வேதாகமம்
ಹಳೆಯ ಒಡಂಬಡಿಕೆ
ಆದಿಕಾಂಡ
36ನೇ ಅಧ್ಯಾಯ
- Verse 1: ಎತೋಮನೆಂಬ ಏಸಾವನ ವಂಶಾವಳಿ ಇದು:
- Verse 2: ಏಸಾವನು ಕಾನಾನ್ಯರ ಮಹಿಳೆಯರಲ್ಲಿ ಹಿತ್ತಿಯನಾದ ಏಲೋನನ ಮಗಳಾದ ಆದಾಳನ್ನು, ಹಿವ್ವಿಯನಾದ ಸಿಬೆಯೋನನ ಮಗಳಾದ ಅನಾಹಳ ಮಗಳು ಒಹೊಲೀಬಾಮಳನ್ನು ಮತ್ತು
- Verse 3: ಇಷ್ಮಾಯೇಲನ ಮಗಳು ಹಾಗು ನೆಬಾಯೋತನ ಸಹೋದರಿ ಬಾಸೆಮತಳನ್ನೂ ಮದುವೆ ಆಗಿದ್ದನು.
- Verse 4: ಏಸಾವನಿಗೆ ಆದಾಳು ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು.
- Verse 5: ಒಹೊಲೀಬಾಮಳು ಯೊಗೂಷನನ್ನು, ಯಳಾಮನನ್ನು ಹಾಗು ಕೋರಹನನ್ನು ಹೆತ್ತಳು. ಇವರೆಲ್ಲರು ಏಸಾವನು ಕಾನಾನ್ ನಾಡಿನಲ್ಲಿ ಇದ್ದಾಗ ಹುಟ್ಟಿದರು.
- Verse 6: ಏಸಾವನು ತನ್ನ ಹೆಂಡತಿಯರನ್ನೂ ಗಂಡುಹೆಣ್ಣು ಮಕ್ಕಳನ್ನೂ ತನ್ನ ಮನೆಗೆ ಸೇರಿದ ಎಲ್ಲರನ್ನೂ, ತನಗಿದ್ದ ಪಶುಪ್ರಾಣಿಗಳನ್ನೂ ಕಾನಾನ್ ನಾಡಿನಲ್ಲಿ ತಾನು ಸಂಪಾದಿಸಿದ್ದ ಆಸ್ತಿಪಾಸ್ತಿ ಎಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮ ಯಕೋಬನ ಬಳಿಯಿಂದ ಹೊರನಾಡಿಗೆ ಹೊರಟುಹೋದನು.
- Verse 7: ಸಿರಿಸಂಪತ್ತು ಹೆಚ್ಚಾಗಿ ಇದ್ದುದರಿಂದ ಅವರಿಬ್ಬರೂ ಒಂದೇ ಸ್ಥಳದಲ್ಲಿ ವಾಸಮಾಡಲು ಅನುಕೂಲವಾಗಿರಲಿಲ್ಲ; ಪಶುಪ್ರಾಣಿಗಳು ಬಹಳ ಆಗಿದ್ದುದರಿಂದ ಅವರು ತಂಗಿದ್ದ ನಾಡು ಅವರಿಗೆ ಸಾಲದೆ ಹೋಯಿತು.
- Verse 8: ಈ ಕಾರಣ ಏದೋಮನೆಂಬ ಏಸಾವನು ಸೇಯೀರ್ ಮಲೆನಾಡಿಗೆ ಹೋಗಿ ಅಲ್ಲೇ ವಾಸವಾಗಿದ್ದನು.
- Verse 9: ಸೇಯೀರ್ ಮಲೆನಾಡಿನಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶಾವಳಿ ಹೀಗಿದೆ:
- Verse 10: ಏಸಾವನಿಗೆ ಹೆಂಡತಿ ಆದಾಳಲ್ಲಿ ಮಗ ಎಲೀಫಜನು ಹುಟ್ಟಿದನು; ಹೆಂಡತಿ ಬಾಸೆಮತಳಲ್ಲಿ ಮಗ ರೆಗೂವೇಲನು ಹುಟ್ಟಿದನು.
- Verse 11: ಎಲೀಫಜನಿಗೆ ತೇಮಾನ್, ಓಮಾರ್, ಚೆಫೋ, ಗತಾಮ್, ಕೆನಜ್, ಎಂಬ ಐದು ಮಕ್ಕಳು.
- Verse 12: ಏಸಾವನ ಮಗನಾದ ಈ ಎಲೀಫಜನಿಗೆ ತಿಮ್ನ ಎಂಬ ಉಪಪತ್ನಿ ಇದ್ದಳು. ಇವಳು ಅವನಿಗೆ ಅಮಾಲೇಕನನ್ನು ಹೆತ್ತಳು. ಇವರೇ ಏಸಾವನ ಹೆಂಡತಿ ಆದಾಳ ಮೊಮ್ಮಕ್ಕಳು.
- Verse 13: ರೆಗೂವೇಲನಿಗೆ ನಹತ್, ಜೆರಹ, ಶಮ್ಮಾ, ಮಿಜ್ಜಾ ಎಂಬ ನಾಲ್ಕು ಮಕ್ಕಳು. ಇವರು ಏಸಾವನ ಹೆಂಡತಿ ಬಾಸೆಮತಳ ಮೊಮ್ಮಕ್ಕಳು.
- Verse 14: ಏಸಾವನ ಹೆಂಡತಿಯೂ ಸಿಬೆಯೋನನ ಮಗ ಅನಾಹನ ಮಗಳೂ ಆಗಿದ್ದ ಒಹೊಲೀಬಾಮಳಿಗೆ ಯೆಗೂಷ್, ಯಳಾಮ್ ಮತ್ತು ಕೋರಹ ಎಂಬ ಮೂರು ಮಕ್ಕಳಿದ್ದರು.
- Verse 15: ಏಸಾವನ ವಂಶದ ಕುಲನಾಯಕರು: ಏಸಾವನ ಜೇಷ್ಠಪುತ್ರನಾದ ಎಲೀಫಜನಿಂದ ತೇಮಾನ, ಏಮಾರ, ಚೆಫೋ, ಕೆನೆಜ್,
- Verse 16: ಕೊರಹ, ಗತಾಮ, ಅಮಾಲೇಕ ಎಂಬ ಕುಲನಾಯಕರು ಹುಟ್ಟಿದರು. ಈ ಅಧಿಪತಿಗಳು ಎದೋಮ್ಯರ ನಾಡಿನಲ್ಲಿ ಆದಾಳ ಸಂತತಿಯಲ್ಲಿ ಹುಟ್ಟಿದರು.
- Verse 17: ಏಸಾವನ ಮಗ ರೆಗೂವೇಲನಿಗೆ ನಹತ, ಜೆರಹ, ಶಮ್ಮಾ, ಮಿಜ್ಜಾ ಎಂಬ ಕುಲನಾಯಕರು ಹುಟ್ಟಿದರು. ಇವರು ಎದೋಮ್ಯರ ನಾಡಿನಲ್ಲಿ ಏಸಾವನ ಹೆಂಡತಿ ಬಾಸೆಮತಳ ಸಂತತಿಯಲ್ಲಿ ಹುಟ್ಟಿದವರು.
- Verse 18: ಏಸಾವನ ಹೆಂಡತಿ ಒಹೊಲೀಬಾಮಳ ಸಂತಾನದಲ್ಲಿ ಹುಟ್ಟಿದ ಕುಲನಾಯಕರು ಯಾರೆಂದರೆ - ಯೆಗೂಷ್, ಯಳಾಮ ಮತ್ತು ಕೊರಹ. ಇವರೇ ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ್ದ ಒಹೊಲೀಬಾಮಳ ಸಂತಾನದವರು.
- Verse 19: ಎದೋಮನೆನಿಸಿಕೊಳ್ಳುವ ಏಸಾವನಿಂದ ಹುಟ್ಟಿದ ಕುಲಗಳಿಗೆ ಇವರೇ ನಾಯಕರು.
- Verse 20: ಆ ನಾಡಿನ ಮೂಲನಿವಾಸಿಗಳು ಹೋರಿಯನಾದ ಸೇಯೀರನಿಂದ ಹುಟ್ಟಿದವರು. ಲೋಟಾನ್, ಶೋಬಾಲ್, ಸಿದೆಯೋನ್, ಅನಾಹ,
- Verse 21: ದೀಶೋನ್, ಏಚೆರ್, ದೀಶಾನ್, ಎಂದು ಅವರನ್ನು ಹೆಸರಿಸಲಾಗಿತ್ತು. ಅವರು ಎದೋಮ್ಯರ ನಾಡಿನಲ್ಲಿ ಸೇಯೀರನ ಸಂತತಿಯವರಾದ ಹೋರಿಯರಲ್ಲಿ ಹುಟ್ಟಿದ ಕುಲನಾಯಕರು.
- Verse 22: ಲೋಟಾನನಿಗೆ ಹೋರಿ ಮತ್ತು ಹೇಮಾಮ್ ಎಂಬ ಮಕ್ಕಳಿದ್ದರು. ತಿಮ್ನಾ ಎಂಬ ತಂಗಿಯೂ ಇದ್ದಳು.
- Verse 23: ಶೋಬಾಲನ ಮಕ್ಕಳು - ಅಲ್ವಾನ್, ಮಾನಹತ್, ಗೇಬಾಲ್,ಶೆಫೋ ಮತ್ತು ಓನಾಮ್ ಎಂಬುವರು.
- Verse 24: ಸಿಬೆಯೋನನಿಗೆ ಅಯ್ಯಾ ಮತ್ತು ಅನಾಹ ಎಂಬ ಇಬ್ಬರು ಮಕ್ಕಳು. ಈ ಅನಾಹನೇ ತನ್ನ ತಂದೆ ಸಿಬೆಯೋನನ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಕಾಡಿನಲ್ಲಿ ಬಿಸಿ ನೀರಿನ ಒರತೆಗಳನ್ನು ಕಂಡುಹಿಡಿದವನು.
- Verse 25: ಅನಾಹನ ಮಕ್ಕಳು ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮ.
- Verse 26: ದೀಶೋನನ ಮಕ್ಕಳು - ಹೆಮ್ದಾನ್, ಎಷ್ಬಾನ್, ಇತ್ರಾನ್ ಮತ್ತು ಕೆರಾನ್.
- Verse 27: ಏಚೆರನ ಮಕ್ಕಳು - ಬಿಲ್ಹಾನ್, ಜಾವಾನ್ ಮತ್ತು ಆಕಾನ್.
- Verse 28: ದೀಶಾನನ ಮಕ್ಕಳು ಊಚ್ ಮತ್ತು ಅರಾನ್.
- Verse 29: ಹೋರಿಯರಿಂದ ಹುಟ್ಟಿದ ಕುಲನಾಯಕರು ಇವರು - ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
- Verse 30: ದೀಶೋನ್, ಏಚೆರ್ ಮತ್ತು ದೀಶಾನ್. ಹೋರಿಯರಿಂದ ಹುಟ್ಟಿದವರಾಗಿ ಸೇಯೀರ್ ನಾಡಿನಲ್ಲಿ ಅಧಿಪತ್ಯ ನಡೆಸಿದ ಕುಲನಾಯಕರು ಇವರೇ.
- Verse 31: ಇಸ್ರಯೇಲರ ಅರಸರು ಆಳುವುದಕ್ಕೆ ಮುಂಚೆ ಎದೋಮ್ಯರ ನಾಡಲ್ಲಿ ಆಳುತ್ತಿದ್ದ ಅರಸರ ಹೆಸರುಗಳು ಹೀಗಿವೆ:
- Verse 32: ಬೆಯೋರನ ಮಗ ಬಿಲಗನು ಎದೋಮ್ಯರಲ್ಲಿ ಆಳಿದನು, ಅವನ ರಾಜಧಾನಿಯ ಹೆಸರು ದಿನ್ಹಾಬಾ.
- Verse 33: ಬೆಲಗನು ಸತ್ತ ಮೇಲೆ ಬೊಚ್ರದವನಾದ ಚೆರಹನ ಮಗ ಯೋಬಾಬನು ಆಧಿಪತ್ಯಕ್ಕೆ ಬಂದನು.
- Verse 34: ಯೋಬಾಬನು ಸತ್ತ ಮೇಲೆ ತೇಮಾನೀಯರ ನಾಡಿನವನಾದ ಹುಷಾಮನು ಅವನಿಗೆ ಬದಲಾಗಿ ಆಳಿದನು.
- Verse 35: ಹುಷಾಮನು ಸತ್ತ ಮೇಲೆ ಮೊವಾಬ್ಯರ ಬಯಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್.
- Verse 36: ಹದದನು ಸತ್ತ ಮೇಲೆ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.
- Verse 37: ಸಮ್ಲಾಹನು ಸತ್ತ ಮೇಲೆ ನದೀತೀರದಲ್ಲಿನ ರೆಹೋಬೋತೂರಿನ ಸೌಲನು ಅರಸನಾದನು.
- Verse 38: ಸೌಲನು ಸತ್ತ ಮೇಲೆ ಅಕ್ಬೋರನ ಮಗ ಬಾಳ್ಹಾನಾನನು ಅರಸನಾದನು.
- Verse 39: ಅಕ್ಬೋರನ ಮಗ ಬಾಳ್ಹಾನಾನನು ಸತ್ತಾದನಂತರ ಹದದನು ಅರಸನಾದನು; ಅವನ ರಾಜಧಾನಿಯ ಹೆಸರು ಪಾಗು, ಅವನ ಹೆಂಡತಿಯ ಹೆಸರು ಮಹೇಟಬೇಲ್; ಆಕೆ ಮೇಜಾಹಾಬನ ಮಗಳಾದ ಮಟ್ರೀದಳ ಮಗಳು.
- Verse 40: ಸ್ಥಳ - ಕುಲ ನಾಮಗಳ ಪ್ರಕಾರ ಏಸಾವನಿಂದ ಹುಟ್ಟಿದ ಕುಲನಾಯಕರ ಹೆಸರುಗಳು ಇವು; ತಿಮ್ನ, ಅಲ್ವಾ, ಯತೇತ,
- Verse 41: ಒಹೊಲೀಬಾಮಾ, ಏಲಾ, ಪೀನೋನ್,
- Verse 42: ಕೆನಜ್, ತೇಮಾನ್, ಮಿಪ್ಚಾರ, ಮಗ್ಧೀಯೇಲ್, ಗೀರಾಮ್, ಇವರೇ ತಮ್ಮ ನಾಡಿನ ನಿವಾಸಸ್ಥಳಗಳ ಪ್ರಕಾರ ಎದೋಮ್ಯರ ಕುಲನಾಯಕರು. ಈ ಎದೋಮ್ಯರ ಮೂಲಪುರುಷನೇ ಏಸಾವ್.