P. O. C ബൈബിള്
ಹಳೆಯ ಒಡಂಬಡಿಕೆ
ಎಜ್ರನು
10ನೇ ಅಧ್ಯಾಯ
- Verse 1: ಎಜ್ರನು ದೇವಾಲಯದ ಮುಂದೆ ಹೀಗೆ ಅಡ್ಡಬಿದ್ದು ಅಳುತ್ತಾ, ವಿಜ್ಞಾಪನೆಯನ್ನೂ ಪಾಪ ನಿವೇದನೆಯನ್ನೂ ಮಾಡುತ್ತಿರುವಾಗ ಇಸ್ರಯೇಲರ ಗಂಡಸರು, ಹೆಂಗಸರು ಹಾಗು ಮಕ್ಕಳು ಮಹಾಸಮೂಹವಾಗಿ ಅವನ ಬಳಿಗೆ ಬಂದು ಕೂಡಿದರು. ಜನರೆಲ್ಲರು ಅಲ್ಲಿ ಬಹಳವಾಗಿ ದುಃಖಿಸತೊಡಗಿದರು.
- Verse 2: ಆಗ ಏಲಾಮ್ ಸಂತಾನದ ಯೆಹೀಯೇಲನ ಮಗ ಶೆಕನ್ಯನು ಎಜ್ರನಿಗೆ, “ಇಸ್ರಯೇಲರಾದ ನಾವು ಅನ್ಯಜನರಾದ ಈ ದೇಶನಿವಾಸಿಗಳಿಂದ ಹೆಣ್ಣನ್ನು ತೆಗೆದುಕೊಂಡು ನಮ್ಮ ದೇವರಿಗೆ ವಿರುದ್ಧ ದ್ರೋಹಮಾಡಿದ್ದರೂ ನಮ್ಮನ್ನು ನಾವು ತಿದ್ದಿಕೊಳ್ಳುವ ನಿರೀಕ್ಷೆ ಇನ್ನೂ ಉಂಟು.
- Verse 3: ನೀನು ಹಾಗು ನಮ್ಮ ದೇವರ ಆಜ್ಞೆಯನ್ನು ಗೌರವಿಸುವವರು ಹೇಳಿಕೊಟ್ಟ ಬುದ್ಧಿವಾದಾನುಸಾರ ಅಂಥ ಎಲ್ಲ ಹೆಂಡತಿಯರನ್ನೂ ಅವರ ಮಕ್ಕಳನ್ನೂ ಕಳುಹಿಸಿಬಿಡುವುದಾಗಿ, ಈಗಲೇ ನಮ್ಮ ದೇವರಿಗೆ ಪ್ರತಿಜ್ಞೆಮಾಡಿ, ಧರ್ಮಶಾಸ್ತ್ರಕ್ಕನುಸಾರ ನಡೆಯೋಣ.
- Verse 4: ಎದ್ದೇಳು, ಈ ಕಾರ್ಯ ನಿನ್ನಿಂದಾಗಬೇಕು. ನಾವು ನಿನಗೆ ಸಹಾಯಕರಾಗಿ ನಿಲ್ಲುತ್ತೇವೆ. ಧೈರ್ಯದಿಂದ ಮುನ್ನುಗ್ಗು,” ಎಂದು ಹೇಳಿದನು.
- Verse 5: ಆಗ ಎಜ್ರನು ಎದ್ದು, ಯಾಜಕರ ಮತ್ತು ಲೇವಿಯರ ಮುಖ್ಯಸ್ಥರಿಗೂ ಎಲ್ಲ ಇಸ್ರಯೇಲರಿಗೂ ಈ ಪ್ರಕಾರ ನಡೆಯುವುದಾಗಿ ಪ್ರಮಾಣ ಮಾಡಬೇಕೆಂದು ಹೇಳಿದನು. ಅವರು ಹಾಗೆಯೇ ಪ್ರಮಾಣ ಮಾಡಿದರು.
- Verse 6: ಆಮೇಲೆ ಎಜ್ರನು ಎದ್ದು, ದೇವಾಲಯದ ಮುಂಭಾಗದ ಸ್ಥಳವನ್ನು ಬಿಟ್ಟು, ಎಲ್ಯಾಷೀಬನ ಮಗ ಯೆಹೋಹಾನಾನನ ಕೊಠಡಿಗೆ ಹೋಗಿ, ಅಲ್ಲಿ ಸೆರೆ ಇಂದ ಬಂದವರಿಗಾಗಿ ದುಃಖಿಸುತ್ತಾ ಅನ್ನಪಾನಗಳನ್ನು ತೆಗೆದುಕೊಳ್ಳದೆ ರಾತ್ರಿಯನ್ನು ಕಳೆದನು.
- Verse 7: ತರುವಾಯ ಜುದೇಯದಲ್ಲೂ ಜೆರುಸಲೇಮಿನಲ್ಲೂ ಈ ಪ್ರಕಟನೆಯನ್ನು ಹೊರಡಿಸಲಾಯಿತು: “ಸೆರೆಯಿಂದ ಬಂದವರೆಲ್ಲರೂ ಜೆರುಸಲೇಮಿನಲ್ಲಿ ಒಂದುಗೂಡಬೇಕು.
- Verse 8: ಮುಖ್ಯಸ್ಥರ ಮತ್ತು ಹಿರಿಯರ ನಿರ್ಣಯದ ಪ್ರಕಾರ ಮೂರು ದಿವಸಗಳೊಳಗೆ ಬರಬೇಕು; ಬಾರದವನು ತನ್ನ ಎಲ್ಲ ಆಸ್ತಿಪಾಸ್ತಿಯನ್ನೂ ಕಳೆದುಕೊಂಡು ಸೆರೆಯಿಂದ ಬಂದವರ ಸಭೆಯಿಂದ ಬಹಿಷ್ಕೃತನಾಗುವನು,” ಎಂದು ತಿಳಿಸಲಾಯಿತು.
- Verse 9: ಆಗ ಮೂರನೆಯ ದಿನದಲ್ಲಿ ಅಂದರೆ, ಒಂಬತ್ತನೆಯ ತಿಂಗಳಿನ ಇಪ್ಪತ್ತನೆಯ ದಿನದಲ್ಲಿ, ಯೆಹೂದ್ಯರ ಮತ್ತು ಬೆನ್ಯಾಮೀನ್ಯರ ಎಲ್ಲ ಪುರುಷರೂ ಜೆರುಸಲೇಮಿನಲ್ಲಿ ಕೂಡಿಬಂದರು. ಆ ಸಂಗತಿಯ ನಿಮಿತ್ತ ಹಾಗು ದೊಡ್ಡ ಮಳೆಯ ದೆಸೆಯಿಂದ ನಡುಗುತ್ತಾ ಬಂದು ದೇವಾಲಯದ ಬಯಲಿನಲ್ಲಿ ಕುಳಿತುಕೊಂಡರು.
- Verse 10: ಆಗ ಯಾಜಕನಾದ ಎಜ್ರನು ಎದ್ದು ನಿಂತು ಅವರಿಗೆ, “ನೀವು ಅನ್ಯಜನರ ಹೆಣ್ಣುಗಳನ್ನು ಮದುವೆ ಮಾಡಿಕೊಂಡು ಇಸ್ರಯೇಲರ ಅಪರಾಧವನ್ನು ಹೆಚ್ಚಿಸಿ ಇದ್ದೀರಿ.
- Verse 11: ಈಗ ನಿಮ್ಮ ಪಿತೃಗಳ ದೇವರಾದ ಸರ್ವೇಶ್ವರಸ್ವಾಮಿಗೆ ನಿಮ್ಮ ಪಾಪಗಳನ್ನು ಅರಿಕೆಮಾಡಿ, ಅವರ ಚಿತ್ತಕ್ಕನುಸಾರ ದೇಶನಿವಾಸಿಗಳನ್ನೂ ಅನ್ಯಜನರಿಂದ ತಂದ ಹೆಂಡತಿಯರನ್ನೂ ಬಿಟ್ಟು ಬೇರೆಯಾಗಿರಿ,” ಎಂದನು.
- Verse 12: ಕೂಡಿಬಂದವರೆಲ್ಲರೂ ಗಟ್ಟಿಯಾಗಿ, “ನೀವು ಹೇಳಿದಂತೆಯೇ ಮಾಡುವುದು ನಮ್ಮ ಕರ್ತವ್ಯ.
- Verse 13: ಆದರೆ ಕೂಡಿಬಂದಿರುವವರು ಬಹುಮಂದಿ; ಈಗ ಮಳೆಗಾಲ; ಹೊರಗೆ ನಿಲ್ಲುವುದು ಅಸಾಧ್ಯ. ಈ ಕೆಲಸ ಒಂದೆರಡು ದಿನಗಳಲ್ಲಿ ತೀರುವಂಥದಲ್ಲ; ಈ ವಿಷಯದಲ್ಲಿ ನಮ್ಮ ಅಪರಾಧ ದೊಡ್ಡದು.
- Verse 14: ಆದುದರಿಂದ ನಮ್ಮ ಮುಂದಾಳುಗಳು ಸರ್ವಸಮೂಹದ ಪರವಾಗಿ ಈ ಕಾರ್ಯವನ್ನು ವಹಿಸಿಕೊಳ್ಳಲಿ; ನಮ್ಮ ನಮ್ಮ ಊರುಗಳಲ್ಲಿ ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರೆಲ್ಲರು, ನೇಮಿತ ದಿನದಲ್ಲಿ, ತಮ್ಮ ಊರಿನ ಹಿರಿಯರೊಡನೆ ಹಾಗು ನ್ಯಾಯಾಧಿಪತಿಗಳೊಡನೆ ಇಲ್ಲಿಗೆ ಬರಲಿ. ನಮ್ಮ ದೇವರು ಈ ವಿಷಯದಲ್ಲಿ ನಮ್ಮ ಬಗ್ಗೆ ತಾಳಿರುವ ಉಗ್ರಕೋಪ ಹೀಗೆ ಪರಿಹಾರವಾಗಲಿ,” ಎಂದು ಉತ್ತರಕೊಟ್ಟರು.
- Verse 15: ಅಸಾಹೇಲನ ಮಗ ಯೋನಾತಾನ್, ಹಾಗು ತಿಕ್ವನ ಮಗ ಯಹ್ಜೆಯ ಎಂಬವರು ಮಾತ್ರ. ಈ ಅಭಿಪ್ರಾಯವನ್ನು ವಿರೋಧಿಸಿದರು. ಲೇವಿಯರಾದ ಮೆಷುಲ್ಲಾಮ್, ಶಬ್ಬೆತೈ ಎಂಬವರೂ ಇವರನ್ನು ಬೆಂಬಲಿಸಿದರು.
- Verse 16: ಆದರೆ ಸೆರೆಯಿಂದ ಮರಳಿ ಬಂದ ಇತರರು ಮೇಲೆ ಹೇಳಿರುವುದನ್ನೇ ಒಪ್ಪಿಕೊಂಡರು. ಈ ವಿಚಾರಣೆಯನ್ನು ನಡೆಸುವುದಕ್ಕೆ ಯಾಜಕ ಎಜ್ರನೂ ಆಯಾ ಗೋತ್ರಗಳ ಮುಖಂಡರೂ ಹೆಸರು ಹೆಸರಾಗಿ ನೇಮಕಗೊಂಡರು. ಹತ್ತನೆಯ ತಿಂಗಳಿನ ಮೊದಲನೆಯ ದಿನ, ಇವರ ಮೊದಲನೆಯ ಕೂಟ ನಡೆಯಿತು.
- Verse 17: ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರ ವಿಷಯವನ್ನು ಮೊದಲನೆಯ ತಿಂಗಳಿನ ಮೊದಲನೆಯ ದಿನವೇ ಪೂರ್ತಿಯಾಗಿ ವಿಚಾರಿಸಿ ತೀರ್ಮಾನಿಸಿದರು.
- Verse 18: ಅನ್ಯಜನರ ಸ್ತ್ರೀಯರನ್ನು ಮದುವೆಮಾಡಿಕೊಂಡವರ ಪಟ್ಟಿ ಇದು: ಯಾಜಕರಲ್ಲಿ : ಯೋಚಾದಾಕನ ಮಗ ಯೆಷೂವನ ಮತ್ತು ಅವನ ಸಹೋದರರ ಸಂತಾನದವರಾದ ಮಾಸೇಯ, ಎಲೀಯೆಜೆರ್, ಯಾರೀಬ್, ಗೆದಲ್ಯ ಎಂಬವರು.
- Verse 19: ಇವರು ತಮ್ಮ ಹೆಂಡತಿಯರನ್ನು ಕಳುಹಿಸಿಬಿಡುವುದಾಗಿ ಕೈಮುಟ್ಟಿ ಪ್ರಮಾಣಮಾಡಿದರು; ತಾವು ಅಪರಾಧಿಗಳೆಂದು ಒಪ್ಪಿ ಪ್ರಾಯಶ್ಚಿತ್ತವಾಗಿ ಒಂದು ಟಗರನ್ನು ಸಮರ್ಪಿಸಿದರು.
- Verse 20: ಇಮ್ಮೇರನ ಸಂತಾನದವರಾದ ಹನಾನೀ, ಜೆಬದ್ಯ;
- Verse 21: ಹಾರೀಮನ ಸಂತಾನದವರಾದ ಮಾಸೇಯ, ಎಲೀಯ, ಶೆಮಾಯ, ಯೆಹೀಯೇಲ್, ಹಾಗು ಉಜ್ಜೀಯ;
- Verse 22: ಪಷ್ಹೂರನ ಸಂತಾನದವರಾದ ಎಲ್ಯೋವೇನೈ, ಮಾಸೇಯ, ಇಷ್ಮಾಯೇಲ್, ನೆತನೇಲ್, ಯೋಜಾಬಾದ್ ಹಾಗು ಎಲ್ಲಾಸ;
- Verse 23: ಲೇವಿಯರಲ್ಲಿ : ಯೊಜಾಬಾದ್, ಶಿಮ್ಮೀ, ಕೆಲೀಟ ಅನ್ನಿಸಿಕೊಳ್ಳುವ ಕೇಲಾಯ, ಪೆತಹ್ಯ, ಯೆಹೂದ ಹಾಗು ಎಲೀಯೆಜೆರ್.
- Verse 24: ಗಾಯಕರಲ್ಲಿ : ಎಲ್ಯಾಷೀಬ್. ದ್ವಾರಪಾಲಕರಲ್ಲಿ : ಶಲ್ಲೂಮ್, ಟೆಲೆಮ್ ಹಾಗು ಊರೀ.
- Verse 25: ಬೇರೆ ಇಸ್ರಯೇಲರಲ್ಲಿ : ಪರೋಷ್ ಸಂತಾನದವರಾದ ರಮ್ಯಾಹ, ಇಜ್ಜೀಯ, ಮಲ್ಕೀಯ, ಮಿಯ್ಯಾಮಿನ್, ಎಲ್ಲಾಜಾರ್, ಮಲ್ಕೀಯ ಹಾಗು ಬೆನಾಯ;
- Verse 26: ಏಲಾಮ್ ಸಂತಾನದವರಾದ ಮತ್ತನ್ಯ, ಜೆಕರ್ಯ, ಯೆಹೀಯೇಲ್, ಅಬ್ದೀ, ಯೆರೇಮೋತ್ ಹಾಗು ಏಲೀಯ;
- Verse 27: ಜತ್ತೂ ಸಂತಾನದವರಾದ ಎಲ್ಯೋವೇನ್ಯೆ, ಎಲ್ಯಾಷೀಬ್, ಮತ್ತನ್ಯ, ಯೆರೇಮೋತ್, ಜಾಬದ್, ಹಾಗು ಅಜೀಜಾ;
- Verse 28: ಬೇಬೈ ಸಂತಾನದವರಾದ ಯೆಹೋಹಾನಾನ್, ಹನನ್ಯ, ಜಬ್ಬೈ ಹಾಗು ಅತ್ಲೈ;
- Verse 29: ಬಾನೀ ಸಂತಾನದವರಾದ ಮೆಷುಲ್ಲಾಮ್, ಮಲ್ಲೂಕ್, ಅದಾಯ, ಯಾಷೂಬ್, ಶೆಯಾಲ್ ಹಾಗು ರಾಮೋತ್;
- Verse 30: ಪಹತ್ ಮೊವಾಬ್ ಸಂತಾನದವರಾದ ಅದ್ನ, ಕೆಲಾಲ್, ಬೆನಾಯ, ಮಾಸೇಯ, ಮತ್ತನ್ಯ, ಬೆಚಲೇಲ್, ಬಿನ್ನೂಯ್ ಹಾಗು ಮನಸ್ಸೆ;
- Verse 31: ಹಾರೀಮ್ ಸಂತಾನದವರಾದ ಎಲೀಯೆಜೆರ್, ಇಷೀಯ, ಮಲ್ಕೀಯ, ಶೆಮಾಯ, ಸಿಮೆಯೋನ್,
- Verse 32: ಬೆನ್ಯಾಮೀನ್, ಮಲ್ಲೂಕ್ ಹಾಗು ಶಮರ್ಯ;
- Verse 33: ಹಾಷುಮ್ ಸಂತಾನದವರಾದ ಮತ್ತೆನೈ, ಮತ್ತತ್ಯ, ಜಾಬಾದ್, ಎಲೀಫೆಲೆಟ್, ಯೆರೇಮೈ, ಮನಸ್ಸೆ ಹಾಗು ಶಿಮ್ಮೀ;
- Verse 34: ಬಾನೀ ಸಂತಾನದವರಾದ ಮಾದೈ, ಅಮ್ರಾಮ್,
- Verse 35: ಊವೇಲ್, ಬೆನಾಯ, ಬೇದೆಯ, ಕೆಲೂಹು,
- Verse 36: ವನ್ಯಾಹ, ಮೆರೇಮೋತ್, ಎಲ್ಯಾಷೀಬ್,
- Verse 37: ಮತ್ತನ್ಯ, ಮತ್ತೆನೈ,
- Verse 38: ಯಾಸೈ, ಬಾನೀ, ಬಿನ್ನೂಯ್, ಶಿಮ್ಮೀ,
- Verse 39: ಶೆಲೆಮ್ಯ, ನಾತಾನ್ ಹಾಗು ಅದಾಯ;
- Verse 40: ಮಕ್ನದೆಬೈ, ತಾಷೈ, ಶಾರೈ,
- Verse 41: ಅಜರೇಲ್, ಶೆಲೆಮ್ಯ, ಶೆಮರ್ಯ,
- Verse 42: ಶಲ್ಲೂಮ್, ಅಮರ್ಯ ಹಾಗು ಜೋಸೆಫ್;
- Verse 43: ನೆಬೊ ಸಂತಾನದವರಾದ ಯೆಗೀಯೇಲ್, ಮತ್ತಿತ್ಯ, ಜಾಬಾದ್, ಜೆಬೀನ, ಯದ್ದೈ, ಯೋವೇಲ್ ಹಾಗು ಬೆನಾಯ;
- Verse 44: ಇವರೆಲ್ಲರು ಅನ್ಯಕುಲದ ಸ್ತ್ರೀಯರನ್ನು ಮದುವೆ ಮಾಡಿಕೊಂಡವರು. ಕೆಲವರಿಗೆ ಆ ಸ್ತ್ರೀಯರಲ್ಲಿ ಮಕ್ಕಳೂ ಹುಟ್ಟಿದ್ದರು.