ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
142ನೇ ಅಧ್ಯಾಯ
- Verse 1: ಮೊರೆಯಿಡುವೆನು ನಾನು ಪ್ರಭುವಿಗೆ I ಸ್ವರವೆತ್ತಿ ಬೇಡುವೆನು ಆತನಿಗೆ II
- Verse 2: ಬಿಚ್ಚುವೆನು ಆತನ ಮುಂದೆ ಚಿಂತೆಯ ಕಟ್ಟನು I ಅರಿಕೆ ಮಾಡುವೆನು ನನ್ನ ಕಷ್ಟ ಸಂಕಟವನು II
- Verse 3: ಉರುಲೊಡ್ಡಿಹರು ನಾ ನಡೆಯುವ ಮಾರ್ಗದಲೆ I ನಾ ಮನಗುಂದಿರೆ, ಪರಿಹಾರವನು ನೀ ಬಲ್ಲೆ II
- Verse 4: ಅಕ್ಕಪಕ್ಕದಲಿ ಸಹಾಯಕರಾರೂ ಇಲ್ಲ I ಆಶ್ರಯರಹಿತ, ಹಿತಚಿಂತಕರಾರೂ ನನಗಿಲ್ಲ II
- Verse 5: ಪ್ರಭುವೇ, ನನಗಾಶ್ರಯ ನೀನೇ I ನನ್ನ ಬಾಳಿನ ಸೊತ್ತು ನೀನೇ I ಕೂಗಿ ನಿನಗೆ ಮೊರೆಯಿಡುತ್ತೇನೆ II
- Verse 6: ಕುಗ್ಗಿ ಹೋಗಿರುವೆ, ನನ್ನ ಕೂಗಿಗೆ ಪ್ರಭು ಕಿವಿಗೊಡು I ಬಲಿಷ್ಠ ಹಿಂಸಾತ್ಮಕರಿಂದ ನನ್ನನು ಪಾರುಮಾಡು II
- Verse 7: ಬಿಡಿಸು ಸೆರೆಯಿಂದೆನ್ನನು, ಭಜಿಸುವೆನು ನಿನ್ನ ನಾಮವನು I ಸಜ್ಜನರ ಸಭೆಯಲಿ ಕೊಂಡಾಡುವೆನು ನಿನ್ನ ಉಪಕಾರವನು II