ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಯೋಬನ ಗ್ರಂಥ
25ನೇ ಅಧ್ಯಾಯ
- Verse 1: ಬಳಿಕ ಶೂಹ್ಯನಾದ ಬಿಲ್ದದನು ಹೀಗೆಂದನು:
- Verse 2: “ದೇವರು ಮಹೋನ್ನತ ಪ್ರಭು; ಭಯಭಕ್ತಿಗೆ ಪಾತ್ರನು ಉನ್ನತಲೋಕದಲ್ಲಿ ಶಾಂತಿಸಮಾಧಾನವನು ಸ್ಥಾಪಿಸಿಹನು.
- Verse 3: ಲೆಕ್ಕವಿದೆಯೇ ಆತನ ಸೇನೆಗಳಿಗೆ? ಆತನ ತೇಜಸ್ಸು ಮೂಡದಿರುವುದು ಯಾರಿಗೆ?
- Verse 4: ನರನು ದೇವರ ದೃಷ್ಟಿಯಲ್ಲಿ ಸಜ್ಜನನಾಗಿರಲು ಸಾಧ್ಯವೆ? ಸ್ತ್ರೀಯರಲ್ಲಿ ಹುಟ್ಟಿದವನು ಪರಿಶುದ್ಧನಾಗಿರುವುದು ಶಕ್ಯವೆ?
- Verse 5: ಆತನ ದೃಷ್ಟಿಗೆ ಚಂದ್ರನೂ ಕಾಂತಿಯುತನಲ್ಲ ನಕ್ಷತ್ರಗಳೂ ನಿರ್ಮಲವಾದವುಗಳಲ್ಲ.
- Verse 6: ಇಂತಿರಲು ಹುಳುವಿನಂಥ ನರನು ಏತರವನು? ಕ್ರಿಮಿಯಂಥ ನರನು ಎಷ್ಟುಮಾತ್ರದವನು?”