पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
5ನೇ ಅಧ್ಯಾಯ
- Verse 1: ಕಿವಿಗೊಡು ಪ್ರಭು, ಎನ್ನ ನುಡಿಗೆ I ಬಗೆಗೊಡು ಎನ್ನಾತ್ಮದ ಮೊರೆಗೆ II
- Verse 2: ಎನ್ನರಸನೇ, ದೇವನೇ I ಮಾಡುವೆ ನಿನಗೆ ಪ್ರಾರ್ಥನೆ I ನೀ ಆಲಿಸೆನ್ನ ಯಾಚನೆ II
- Verse 3: ಉದಯಕಾಲದಲ್ಲಿ ಪ್ರಭು, ನಿನಗೆ ಕೇಳಿಬರುವುದು ನನ್ನ ಸ್ವರ I ಉದಯಾರಾಧನೆ ಮಾಡಿ ಎದುರು ನೋಡುತ್ತಿರುವೆ ನಾ ಸದುತ್ತರ II
- Verse 4: ದುಷ್ಟತನಕೆ ದೇವ, ನಿನಗಿಲ್ಲ ಒಲವು I ಕೆಟ್ಟತನಕೆ ನಿನ್ನ ಬಳಿಯಿಲ್ಲ ನಿಲುವು II
- Verse 5: ನಿಲ್ಲಲಾರರು ನಿನ್ನ ಮುಂದೆ ಗರ್ವಿಗಳು I ನಿನಗೆ ವೈರಿಗಳಾಗುವರು ಅಧರ್ಮಿಗಳು II
- Verse 6: ಹುಸಿ ನುಡಿವವರನು ಪ್ರಭು, ನೀ ನಾಶಮಾಡುವೆ I ಹಿಂಸಕರನು, ವಂಚಕರನು ನೀ ಹೇಸಿಬಿಡುವೆ II
- Verse 7: ನಿನ್ನ ಮಂದಿರಕೆ ಬರುವೆ ನಿನ್ನಪಾರ ಪ್ರೀತಿಯ ನಿಮಿತ್ತ I ಭಕುತಿಯಿಂದ ಅಡ್ಡಬೀಳುವೆ ನಿನ್ನ ಪವಿತ್ರಾಲಯದತ್ತ II
- Verse 8: ಶತ್ರುಗಳು ಮುತ್ತಿಹರು, ಸತ್ಯ ಪಥದಲಿ ನಡೆಸೆನ್ನನು I ನೇರಮಾಡೆನಗೆ ದೇವಾ, ನಿನ್ನ ಸಿರಿಮಾರ್ಗವನು II
- Verse 9: ಅವರ ಬಾಯಲಿ ಹುಸಿನುಡಿ, ಹೃದಯವಾದರೊ ವಿನಾಶದ ಶರಧಿ I ಅವರ ಜಿಹ್ವೆಯಲಿ ಮುಖಸ್ತುತಿ, ಕಂಠವಾದರೋ ತೆರೆದ ಸಮಾಧಿ II
- Verse 10: ಅವರಪರಾಧಿಗಳೆಂದು ಹೇ ದೇವಾ, ನಿರ್ಣಯಿಸಿಬಿಡು I ಅವರ ಮೋಸದ ಪಾಶದಲೇ ಅವರನು ಸಿಕ್ಕಿಸಿಬಿಡು I ಅವರನೇಕ ಪಾಪಗಳಿಗಾಗಿ ಅವರನು ದಬ್ಬಿಬಿಡು I ಅವರು ನಿನ್ನ ವಿರುದ್ಧ ದಂಗೆಯೆದ್ದವರು, ನೋಡು II
- Verse 11: ದೊರಕುವುದು ದೇವಾ, ನಿನ್ನಾಶೀರ್ವಾದ ಸಜ್ಜನರಿಗೆ I ಕವಚವಾದಂತಿಹುದು ನಿನ್ನ ಕರುಣೆ ಅಂಥವರಿಗೆ II ಎಂದೇ ಹರ್ಷಾನಂದಗೊಳ್ವರು ನಿನ್ನನಾಶ್ರಯಿಸಿದವರೆಲ್ಲರು I ನೀ ರಕ್ಷಿಸೆ, ಉಲ್ಲಾಸಗೊಳ್ಳುವರು ನಿನ್ನ ನಾಮಪ್ರಿಯರೆಲ್ಲರು II
- Verse 12: ದೊರಕುವುದು ದೇವಾ, ನಿನ್ನಾಶೀರ್ವಾದ ಸಜ್ಜನರಿಗೆ I ಕವಚವಾದಂತಿಹುದು ನಿನ್ನ ಕರುಣೆ ಅಂಥವರಿಗೆ II ಎಂದೇ ಹರ್ಷಾನಂದಗೊಳ್ವರು ನಿನ್ನನಾಶ್ರಯಿಸಿದವರೆಲ್ಲರು I ನೀ ರಕ್ಷಿಸೆ, ಉಲ್ಲಾಸಗೊಳ್ಳುವರು ನಿನ್ನ ನಾಮಪ್ರಿಯರೆಲ್ಲರು II