.
36 : ಅತ್ತೈನಿಂದ ಎಲೀಮಾನವರೆಗಿನ ವಂಶಜರ ಹೆಸರುಗಳು: ಅತ್ತೈ, ನಾತಾನ್, ಜಾಬಾದ,
42 : ಕಾಲೇಬನ ಚೊಚ್ಚಲು ಮಗನಿಗೆ ಅಂದರೆ ಯೆರಹ್ಮೇಲನ ಸಹೋದರನಿಗೆ ಮೇಷ ಎಂದು ಹೆಸರಿಡಲಾಗಿತ್ತು. ಮೇಷನು ಜೀಫ್ಯನ ತಂದೆ, ಇವನು ಮಾರೇಷನ ತಂದೆ, ಇವನು ಹೆಬ್ರೋನನ ತಂದೆ,
43 : ಹೆಬ್ರೋನನಿಗೆ ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆವು ಎಂಬ ನಾಲ್ವರು ಮಕ್ಕಳು ಇದ್ದರು.
44 : ಶೆಮ ರಹಮನ ತಂದೆ, ಯೊರ್ಕೆಯಾಮ್ಯನ ಅಜ್ಜ. ಶೆಮನ ಸಹೋದರ ರೆಕೆಮ ಶಮ್ಮೈಯನ ತಂದೆ,
45 : ಇವನು ಮಾವೋನ್ಯನ ತಂದೆ, ಇವನು ಬೇತ್ಸೂರನ ತಂದೆ.
46 : ಕಾಲೇಬನಿಗೆ ಏಫಾ ಎಂಬ ಉಪಪತ್ನಿ ಇದ್ದಳು. ಅವಳಿಂದ ಅವನಿಗೆ ಹಾರಾನ್, ಮೋಚ, ಗಾಜೇಜ್ ಹುಟ್ಟಿದರು. ಹಾರಾನನಿಗೆ ಗಾಜೇಜ ಎಂಬ ಹೆಸರಿನ ಮಗನಿದ್ದನು.
47 : ಯಾದೈ ಎಂಬವನಿಗೆ ಆರು ಜನ ಮಕ್ಕಳು: ರೆಗೆಮ್, ಯೋತಾಮ್, ಗೇಷಾನ್, ಪೆಲೆಟ್, ಏಪ, ಶಾಫ್ ಎಂಬವರು.
48 : ಕಾಲೇಬನ ಇನ್ನೊಬ್ಬ ಉಪಪತ್ನಿ - ಮಾಕಾ. ಅವಳಿಂದ ಶೆಬಿರ್, ತಿರ್ಹನ ಎಂಬಿಬ್ಬರು ಮಕ್ಕಳು ಜನಿಸಿದರು.
49 : ಅನಂತರ ಅವಳಿಗೆ ಮತ್ತೆ ಇಬ್ಬರು ಮಕ್ಕಳು ಜನಿಸಿದರು: ಮದ್ಮನ್ನ ಪಟ್ಟಣವನ್ನು ಕಟ್ಟಿಸಿದ ಶಾಫ್ ಒಬ್ಬನು. ಮಕ್ಬೇನ ಮತ್ತು ಗಿಬ್ಯ ಪಟ್ಟಣಗಳನ್ನು ಕಟ್ಟಿಸಿದ ಶೆವ ಇನ್ನೊಬ್ಬನು. ಇವರಲ್ಲದೆ ಕಾಲೇಬನಿಗೆ ಅಕ್ಸಾಹ ಎಂಬ ಹೆಣ್ಣು ಮಗಳು ಇದ್ದಳು.
50 : ಇನ್ನುಳಿದ ಕಾಲೇಬನ ವಂಶಜರು: ಕಾಲೇಬನಿಗೆ ಅವನ ಹೆಂಡತಿ ಎಫ್ರಾತಳಿಂದ ಜನಿಸಿದ ಚೊಚ್ಚಲ ಮಗನ ಹೆಸರು ಹೂರ ಎಂದು. ಹೂರನ ಮಗ ಶೋಬಾಲ್ - ಕಿರ್ಯತ್ಯಾರೀಮ್ ಪಟ್ಟಣವನ್ನೂ
51 : ಅವನ ಇನ್ನೊಬ್ಬ ಮಗ ಸಲ್ಮ ಬೆತ್ಲೆಹೇಮನ್ನೂ ಅವನ ಮೂರನೆಯ ಮಗ ಹಾರೇಫ್, ಬೇತ್ಗಾದೇರ್ ಪಟ್ಟಣವನ್ನೂ ಕಟ್ಟಿಸಿದರು.
52 : ಕಿರ್ಯತ್ಯಾರೀಮ್ ಪಟ್ಟಣದ ಸ್ಥಾಪಕ ಶೋಬಾಲನು ಹರೋಯೆ ಜನರ, ಮಾನಹತಿಯರ ಅರ್ಧದಷ್ಟು ಜನರ,
53 : ಹಾಗೂ ಕಿರ್ಯತ್ಯಾರೀಮ್ನಲ್ಲಿ ವಾಸಿಸುವ ಯೆತೆರಿನವರ, ಪೂತ್ಯರ, ಶುಮಾತ್ಯರ ಹಾಗೂ ಮಿಷ್ರಾಗ್ಯರ ಪೂರ್ವಜನಾಗಿದ್ದನು. ಚೊರ್ರಾತ್ಯರು ಹಾಗೂ ಎಷ್ಟಾವೋಲ್ಯರು ಈ ಗೋತ್ರಗಳಿಗೆ ಸೇರಿದವರು.
54 : ನೆಟೋಫಾ, ಅಟರೋತ್, ಬೇತ್ಯೋವಾಬ್ ಹಾಗೂ ಮಾನಹತಿಯರ ಎರಡು ಗೋತ್ರಗಳಲ್ಲಿ ಒಂದಾದ ಜೊರ್ಗದ ನಿವಾಸಿಗಳಿಗೆ ಬೆತ್ಲೆಹೇಮ್ ಪಟ್ಟಣದ ಸ್ಥಾಪಕ ಸಲ್ಮನು ಮೂಲಪುರುಷ ಆಗಿದ್ದನು.
55 : ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ನಕಲು ಮಾಡುವುದರಲ್ಲಿ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು, ಸುಕಾತ್ಯರು ಯಾಬೇಚಿನಲ್ಲಿ ವಾಸಿಸಿದ್ದರು. ರೇಕಾಬ್ಬರೊಂದಿಗೆ ಅಂತರ್ ವಿವಾಹ ಮಾಡಿಕೊಂಡ ಕೇನ್ಯರು ಇವರೇ.