ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
25ನೇ ಅಧ್ಯಾಯ
- Verse 1: ದಾವೀದನು ಹಾಗೂ ಆರಾಧಕ ಮಂಡಲಿಯ ಮುಖ್ಯಸ್ಥರು ಕಿನ್ನರಿ, ಸ್ವರಮಂಡಲ, ತಾಳ ಇವುಗಳನ್ನು ಬಾರಿಸುತ್ತಾ, ಪರವಶರಾಗಿ ಗಾಯನ ಸೇವೆ ಮಾಡುವುದಕ್ಕಾಗಿ ಆಸಾಫ್ಯರನ್ನೂ ಹೇಮಾನ್ಯರನ್ನೂ ಯೆದುತೂನ್ಯರನ್ನೂ ಆರಿಸಿದರು. ಈ ಸೇವೆಯನ್ನು ಮಾಡಬೇಕಾಗಿದ್ದ ಪುರುಷರ ಪಟ್ಟಿ:
- Verse 2: ಆಸಾಫ್ಯರಲ್ಲಿ ಜಕ್ಕೂರ್, ಜೋಸೆಫ್, ನೆತನ್ಯ, ಅಶರೇಲ ಎಂಬವರು. ಇವರು ಆಸ್ಥಾನದ ಗಾಯಕ ಆಸಾಫನ ಸಹಾಯಕರು.
- Verse 3: ಯೆದುತೂನ್ಯರಲ್ಲಿ ಗೆದಲ್ಯ, ಚೆರೀ, ಯೆಶಾಯ, ಶಿಮ್ಮೀ, ಹಷಬ್ಯ, ಮತ್ತಿತ್ಯ. ಇವರು ಕಿನ್ನರಿಯನ್ನು ಬಾರಿಸುತ್ತಾ ಪರವಶರಾಗಿ, ಸರ್ವೇಶ್ವರನ ಕೀರ್ತನೆ ಮಾಡುವ ತಮ್ಮ ತಂದೆಯಾದ ಯೆದುತೂನನಿಗೆ ಈ ಆರು ಮಂದಿ ಸಹಾಯಕರು.
- Verse 4: ಹೇಮಾನ್ಯರಲ್ಲಿ ಬುಕ್ಕೀಯ, ಮತ್ತನ್ಯ, ಉಜ್ಜೀಯೇಲ್, ಶೆಬೂವೇಲ್, ಯೆರೀಮೋತ್, ಹನನ್ಯ, ಹನಾನೀ, ಎಲೀಯಾತ, ಗಿದ್ದಲ್ತಿ, ರೋಮಮ್ತಿಯೆಜೆರ್, ಯೊಷ್ಬೆಕಾಷ, ಮಲ್ಲೋತೀ, ಹೋತೀರ್, ಮಹಜೀಯೋತ್,
- Verse 5: ಇವರೆಲ್ಲರೂ ಅರಸನ ದರ್ಶಿಯಾದ ಹೇಮಾನನ ಮಕ್ಕಳು. ದೇವರು ಅವನಿಗೆ, “ನೀನು ಅಭಿವೃದ್ಧಿಯಾಗುವ ಹಾಗೆ ಮಾಡುವೆನು,” ಎಂಬುದಾಗಿ ವಾಗ್ದಾನ ಮಾಡಿದ್ದರು. ಅದರಂತೆಯೇ ಅವನಿಗೆ ಹದಿನಾಲ್ಕು ಮಂದಿ ಗಂಡುಮಕ್ಕಳನ್ನೂ ಮೂರು ಮಂದಿ ಹೆಣ್ಣುಮಕ್ಕಳನ್ನೂ ದಯಪಾಲಿಸಿದರು.
- Verse 6: ದೇವರಾದ ಸರ್ವೇಶ್ವರನ ಆಲಯದಲ್ಲಿ ಆರಾಧನೆ ನಡೆಯುತ್ತಿರುವಾಗ ಇವರೆಲ್ಲರೂ ತಮ್ಮ ತಂದೆಯ ನೇತೃತ್ವದಲ್ಲಿ ತಾಳ, ಸ್ವರಮಂಡಲ, ಕಿನ್ನರಿ ಇವುಗಳಿಂದ ಗಾಯನ ಮಾಡುತ್ತಿದ್ದರು. ಆಸಾಫ್, ಯೆದುತೂನ್, ಹೇಮಾನರು ಅರಸನ ಸೇವೆಯಲ್ಲಿದ್ದರು.
- Verse 7: ಇವರೂ ಸರ್ವೇಶ್ವರನ ಕೀರ್ತನೆಗಳನ್ನು ಕಲಿತ ಇವರ ಸಹೋದರರೂ ಒಟ್ಟು ಇನ್ನೂರ ಎಂಬತ್ತೆಂಟು ಮಂದಿ ಗಾಯನಪ್ರವೀಣರು ಇದ್ದರು.
- Verse 8: ಇವರಲ್ಲಿ ಹಿರಿಕಿರಿಯರೂ ಗುರುಶಿಷ್ಯರೂ ಕೂಡಿಕೊಂಡು ಚೀಟಿನಿಂದ ತಮ್ಮ ಸೇವಾಕ್ರಮವನ್ನು ಗೊತ್ತುಮಾಡಿಕೊಳ್ಳುತ್ತಿದ್ದರು. ಈ ಚೀಟಿನ ಪ್ರಕಾರ ಇನ್ನೂರ ಎಂಬತ್ತೆಂಟು ಮಂದಿ ಸದಸ್ಯರು ಇಪ್ಪತ್ತನಾಲ್ಕು ಗುಂಪುಗಳಾಗಿ ವಿಂಗಡಿಸಲಾಗಿದ್ದರು. ಪ್ರತಿಯೊಂದು ಗುಂಪಿಗೆ ಒಬ್ಬ ನಾಯಕನು, ಅವನ ಸಹೋದರರು ಹಾಗೂ ಮಕ್ಕಳು ಕೂಡಿ ಹನ್ನೆರಡು ಮಂದಿ ಸದಸ್ಯರು ಇದ್ದರು. ಕ್ರಮಾನುಸಾರ ಇಪ್ಪತ್ತನಾಲ್ಕು ನಾಯಕರ ಹೆಸರುಗಳು ಇವು:
- Verse 9: ಮೊದಲನೆಯವನು ಆಸಾಫ್ಯನಾದ ಜೋಸೆಫನು; ಎರಡನೆಯವನು ಗೆದಲ್ಯ
- Verse 10: ಮೂರನೆಯವನು ಜಕ್ಕೂರ್
- Verse 11: ನಾಲ್ಕನೆಯವನು ಇಚ್ರೀ
- Verse 12: ಐದನೆಯವನು ನೆತನ್ಯ
- Verse 13: ಆರನೆಯವನು ಬುಕ್ಕೀಯ
- Verse 14: ಏಳನೆಯವನು ಯೆಸರೇಲ
- Verse 15: ಎಂಟನೆಯವನು ಯೆಶಾಯ
- Verse 16: ಒಂಬತ್ತನೆಯವನು ಮತ್ತನ್ಯ
- Verse 17: ಹತ್ತನೆಯವನು ಶಿಮ್ಮೀ
- Verse 18: ಹನ್ನೊಂದನೆಯವನು ಅಜರೇಲ್
- Verse 19: ಹನ್ನೆರಡನೆಯವನು ಹಷಬ್ಯ
- Verse 20: ಹದಿಮೂರನೆಯವನು ಶೂಬಾಯೇಲ್
- Verse 21: ಹದಿನಾಲ್ಕನೆಯವನು ಮತ್ತಿತ್ಯ
- Verse 22: ಹದಿನೈದನೆಯವನು ಯೆರೆಮೋತ್
- Verse 23: ಹದಿನಾರನೆಯವನು ಹನನ್ಯ
- Verse 24: ಹದಿನೇಳನೆಯವನು ಯೊಷ್ಬೆಕಾಷ
- Verse 25: ಹದಿನೆಂಟನೆಯವನು ಹನಾನೀ
- Verse 26: ಹತ್ತೊಂಬತ್ತನೆಯವನು ಮಲ್ಲೋತಿ
- Verse 27: ಇಪ್ಪತ್ತನೆಯವನು ಎಲೀಯಾತ
- Verse 28: ಇಪ್ಪತ್ತೊಂದನೆಯವನು ಹೋತೀರ್
- Verse 29: ಇಪ್ಪತ್ತೆರಡನೆಯವನು ಗಿದ್ದಲ್ತಿ
- Verse 30: ಇಪ್ಪತ್ತಮೂರನೆಯವನು ಮಹಜೀಯೋತ್
- Verse 31: ಇಪ್ಪತ್ತನಾಲ್ಕನೆಯವನು ರೋಮಮ್ತಿಯೆಜೆರ್.