पवित्र बाइबिल
ಹಳೆಯ ಒಡಂಬಡಿಕೆ
ಸಂಖ್ಯಾಕಾಂಡ
4ನೇ ಅಧ್ಯಾಯ
- Verse 1: ಸರ್ವೇಶ್ವರ ಸ್ವಾಮಿ, ಮೋಶೆ - ಆರೋನರಿಗೆ ಹೀಗೆಂದು ಆಜ್ಞಾಪಿಸಿದರು:
- Verse 2: “ನೀವು ಲೇವಿಯರಲ್ಲಿಯ ಕೆಹಾತ್ಯರನ್ನು ಎಣಿಕೆಮಾಡಬೇಕು, ಅವರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾದವರು ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು.
- Verse 3: “ನೀವು ಲೇವಿಯರಲ್ಲಿಯ ಕೆಹಾತ್ಯರನ್ನು ಎಣಿಕೆಮಾಡಬೇಕು, ಅವರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾದವರು ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಗೋತ್ರಕುಟುಂಬಗಳ ಪ್ರಕಾರ ಲೆಕ್ಕಿಸಬೇಕು.
- Verse 4: “ಕೆಹಾತ್ಯರು ಕೈಗೊಳ್ಳಬೇಕಾದ ಕರ್ತವ್ಯಗಳು ಇವು: ದೇವದರ್ಶನದ ಗುಡಾರದಲ್ಲಿ ಪರಮ ಪವಿತ್ರವಾದ ವಸ್ತುಗಳನ್ನು ಅವರು ನೋಡಿಕೊಳ್ಳಬೇಕು.
- Verse 5: ದಂಡು ಹೊರಡುವಾಗ ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಗರ್ಭಗುಡಿಯನ್ನು ಮರೆಮಾಡುವ ತೆರೆಯನ್ನು ಇಳಿಸಿ ಅದರಿಂದ ಆಜ್ಞಾಶಾಸನಗಳ ಮಂಜೂಷವನ್ನು ಮುಚ್ಚಬೇಕು.
- Verse 6: ಅದರ ಮೇಲೆ ಹಸನಾದ ತೊಗಲನ್ನು ಮತ್ತು ನೀಲಿ ಬಟ್ಟೆಯನ್ನು ಹೊದಿಸಬೇಕು. (ಮಂಜೂಷದ ಬಳೆಗಳಿಗೆ) ಹೊರುವ ಕೋಲುಗಳನ್ನು ಸಿಕ್ಕಿಸಬೇಕು.
- Verse 7: “ಸನ್ನಿಧಿ ಕಾಣಿಕೆಯ ಮೇಜಿನ ಮೇಲೆ ನೀಲಿಬಟ್ಟೆಯನ್ನು ಹಾಸಿ ಅದರ ಮೇಲೆ ಹರಿವಾಣಗಳನ್ನು, ಧೂಪಾರತಿಗಳನ್ನು, ಹೂಜಿಗಳನ್ನು ಹಾಗೂ ದಾನ್ಯದ್ರವ್ಯಾರ್ಪಣೆಯ ಬಟ್ಟಲುಗಳನ್ನು ಅವರು ಇಡಬೇಕು. ನಿತ್ಯಾರ್ಪಣೆಯ ರೊಟ್ಟಿಗಳನ್ನು ಅದರ ಮೇಲೆ ಇಡಬೇಕು.
- Verse 8: ಅವೆಲ್ಲವುಗಳ ಮೇಲೆ ರಕ್ತವರ್ಣದ ಬಟ್ಟೆಯನ್ನು ಹಾಸಿ, ಹಸನಾದ ತೊಗಲನ್ನು ಹೊದಿಸಿ, ಹೊರುವ ಕೋಲುಗಳನ್ನು ಸಿಕ್ಕಿಸಬೇಕು.
- Verse 9: “ದೀಪಸ್ತಂಭವನ್ನು, ದೀಪದ ಕುಡಿ ತೆಗೆಯುವ ಬಟ್ಟಲುಗಳನ್ನು ಹಾಗೂ ಎಣ್ಣೆಯ ಪಾತ್ರೆಗಳನ್ನು ನೀಲಿಬಟ್ಟೆಯಿಂದ ಮುಚ್ಚಿಡಬೇಕು.
- Verse 10: ಅದಕ್ಕೂ ಅದರ ಎಲ್ಲಾ ಉಪಕರಣಗಳಿಗೂ ಹಸನಾದ ತೊಗಲನ್ನು ಹೊದಿಸಿ ಅವುಗಳನ್ನು ಅಡ್ಡ ದಂಡಕ್ಕೆ ಕಟ್ಟಬೇಕು.
- Verse 11: “ತರುವಾಯ ಅವರು ಬಂಗಾರದ ವೇದಿಕೆಯ ಮೇಲೆ ನೀಲಿ ಬಟ್ಟೆಯನ್ನು ಹಾಸಿ, ಹಸನಾದ ತೊಗಲನ್ನು ಹೊದಿಸಿ, ಹೊರುವ ಕೋಲುಗಳನ್ನು ಹಾಕಬೇಕು.
- Verse 12: ದೇವಸ್ಥಾನದ ಸೇವೋಪಕರಣಗಳನ್ನೆಲ್ಲಾ ನೀಲಿ ಬಟ್ಟೆಯಲ್ಲಿಟ್ಟು, ಹಸನಾದ ತೊಗಲನ್ನು ಹೊದಿಸಿ ಅಡ್ಡ ದಂಡಕ್ಕೆ ಕಟ್ಟಬೇಕು.
- Verse 13: ಬಲಿಪೀಠದ ಬೂದಿಯನ್ನು ತೆಗೆದುಬಿಟ್ಟು ಆ ಪೀಠದ ಮೇಲೆ ಊದಾ ವರ್ಣದ ಬಟ್ಟೆಯನ್ನು ಹಾಸಿ
- Verse 14: ಅದಕ್ಕೆ ಸಂಬಂಧಪಟ್ಟ ಅಗ್ಗಿಷ್ಠಿಕೆಗಳು, ಮುಳ್ಳುಗಳು, ಸಲಿಕೆಗಳು ಹಾಗೂ ಬೋಗುಣಿಗಳು ಮುಂತಾದ ಉಪಕರಣಗಳನ್ನೆಲ್ಲಾ ಮೇಲೆ ಇಟ್ಟು, ಹಸನಾದ ತೊಗಲನ್ನು ಹೊದಿಸಿ ಹೊರುವ ಕೋಲುಗಳನ್ನು ಹಾಕಬೇಕು.
- Verse 15: ಆರೋನನು ಮತ್ತು ಅವನ ಮಕ್ಕಳು ದಂಡು ಹೊರಡುವ ಕಾಲದಲ್ಲಿ ದೇವಸ್ಥಾನದ ಎಲ್ಲ ಸಾಮಾನುಗಳನ್ನು ಮುಚ್ಚಿ ಸಿದ್ಧಮಾಡಿದ ನಂತರ ಕೆಹಾತ್ಯರು ಅವುಗಳನ್ನು ಹೊರುವುದಕ್ಕೆ ಬರಬೇಕು. ಇವರು ದೇವಸ್ಥಾನದ ಸಾಮಾನುಗಳನ್ನು ಮುಟ್ಟಬಾರದು. ಮುಟ್ಟಿದರೆ ಬದುಕಲಾರರು. ಕೆಹಾತ್ಯರು ದೇವದರ್ಶನದ ಗುಡಾರದ ಸಲಕರಣೆಗಳಲ್ಲಿ ಹೊರಬೇಕಾದವುಗಳು ಇವೇ.
- Verse 16: ಮಹಾಯಾಜಕ ಆರೋನನ ಮಗ ಎಲ್ಲಾಜಾರನು ದೀಪದ ಎಣ್ಣೆಯನ್ನು, ಪರಿಮಳ ಧೂಪವನ್ನು, ಅನುದಿನ ನೈವೇದ್ಯ ಮಾಡುವ ಧಾನ್ಯದ್ರವ್ಯಗಳನ್ನು ಹಾಗೂ ಅಭಿಷೇಕ ತೈಲವನ್ನು ತನ್ನ ವಶದಲ್ಲೇ ಇಟ್ಟುಕೊಳ್ಳಬೇಕು. ದೇವದರ್ಶನದ ಗುಡಾರದ ಎಲ್ಲ ಭಾಗಗಳು, ಅದರಲ್ಲಿರುವ ಸಮಸ್ತ ವಸ್ತುಗಳು ಪಾತ್ರೆಪರಿಕರಗಳು ಹಾಗೂ ಅವುಗಳಲ್ಲಿರುವುದೆಲ್ಲವೂ ಅವನ ಮೇಲ್ವಿಚಾರಣೆಯಲ್ಲಿರಬೇಕು.
- Verse 17: ಸರ್ವೇಶ್ವರ ಮೋಶೆ - ಆರೋನರಿಗೆ ಹೀಗೆಂದು ಆಜ್ಞಾಪಿಸಿದರು:
- Verse 18: “ಕೆಹಾತ್ಯರ ಗೋತ್ರಕುಟುಂಬಗಳವರು ಲೇವಿಯರೊಳಗೆ ಉಳಿಯದೆ ನಾಶವಾಗುವುದಕ್ಕೆ ಆಸ್ಪದಕೊಡಬೇಡಿ.
- Verse 19: ಪರಮ ಪವಿತ್ರವಾದ ವಸ್ತುಗಳ ಹತ್ತಿರಕ್ಕೆ ಬರುವಾಗ ಅವರು ಸಾಯದಂತೆ ಎಚ್ಚರಿಕೆ ವಹಿಸಿರಿ. ಆರೋನನು ಮತ್ತು ಅವನ ಮಕ್ಕಳು ಒಳಗೆ ಬಂದು ಅವರವರ ಕೆಲಸಗಳನ್ನು ಹೊರಬೇಕಾದ ಹೊರೆಗಳನ್ನು ಗೊತ್ತುಮಾಡಬೇಕು.
- Verse 20: ಕೆಹಾತ್ಯರೇ ಒಳಗೆ ಬಂದು, ಒಂದು ಕ್ಷಣ ಮಾತ್ರವೂ ಆ ಪವಿತ್ರ ವಸ್ತುಗಳನ್ನು ನೋಡದಿರಲಿ; ನೋಡಿ ಸಾಯದಿರಲಿ.
- Verse 21: ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆ ಇದು:
- Verse 22: “ನೀನು ಗೇರ್ಷೋನ್ಯರನ್ನು ಲೆಕ್ಕಿಸಬೇಕು. ಅವರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾದವರು ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಗೋತ್ರಕುಟುಂಬದ ಪ್ರಕಾರ ಎಣಿಸಬೇಕು.
- Verse 23: “ನೀನು ಗೇರ್ಷೋನ್ಯರನ್ನು ಲೆಕ್ಕಿಸಬೇಕು. ಅವರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾದವರು ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾದವರನ್ನು ಗೋತ್ರಕುಟುಂಬದ ಪ್ರಕಾರ ಎಣಿಸಬೇಕು.
- Verse 24: “ಪರಿಚರ್ಯ ಮಾಡುವುದರಲ್ಲೂ ಹೊರೆಗಳನ್ನು ಹೊರುವುದರಲ್ಲೂ ಗೇರ್ಷೋನ್ಯರು ಮಾಡಬೇಕಾದ ಕರ್ತವ್ಯ ಇವು:
- Verse 25: ಅವರು ದೇವದರ್ಶನದ ಗುಡಾರದ ಬಟ್ಟೆಗಳನ್ನು ಹೊರಬೇಕು - ಅಂದರೆ; ಗುಡಾರ ಅದರ ಹೊದಿಕೆ ಅದರ ಮೇಲಿನ ಹಸನಾದ ತೊಗಲಿನ ಹೊದಿಕೆ, ದೇವದರ್ಶನದ ಗುಡಾರದ ಬಾಗಿಲಿನ ಪರದೆ,
- Verse 26: ಗುಡಾರದ ಮತ್ತು ಬಲಿಪೀಠದ ಸುತ್ತಣ ಅಂಗಳದ ತೆರೆಗಳು, ಅದರ ಬಾಗಿಲಿನ ಪರದೆ, ಹಗ್ಗಗಳು ಮತ್ತು ಅವುಗಳ ಎಲ್ಲ ಉಪಕರಣಗಳು, ಇವುಗಳನ್ನು ಹೊರಬೇಕು; ಮತ್ತು ಇವುಗಳಿಗೆ ಸಂಬಂಧಪಟ್ಟ ಎಲ್ಲ ಕೆಲಸಗಳನ್ನು ಅವರೇ ಮಾಡಬೇಕು.
- Verse 27: ಗೇರ್ಷೋನ್ಯರು ಹೊರೆ ಹೊರುವುದರಲ್ಲೂ ಬೇರೆ ಪರಿಚರ್ಯ ಮಾಡುವುದರಲ್ಲೂ ಆರೋನನ ಮತ್ತು ಅವನ ಮಕ್ಕಳ ಅಪ್ಪಣೆಯ ಪ್ರಕಾರವೇ ನಡೆಯಬೇಕು. ನೀವೇ ಹೊರೆಗಳನ್ನು ಗೊತ್ತುಮಾಡಿ ಅವರವರ ವಶಕ್ಕೆ ಕೊಡಬೇಕು.
- Verse 28: ದೇವದರ್ಶನದ ಗುಡಾರದ ವಿಷಯದಲ್ಲಿ ಗೇರ್ಷೋನ್ಯರು ಮಾಡಬೇಕಾದ ಕರ್ತವ್ಯ ಇದೇ. ಮಹಾಯಾಜಕ ಆರೋನನ ಮಗ ಈತಾಮಾರನು ಅವರ ಮೇಲ್ವಿಚಾರಣೆಯನ್ನು ಮಾಡಬೇಕು
- Verse 29: “ಮೆರಾರೀಯರಲ್ಲೂ ಯಾರಾರು ಮೂವತ್ತರಿಂದ ಐವತ್ತು ವರ್ಷ ವಯಸ್ಸಿನವರಿದ್ದಾರೋ ಹಾಗೂ
- Verse 30: ದೇವದರ್ಶನದ ಗುಡಾರದ ಸೇವೆಮಾಡಲು ಯೋಗ್ಯರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಎಣಿಕೆಮಾಡು.
- Verse 31: ದೇವದರ್ಶನದ ಗುಡಾರದ ವಿಷಯದಲ್ಲಿ ಅವರು ಮಾಡಬೇಕಾದ ಕರ್ತವ್ಯಗಳು ಯಾವುವೆಂದರೆ -
- Verse 32: ಅವರು ಗುಡಾರದ ಚೌಕಟ್ಟುಗಳನ್ನು, ಅಗುಳಿಗಳನ್ನು, ಕಂಬಗಳನ್ನು, ಗದ್ದಿಗೆ ಕಲ್ಲುಗಳನ್ನು, ಗೂಟಗಳನ್ನು, ಹಗ್ಗಗಳನ್ನು ಮತ್ತು ಅವುಗಳ ಎಲ್ಲ ಉಪಕರಣಗಳನ್ನು ಹೊರಬೇಕು. ಅವರವರ ಹೊರೆಗಳನ್ನೆಲ್ಲ ನೀವೇ ಹೆಸರಿಸಿ ಗೊತ್ತುಮಾಡಬೇಕು.
- Verse 33: ದೇವದರ್ಶನದ ಗುಡಾರದ ವಿಷಯದಲ್ಲಿ ಮೆರಾರೀಯರು ಮಾಡಬೇಕಾದ ಕೆಲಸ ಇದೇ. ಅವರು ಮಹಾಯಾಜಕ ಆರೋನನ ಮಗ ಈತಮಾರನ ಕೈಕೆಳಗೆ ಇದನ್ನೆಲ್ಲಾ ಮಾಡಬೇಕು.”
- Verse 34: ಮೋಶೆ ಹಾಗು ಆರೋನರು ಮತ್ತು ಸಮೂಹದ ಮುಖ್ಯಸ್ಥರು ಕೆಹಾತ್ಯರಲ್ಲಿ ಯಾರಾರು ಮೂವತ್ತರಿಂದ ಐವತ್ತು ವರ್ಷದವರೆಗಿನ ವಯಸ್ಸುಳ್ಳವರಾಗಿದ್ದಾರೋ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಎಣಿಸಿದರು.
- Verse 35: ಮೋಶೆ ಹಾಗು ಆರೋನರು ಮತ್ತು ಸಮೂಹದ ಮುಖ್ಯಸ್ಥರು ಕೆಹಾತ್ಯರಲ್ಲಿ ಯಾರಾರು ಮೂವತ್ತರಿಂದ ಐವತ್ತು ವರ್ಷದವರೆಗಿನ ವಯಸ್ಸುಳ್ಳವರಾಗಿದ್ದಾರೋ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದಾರೋ ಅವರನ್ನು ಗೋತ್ರಕುಟುಂಬಗಳ ಪ್ರಕಾರ ಎಣಿಸಿದರು.
- Verse 36: ಅವರಲ್ಲಿ ಕುಟುಂಬಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ 2750:
- Verse 37: ಸರ್ವೇಶ್ವರ ಮೋಶೆಗೆ ಕೊಟ್ಟ ಆಜ್ಞೆಯಂತೆ ಕೆಹಾತ್ಯರನ್ನು ಮೋಶೆ - ಆರೋನರು ಎಣಿಕೆಮಾಡಿದಾಗ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದವರು ಇಷ್ಟೇ ಜನ.
- Verse 38: ಗೇರ್ಷೋನ್ಯರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾಗಿದ್ದವರ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು
- Verse 39: ಗೇರ್ಷೋನ್ಯರಲ್ಲಿ ಮೂವತ್ತರಿಂದ ಐವತ್ತು ವರ್ಷದವರೆಗೆ ವಯಸ್ಸಾಗಿದ್ದವರ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು
- Verse 40: ಗೋತ್ರಕುಟುಂಬದ ಪ್ರಕಾರ ಎಣಿಕೆಯಾದವರ ಸಂಖ್ಯೆ - 2630:
- Verse 41: ಸರ್ವೇಶ್ವರನ ಅಪ್ಪಣೆಯ ಮೇರೆಗೆ ಮೋಶೆ ಹಾಗು ಆರೋನರಿಂದ ಎಣಿಕೆಯಾಗಿ ದೇವದರ್ಶನದ ಗುಡಾರದ ಸೇವೆಗೆ ಯೋಗ್ಯರಾಗಿದ್ದವರು ಇಷ್ಟೇ ಮಂದಿ.
- Verse 42: ಮೆರಾರೀಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾದವರ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು
- Verse 43: ಮೆರಾರೀಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾದವರ ಹಾಗೂ ದೇವದರ್ಶನದ ಗುಡಾರದ ಸೇವೆಗೆ ಸೇರಿದವರೆಂದು
- Verse 44: ಗೋತ್ರಕುಟುಂಬಗಳ ಪ್ರಕಾರ ಎಣಿಕೆಯಾದವರ ಸಂಖ್ಯೆ -3200:
- Verse 45: ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆ ಮೆರಾರೀಯರನ್ನು ಮೋಶೆ - ಆರೋನರು ಎಣಿಕೆ ಮಾಡಿದಾಗ ಅವರ ಸಂಖ್ಯೆ ಇಷ್ಟೇ ಇತ್ತು.
- Verse 46: ಮೋಶೆ ಹಾಗು ಆರೋನರು ಮತ್ತು ಇಸ್ರಯೇಲರ ಮುಖ್ಯಸ್ಥರು ಲೇವಿಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾಗಿದ್ದವರನ್ನು ಮತ್ತು ದೇವದರ್ಶನದ ಗುಡಾರದ ಸೇವೆಯನ್ನು ಕೈಗೊಳ್ಳಲು
- Verse 47: ಮೋಶೆ ಹಾಗು ಆರೋನರು ಮತ್ತು ಇಸ್ರಯೇಲರ ಮುಖ್ಯಸ್ಥರು ಲೇವಿಯರಲ್ಲಿ ಮೂವತ್ತರಿಂದ ಐವತ್ತರವರೆಗೆ ವಯಸ್ಸಾಗಿದ್ದವರನ್ನು ಮತ್ತು ದೇವದರ್ಶನದ ಗುಡಾರದ ಸೇವೆಯನ್ನು ಕೈಗೊಳ್ಳಲು
- Verse 48: ಹಾಗೂ ಅದರ ಹೊರೆಗಳನ್ನು ಹೊರಲು ಶಕ್ತರಾಗಿದ್ದವರನ್ನು ಎಣಿಕೆಮಾಡಿದಾಗ ದೊರೆತ ಸಂಖ್ಯೆ - 8580:
- Verse 49: ಸರ್ವೇಶ್ವರ ಮೋಶೆಗೆ ಆಜ್ಞಾಪಿಸಿದಂತೆಯೇ ಪ್ರತಿಯೊಬ್ಬನಿಗೆ ಅವನವನ ಕೆಲಸ ಹಾಗೂ ಹೊಣೆಯನ್ನು ಗೊತ್ತುಮಾಡಲಾಯಿತು. ಹೀಗೆ ಸರ್ವೇಶ್ವರನ ಆಜ್ಞೆಯ ಮೇರೆಗೆ ಜನಗಣತಿ ನಡೆಯಿತು.