வேதாகமம்
ಹಳೆಯ ಒಡಂಬಡಿಕೆ
ಜ್ಞಾನೋಕ್ತಿಗಳು
6ನೇ ಅಧ್ಯಾಯ
- Verse 1: ಮಗನೇ, ನೀನು ನೆರೆಯವನ ಸಾಲಕ್ಕೆ ಹೊಣೆಯಾಗಿದ್ದರೆ, ಪರನಿಗಾಗಿ ಕೈಮೇಲೆ ಕೈಯಿಟ್ಟು ಪ್ರಮಾಣಮಾಡಿದ್ದರೆ,
- Verse 2: ನಿನ್ನ ಮಾತಿನ ಬಲೆಗೆ ಸಿಕ್ಕಿಹಾಕಿಕೊಂಡಿರುವೆ; ನಿನ್ನ ವಾಗ್ದಾನವು ನಿನ್ನನ್ನು ಸೆರೆಹಿಡಿದಿದೆ.
- Verse 3: ಮಗನೇ, ನೀನು ನೆರೆಯವನ ಕೈವಶವಾಗಿರುವೆ; ಈ ಪರಿಮಾಡು ತಪ್ಪಿಸಿಕೊಳ್ಳಬೇಕಾದರೆ:
- Verse 4: ನಿನ್ನ ಕಣ್ಣುಗಳಿಗೆ ನಿದ್ರೆಕೊಡಬೇಡ, ನಿನ್ನಾಕಣ್ಣಿನ ರೆಪ್ಪೆಗಳನ್ನು ಮುಚ್ಚಬೇಡ.
- Verse 5: ಬೇಡನಿಂದ ಓಡುವ ಜಿಂಕೆಯಂತೆ, ಬೇಟೆಗಾರನ ಕೈಯಿಂದ ಹಾರಿಹೋಗುವ ಹಕ್ಕಿಯಂತೆ, ಆ ಬಲೆಯಿಂದ ತಪ್ಪಿಸಿಕೊ.
- Verse 6: ಎಲೈ ಸೋಮಾರಿಯೇ, ಇರುವೆಯ ಬಳಿಗೆ ಹೋಗು; ಅದರ ನಡವಳಿಕೆಯನ್ನು ನೋಡಿ ಜ್ಞಾನಿಯಾಗು.
- Verse 7: ಅದಕ್ಕಿಲ್ಲ ನೋಡು ನಾಯಕ, ಅರಸ ಅಧಿಪತಿ.
- Verse 8: ಆದರೂ ಕೂಡಿಸುತ್ತದೆ ತಿಂಡಿ ಬೇಸಿಗೆಯಲ್ಲಿ, ಸಂಗ್ರಹಿಸುತ್ತದೆ ಧಾನ್ಯ ಸುಗ್ಗಿಯಲ್ಲಿ.
- Verse 9: ಸೋಮಾರಿಯೇ, ಎಷ್ಟು ಹೊತ್ತು ನಿದ್ರಿಸುವೆ? ನಿದ್ರೆಯಿಂದ ಯಾವಾಗ ಎಚ್ಚರಗೊಳ್ಳುವೆ?
- Verse 10: “ಇನ್ನೂ ಸ್ವಲ್ಪ ನಿದ್ರೆ, ತುಸು ತೂಕಡಿಕೆ” ಎನ್ನುವೆಯಾ? “ಕೊಂಚವೇ ನಿದ್ರೆಗಾಗಿ ಕೈ ಮಡಿಚಿಕೊಳ್ಳುವೆ” ಎನ್ನುವೆಯಾ?
- Verse 11: ಬಡತನ ನಿನ್ನ ಮೇಲೆರಗುವುದು ದಾರಿಗಳ್ಳನಂತೆ; ಅಭಾವ ನಿನ್ನ ಮೇಲೆ ಬೀಳುವುದು ಪಂಜುಗಳ್ಳನಂತೆ.
- Verse 12: ದುರುಳನೂ ನೀಚನೂ ಆದವನ ನಡತೆಯನ್ನು ನೋಡು: ಅವನ ಬಾಯಿಂದ ಹೊರಡುವುದು ಕುಟಿಲ ಮಾತು.
- Verse 13: ಅವನು ಕಣ್ಣು ಮಿಟುಕಿಸುತ್ತಾನೆ, ಕಾಲು ಕೆರೆಯುತ್ತಾನೆ, ಬೆರಳ ಸನ್ನೆಯಿಂದಲೆ ಮಾತಾಡುತ್ತಾನೆ.
- Verse 14: ಅವನ ಮನದಲ್ಲಿರುವುದು ಮೂರ್ಖತನ; ಅವನು ಸತತ ಕಲ್ಪಿಸುವುದು ಕೆಡುಕುತನ. ಅವನು ಬಿತ್ತನೆ ಮಾಡುವುದು ಕಾಳಗ, ಕದನ.
- Verse 15: ಆದ್ದರಿಂದ ತಟ್ಟನೆ ಒದಗುವುದು ವಿಪತ್ತು ಮತ್ತೆ ಏಳಲಾಗದಂತಹ ಕಠಿಣ ಆಪತ್ತು.
- Verse 16: ಸರ್ವೇಶ್ವರ ಹಗೆಮಾಡುವಂಥಹವು ಆರು: ಆತ ಖಂಡನೆ ಮಾಡುವಂಥಹವು ಏಳು: ಅಹಂಕಾರ ದೃಷ್ಟಿ, ಕಪಟವಾಡುವ ನಾಲಿಗೆ, ನಿರಪರಾಧಿಯನ್ನು ಕೊಲೆಮಾಡುವ ಕೈ, ದುರಾಲೋಚನೆಯನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತವಕಪಡುವ ಕಾಲು, ಅಸತ್ಯವನ್ನು ಉಸುರುವ ಸುಳ್ಳುಸಾಕ್ಷಿ, ಸೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.
- Verse 17: ಸರ್ವೇಶ್ವರ ಹಗೆಮಾಡುವಂಥಹವು ಆರು: ಆತ ಖಂಡನೆ ಮಾಡುವಂಥಹವು ಏಳು: ಅಹಂಕಾರ ದೃಷ್ಟಿ, ಕಪಟವಾಡುವ ನಾಲಿಗೆ, ನಿರಪರಾಧಿಯನ್ನು ಕೊಲೆಮಾಡುವ ಕೈ, ದುರಾಲೋಚನೆಯನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತವಕಪಡುವ ಕಾಲು, ಅಸತ್ಯವನ್ನು ಉಸುರುವ ಸುಳ್ಳುಸಾಕ್ಷಿ, ಸೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.
- Verse 18: ಸರ್ವೇಶ್ವರ ಹಗೆಮಾಡುವಂಥಹವು ಆರು: ಆತ ಖಂಡನೆ ಮಾಡುವಂಥಹವು ಏಳು: ಅಹಂಕಾರ ದೃಷ್ಟಿ, ಕಪಟವಾಡುವ ನಾಲಿಗೆ, ನಿರಪರಾಧಿಯನ್ನು ಕೊಲೆಮಾಡುವ ಕೈ, ದುರಾಲೋಚನೆಯನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತವಕಪಡುವ ಕಾಲು, ಅಸತ್ಯವನ್ನು ಉಸುರುವ ಸುಳ್ಳುಸಾಕ್ಷಿ, ಸೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.
- Verse 19: ಸರ್ವೇಶ್ವರ ಹಗೆಮಾಡುವಂಥಹವು ಆರು: ಆತ ಖಂಡನೆ ಮಾಡುವಂಥಹವು ಏಳು: ಅಹಂಕಾರ ದೃಷ್ಟಿ, ಕಪಟವಾಡುವ ನಾಲಿಗೆ, ನಿರಪರಾಧಿಯನ್ನು ಕೊಲೆಮಾಡುವ ಕೈ, ದುರಾಲೋಚನೆಯನ್ನು ಕಲ್ಪಿಸುವ ಹೃದಯ, ಕೇಡುಮಾಡಲು ತವಕಪಡುವ ಕಾಲು, ಅಸತ್ಯವನ್ನು ಉಸುರುವ ಸುಳ್ಳುಸಾಕ್ಷಿ, ಸೋದರರಲ್ಲಿ ಜಗಳ ಹುಟ್ಟಿಸುವ ವ್ಯಕ್ತಿ.
- Verse 20: ಮಗನೇ, ನಿನ್ನ ತಂದೆಯ ಆಜ್ಞೆಗೆ ಕಿವಿಗೊಡು, ನಿನ್ನ ತಾಯಿಯ ಉಪದೇಶವನ್ನು ತೊರೆಯದೆ ಮಾಡು.
- Verse 21: ಅವನ್ನು ನಿರಂತರವಾಗಿ ಹೃದಯಕ್ಕೆ ಬಂಧಿಸಿಕೊ; ಕಂಠಾಭರಣವಾಗಿ ಕೊರಳಿಗೆ ಧರಿಸಿಕೊ.
- Verse 22: ನಡೆಯುವಾಗ ಅವು ನಿನಗೆ ಮುಂದಾಳಾಗಿರುವುವು, ಮಲಗುವಾಗ ಅವು ನಿನ್ನನ್ನು ಕಾಯುವುವು, ಎಚ್ಚರಗೊಂಡಾಗ ಅವು ನಿನ್ನೊಡನೆ ಸಂವಾದಿಸುವುವು.
- Verse 23: ಏಕೆಂದರೆ ಆಜ್ಞೆಯೇ ಜ್ಯೋತಿ, ಬೋಧನೆಯೇ ಬೆಳಕು, ಶಿಸ್ತಿನಿಂದ ಕೂಡಿದ ಶಿಕ್ಷಣವೇ ಜೀವನಕ್ಕೆ ಮಾರ್ಗ.
- Verse 24: ಕೆಟ್ಟ ಹೆಂಗಸರ ಸಹವಾಸದಿಂದ, ಪರಸ್ತ್ರೀಯರ ಮಾತಿನ ಮೋಡಿಯಿಂದ, ಅವು ಕಾಪಾಡಬಲ್ಲವು ನಿನ್ನನ್ನು.
- Verse 25: ನಿನ್ನ ಹೃದಯ ಅವಳ ಬೆಡಗನ್ನು ಮೋಹಿಸದಿರಲಿ; ಕಣ್ಣು ಮಿಟುಕಿಸಿ ಅವಳು ನಿನ್ನನ್ನು ವಶಮಾಡಿಕೊಳ್ಳದಿರಲಿ.
- Verse 26: ವೇಶ್ಯೆಯನ್ನು ಕೊಂಡುಕೊಳ್ಳಬಹುದು ತುಂಡುರೊಟ್ಟಿಗೆ, ವ್ಯಭಿಚಾರಿಣಿಯೇ ಬೇಟೆಮಾಡುವಳು ನಿನ್ನ ಸಿರಿಪ್ರಾಣಕ್ಕೆ!
- Verse 27: ಮಡಿಲಲ್ಲಿ ಬೆಂಕಿಯನ್ನು ಇಟ್ಟುಕೊಂಡರೆ ಬಟ್ಟೆಯನ್ನು ಸುಡದೆ ಸುಮ್ಮನಿರುವುದೆ?
- Verse 28: ಧಗಧಗಿಸುವ ಕೆಂಡದ ಮೇಲೆ ನಡೆದರೆ ಅಂಗಾಲು ಸುಟ್ಟುಹೋಗದೆ ಇರುವುದೆ?
- Verse 29: ಅಂತೆಯೆ ನೆರೆಯವನ ಸತಿಯನ್ನು ಕೂಡುವವನ ಗತಿಯು; ಆಕೆಯನ್ನು ಮುಟ್ಟುವವನು ತಪ್ಪಿಸಿಕೊಳ್ಳನು ದಂಡನೆಯನ್ನು.
- Verse 30: ಹಸಿವನ್ನು ನೀಗಿಸಿಕೊಳ್ಳಲು ಕಳವು ಮಾಡಿದರೆ, ಅಷ್ಟು ಹೀಯಾಳಿಸರು ಜನರು ಅಂಥ ಬಡವನನ್ನು.
- Verse 31: ಆದರೂ ಕಳವು ಬಯಲಾದರೆ ತೆರಬೇಕಾಗುವುದು ಏಳರಷ್ಟು; ತೆತ್ತೇ ತೀರಿಸಬೇಕಾಗುವುದು ಮನೆಯ ಆಸ್ತಿಪಾಸ್ತಿಯಷ್ಟು.
- Verse 32: ವ್ಯಭಿಚಾರಿಯು ಕೇವಲ ಬುದ್ಧಿಶೂನ್ಯನು; ತನ್ನೀ ಕೃತ್ಯದಿಂದ ಸ್ವನಾಶಮಾಡಿಕೊಳ್ಳುವನು.
- Verse 33: ಪೆಟ್ಟಿಗೂ ಅಪಕೀರ್ತಿಗೂ ಅವನು ಪಾತ್ರನು; ಅವನಿಗಾಗುವ ಅವಮಾನ ತೊಲಗದು ಎಂದಿಗು.
- Verse 34: ಏಕೆಂದರೆ, ಅವಳ ಪತಿಗಾಗುವ ಮತ್ಸರ ಉದ್ರೇಕಗೊಳ್ಳುವುದು; ಕನಿಕರ ತೋರನು, ಮುಯ್ಯಿ ತೀರಿಸುವ ದಿನದಂದು.
- Verse 35: ಯಾವ ಪ್ರಾಯಶ್ಚಿತ್ತಕ್ಕೂ ಅವನು ಒಪ್ಪನು; ಎಷ್ಟು ಲಂಚಕೊಟ್ಟರೂ ಒಲಿಯನು, ಮಣಿಯನು.