P. O. C ബൈബിള്
ಹಳೆಯ ಒಡಂಬಡಿಕೆ
ಯೆಹೋಶುವ
21ನೇ ಅಧ್ಯಾಯ
- Verse 1: ಲೇವಿ ಕುಲಾಧಿಪತಿಗಳು ಕಾನಾನ್ ನಾಡಿನ ಶೀಲೋವಿನಲ್ಲಿದ್ದ ಯಾಜಕ ಎಲ್ಲಾಜಾರ್, ನೂನನ ಮಗ ಯೆಹೋಶುವ ಮತ್ತು ಇಸ್ರಯೇಲ್ ಕುಲಾಧಿಪತಿಗಳ ಬಳಿಗೆ ಬಂದರು.
- Verse 2: “ನಮ್ಮ ನಿವಾಸಕ್ಕೆ ನಗರಗಳನ್ನೂ ನಮ್ಮ ಪಶುಪ್ರಾಣಿಗಳಿಗೆ ಗೋಮಾಳಗಳನ್ನೂ ಕೊಡಬೇಕೆಂದು ಸರ್ವೇಶ್ವರಸ್ವಾಮಿ ಮೋಶೆಯ ಮುಖಾಂತರ ಆಜ್ಞಾಪಿಸಿದ್ದಾರಲ್ಲವೆ?” ಎಂದು ವಿನಂತಿಸಿದರು.
- Verse 3: ಸರ್ವೇಶ್ವರನ ಆಜ್ಞೆಯಂತೆಯೇ ಅವರಿಗೆ ಸೊತ್ತಾಗಿ ಈ ಕೆಳಕಂಡ ನಗರಗಳನ್ನು ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಡಲಾಯಿತು.
- Verse 4: ಕೆಹಾತ್ಯರಿಗಾಗಿ ಚೀಟು ಹಾಕಿದಾಗ ಆರೋನನ ವಂಶದವರಾದ ಲೇವಿಯರಿಗೆ ಯೆಹೂದ, ಸಿಮೆಯೋನ್ ಮತ್ತು ಬೆನ್ಯಾಮೀನ್ ಕುಲಗಳಿಂದ ಹದಿಮೂರು ನಗರಗಳು ದೊರಕಿದವು.
- Verse 5: ಮಿಕ್ಕ ಕೆಹಾತ್ಯರಿಗೆ ಎಪ್ರಯಿಮ್ ಹಾಗೂ ದಾನ್ ಕುಲಗಳಿಂದ ಮತ್ತು ಮನಸ್ಸೆಯ ಅರ್ಧ ಕುಲಗಳಿಂದ ಹತ್ತು ನಗರಗಳು ಸಿಕ್ಕಿದವು.
- Verse 6: ಮತ್ತೆ ಚೀಟು ಹಾಕಿದಾಗ ಗೇರ್ಷೋನ್ಯರಿಗೆ ಇಸ್ಸಾಕಾರ್, ಆಶೇರ್, ನಫ್ತಾಲಿ ಎಂಬ ಕುಲಗಳಿಂದ ಮತ್ತು ಬಾಷಾನಿನಲ್ಲಿರುವ ಮನಸ್ಸೆಯ ಅರ್ಧ ಕುಲದಿಂದ ಹದಿಮೂರು ನಗರಗಳು ದೊರೆತವು.
- Verse 7: ಮೆರಾರಿ ಗೋತ್ರದವರಿಗೆ ರೂಬೇನ್, ಗಾದ್ ಹಾಗೂ ಜೆಬುಲೂನ್ ಕುಲಗಳಿಂದ ಹನ್ನೆರಡು ನಗರಗಳು ಸಿಕ್ಕಿದವು.
- Verse 8: ಸರ್ವೇಶ್ವರ ಸ್ವಾಮಿ ಮೋಶೆಯ ಮುಖಾಂತರ ಆಜ್ಞಾಪಿಸಿದಂತೆ ಇಸ್ರಯೇಲರು ಚೀಟು ಹಾಕಿ ಲೇವಿಯರಿಗೆ ಇಷ್ಟು ನಗರಗಳನ್ನು ಅವುಗಳಿಗೆ ಸೇರಿದ ಗೋಮಾಳಗಳನ್ನೂ ಕೊಟ್ಟರು.
- Verse 9: ಲೇವಿ ಕುಲದವರು ಹಾಗೂ ಕೆಹಾತನ ಗೋತ್ರದವರು ಆದ ಆರೋನನ ಕುಟುಂಬದವರಿಗೆ ಚೀಟು ಮೊದಲು ಬಿದ್ದಿತು.
- Verse 10: ಆದ್ದರಿಂದ ಇಸ್ರಯೇಲರು ಅವರಿಗೆ ಯೆಹೂದ ಮತ್ತು ಸಿಮೆಯೋನ್ ಕುಲಗಳಿಂದ ಕೆಳಗೆ ಹೇಳಿರುವ ನಗರಗಳನ್ನು ಕೊಟ್ಟರು:
- Verse 11: ಇವುಗಳಲ್ಲಿ ಯೆಹೂದ ಮಲೆನಾಡಿನ ಹೆಬ್ರೋನೆಂಬ ಗೋಮಾಳ ಸಹಿತವಾದ ಕಿರ್ಯತರ್ಬವೂ ಸೇರಿರುತ್ತದೆ. (ಕಿರ್ಯತರ್ಬ ಎಂದರೆ ಅನಾಕನ ತಂದೆಯಾದ ಅರ್ಬನನಗರ).
- Verse 12: ಆದರೆ ಇದಕ್ಕೆ ಸೇರಿದ ಹೊಲಗಳನ್ನು ಮತ್ತು ಗ್ರಾಮಗಳನ್ನು ಯಫುನ್ನೆಯ ಮಗ ಕಾಲೇಬನಿಗೆ ಕೊಟ್ಟರು.
- Verse 13: ಯಾಜಕ ಆರೋನನ ವಂಶದವರಿಗೆ ಮೇಲೆ ಹೇಳಿದ ಎರಡು ಕುಲಗಳಿಂದ ಹೆಬ್ರೋನ್ ಎಂಬ ಆಶ್ರಯ ನಗರ.
- Verse 14: ಲಿಬ್ನಾ, ಯತ್ತೀರ್, ಎಷ್ಟೆಮೋಹ
- Verse 15: ಹೋಲೋನ್, ದೆಬೀರ್, ಅಯಿನ್, ಯುಟ್ಟಾ, ಬೇತ್ ಷೆಮೆಷ್ ಎಂಬ ಒಂಬತ್ತು ಗೋಮಾಳ ಸಹಿತವಾದ ನಗರಗಳು
- Verse 16: ಹೋಲೋನ್, ದೆಬೀರ್, ಅಯಿನ್, ಯುಟ್ಟಾ, ಬೇತ್ ಷೆಮೆಷ್ ಎಂಬ ಒಂಬತ್ತು ಗೋಮಾಳ ಸಹಿತವಾದ ನಗರಗಳು
- Verse 17: ಹಾಗೂ ಬೆನ್ಯಾಮೀನ್ ಕುಲದಿಂದ
- Verse 18: ಗಿಬ್ಯೋನ್, ಗೆಬ, ಗೆನತೋತ್, ಅಲ್ಮೋನ್ ಎಂಬ ನಾಲ್ಕು ಗೋಮಾಳ ಸಹಿತವಾದ ನಗರಗಳು ದೊರೆತವು.
- Verse 19: ಯಾಜಕನಾದ ಆರೋನನ ವಂಶದವರ ಪಾಲಿಗೆ ಬಂದಂಥ ಗೋಮಾಳ ಸಹಿತವಾದ ನಗರಗಳು ಹದಿಮೂರು.
- Verse 20: ಲೇವಿಯರಾದ ಕೆಹಾತ್ಯರ ಉಳಿದ ಕುಟುಂಬಗಳಿಗೆ
- Verse 21: ಎಫ್ರಯಿಮ್ ಸೊತ್ತಿನಿಂದ ಬೆಟ್ಟದಲ್ಲಿರುವ ಶೆಕೆಮೆಂಬ ಆಶ್ರಯ ನಗರ,
- Verse 22: ಗೆಜೆರ್, ಕಿದ್ ಚೈಮ್ ಹಾಗೂ ಬೇತ್ ಹೋರೋನ್ ಎಂಬ ಗೋಮಾಳಸಹಿತವಾದ ನಾಲ್ಕು ನಗರಗಳು,
- Verse 23: ದಾನ್ಯರ ಸೊತ್ತಿನಿಂದ ಎಲ್ಲೆಕೇ, ಗಿಬ್ಬೆತೋನ್,
- Verse 24: ಅಯ್ಯಾಲೋನ್, ಗತ್ ರಿಮ್ಮೋನ್ ಎಂಬ ಗೋಮಾಳಸಹಿತವಾದ ನಾಲ್ಕು ಪಟ್ಟಣಗಳು,
- Verse 25: ಮನಸ್ಸೆಕುಲದ ಅರ್ಧಜನರ ಸೊತ್ತಿನಿಂದ ತಾನಾಕ್, ಗತ್ ರಿಮ್ಮೋನ್ ಎಂಬ ಎರಡು ಗೋಮಾಳಸಹಿತವಾದ ನಗರಗಳು ಚೀಟಿನಿಂದ ದೊರಕಿದವು.
- Verse 26: ಒಟ್ಟಾರೆ ಕೆಹಾತ್ಯರಿಗೆ ಸಿಕ್ಕಿದಂಥ ಗೋಮಾಳ ಸಹಿತವಾದ ನಗರಗಳು ಹತ್ತು.
- Verse 27: ಗೇರ್ಷೋನ್ಯರ ಕುಟುಂಬ಼ಗಳಿಗೆ ಅರ್ಧ ಮನಸ್ಸೆಯವರ ಸೊತ್ತಿನಿಂದ ದೊರಕಿದವುಗಳು ಇವು: ಕೊಲೆ ಮಾಡಿದವನಿಗೆ ಆಶ್ರಯನಗರವಾದ ಬಾಷಾನಿನ ಗೋಲಾನ್, ಬೆಯೆಷ್ಟೆರಾ ಎಂಬ ಗೋಮಾಳ ಸಹಿತವಾದ ಎರಡು ನಗರಗಳು;
- Verse 28: ಇಸ್ಸಾಕಾರ್ ಸೊತ್ತಿನಿಂದ ಕಿಷ್ಯೋನ್, ದಾಬೆರತ್
- Verse 29: ಯರ್ಮೂತ್, ಎಂಗನ್ನೀಮ್ ಎಂಬ ನಾಲ್ಕು ಗೋಮಾಳ ಸಹಿತವಾದ ನಗರಗಳು;
- Verse 30: ಆಶೇರ್ ಕುಲದಿಂದ ಮಿಶಾಲ್, ಅಬ್ದೋನ್,
- Verse 31: ಹೆಲ್ಕಾತ್, ರೆಹೋಬ್ ಎಂಬ ನಾಲ್ಕು ಗೋಮಾಳ ಸಹಿತವಾದ ನಗರಗಳು;
- Verse 32: ನಫ್ತಾಲಿ ಸೊತ್ತಿನಿಂದ ಕೊಲೆಮಾಡಿದವನಿಗೆ ಆಶ್ರಯನಗರವಾದ ಗಲಿಲೇಯದ ಕೆದೆಷ್, ಹಮ್ಮೋತ್ ದೋರ್, ಕರ್ತಾನ್ ಎಂಬ ಗೋಮಾಳ ಸಹಿತವಾದ ಮೂರು ನಗರಗಳು.
- Verse 33: ಹೀಗೆ ಗೇರ್ಷೋನ್ಯರಿಗೆ ಸಿಕ್ಕಿದ ಗೋಮಾಳ ಸಹಿತವಾದ ಒಟ್ಟು ನಗರಗಳು ಹದಿಮೂರು.
- Verse 34: ಮಿಕ್ಕ ಲೇವಿಯರಾದ ಮೆರಾರೀ ಗೋತ್ರದವರಿಗೆ ಜೆಬುಲೂನ್ ಸೊತ್ತಿನಿಂದ ಯೊಕ್ನೆಯಾಮ್, ಕರ್ತಾ,
- Verse 35: ದಿಮ್ನಾ ಹಾಗೂ ನಹಲಾಲ್ ಎಂಬ ಗೋಮಾಳ ಸಹಿತವಾದ ನಾಲ್ಕು ನಗರಗಳು;
- Verse 36: ರೂಬೇನ್ಯರ ಸೊತ್ತಿನಿಂದ ಬೆಚೆರ್, ಯಹಚಾ,
- Verse 37: ಕೆದೇಮೋತ್ ಹಾಗೂ ಮೇಫಾಗತ್ ಎಂಬ ಗೋಮಾಳ ಸಹಿತವಾದ ನಾಲ್ಕು ನಗರಗಳು;
- Verse 38: ಗಾದ್ಯರ ಸೊತ್ತಿನಿಂದ ಕೊಲೆಮಾಡಿದವನಿಗೆ ಆಶ್ರಯ ನಗರವಾಗಿರುವ ಗಿಲ್ಯಾದಿನ ರಾಮೋತ್, ಮಹನಯಿಮ್,
- Verse 39: ಹೆಷ್ಬೋನ್ ಹಾಗೂ ಯಗ್ಜೇರ್ ಎಂಬ ಗೋಮಾಳ ಸಹಿತವಾದ ನಾಲ್ಕು ನಗರಗಳು ಸಿಕ್ಕಿದವು.
- Verse 40: ಮಿಕ್ಕ ಲೇವಿಯರಾದ ಮೆರಾರೀ ಗೋತ್ರಗಳಿಗೆ ಚೀಟಿನಿಂದ ಹೀಗೆ ದೊರೆತ ನಗರಗಳು ಒಟ್ಟು ಹನ್ನೆರಡು.
- Verse 41: ಲೇವಿಯರಿಗೆ ಇಸ್ರಯೇಲರ ನಡುವೆ ದೊರಕಿದ ಗೋಮಾಳ ಸಹಿತವಾದ ನಗರಗಳು ಒಟ್ಟು ನಾಲ್ವತ್ತೆಂಟು.
- Verse 42: ಈ ನಗರಗಳಲ್ಲಿ ಪ್ರತಿ ಒಂದಕ್ಕೂ ಗೋಮಾಳವಿರುತ್ತದೆ. ಎಲ್ಲ ನಗರಗಳಲ್ಲೂ ಹೀಗೆಯೇ ಇದೆ.
- Verse 43: ಸರ್ವೇಶ್ವರಸ್ವಾಮಿ ಇಸ್ರಯೇಲರ ಪೂರ್ವಜರಿಗೆ ಪ್ರಮಾಣಪೂರ್ವಕವಾಗಿ ವಾಗ್ದಾನ ಮಾಡಿದ ನಾಡನ್ನು ಹೀಗೆ ಅವರಿಗೆ ಕೊಟ್ಟರು. ಇಸ್ರಯೇಲರು ಅದನ್ನು ವಶಪಡಿಸಿಕೊಂಡು ಅದರಲ್ಲಿ ವಾಸಮಾಡಿದರು.
- Verse 44: ಸರ್ವೇಶ್ವರ ಅವರ ಪೂರ್ವಜರಿಗೆ ಆಣೆಯಿಟ್ಟು ಹೇಳಿದಂತೆ ಅವರಿಗೆ ಎಲ್ಲೆಡೆಯಲ್ಲೂ ಶಾಂತಿಸಮಾಧಾನವನ್ನು ಅನುಗ್ರಹಿಸಿದರು. ಶತ್ರುಗಳಾರು ಅವರನ್ನು ಪ್ರತಿಭಟಿಸಿ ನಿಲ್ಲಲಿಲ್ಲ. ಎಲ್ಲರೂ ಅವರ ಕೈವಶವಾದರು.
- Verse 45: ಸರ್ವೇಶ್ವರ ಇಸ್ರಯೇಲರಿಗೆ ಮಾಡಿದ ಅತ್ಯುನ್ನತ ವಾಗ್ದಾನಗಳಲ್ಲಿ ಒಂದೂ ತಪ್ಪಿಹೋಗಲಿಲ್ಲ. ಎಲ್ಲವೂ ನೆರವೇರಿದವು.