पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
136ನೇ ಅಧ್ಯಾಯ
- Verse 1: ಒಳ್ಳೆಯವನಾದ ಪ್ರಭುವಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 2: ದೇವಾದಿ ದೇವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 3: ಮಹೋನ್ನತ ಪ್ರಭುವಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 4: ಮಹತ್ಕಾರ್ಯವೆಸಗಬಲ್ಲ ಆ ಏಕೈಕನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 5: ಜ್ಞಾನದಿಂದ ಜಗವನು ನಿರ್ಮಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 6: ಜಲರಾಶಿಯ ಮೇಲೆ ಭೂಮಿಯನು ಹಾಸಿದವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 7: ಮಹಾ ಜ್ಯೋತಿರ್ಮಂಡಲವನು ಸೃಷ್ಟಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 8: ಹಗಲನ್ನಾಳಲು ಸೂರ್ಯನನ್ನು ಸೃಜಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 9: ರಾತ್ರಿಯನ್ನಾಳಲು ಚಂದ್ರ ನಕ್ಷತ್ರಗಳನ್ನು ಸೃಷ್ಟಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 10: ಈಜಿಪ್ಟಿನ ಚೊಚ್ಚಲುಗಳನು ಸಂಹರಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 11: ಇಸ್ರಯೇಲರನು ಅಲ್ಲಿಂದ ಹೊರತಂದವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 12: ಭುಜಬಲದಿಂದ ಕೈಚಾಚಿ ಅವರನು ಬಿಡಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 13: ಕೆಂಪು ಕಡಲನು ಇಬ್ಭಾಗಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 14: ಇಸ್ರಯೇಲರನು ಅದರ ನಡುವೆ ದಾಟಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 15: ಫರೋಹನನ್ನೂ ಅವನ ಸೈನ್ಯವನ್ನೂ ಆ ಕಡಲಲ್ಲಿ ಮುಳುಗಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 16: ತನ್ನ ಪ್ರಜೆಯನು ಅರಣ್ಯಮಾರ್ಗವಾಗಿ ಕರೆತಂದವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 17: ಬಲವಂತ ರಾಜರನು ಉರುಳಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 18: ಪ್ರಖ್ಯಾತ ರಾಜರನ್ನು ಸಂಹರಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 19: ಅಮೋರಿಯರ ರಾಜನಾದ ಸೀಹೋನನ್ನು ಕೊಂದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 20: ಬಾಷಾನಿನ ಅರಸನಾದ ಓಗನನ್ನು ಸಂಹರಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 21: ಅವರ ನಾಡನ್ನು ಇಸ್ರಯೇಲರಿಗೆ ಕೊಟ್ಟಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 22: ಅದನ್ನು ದಾಸರಾದ ನಮಗೆ ಸೊತ್ತಾಗಿ ನೀಡಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 23: ಹೀನ ಸ್ಥಿತಿಯಲ್ಲಿದ್ದ ನಮ್ಮನ್ನು ಜ್ಞಾಪಿಸಿಕೊಂಡಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 24: ಶತ್ರುಹಗೆಗಳಿಂದ ನಮ್ಮನ್ನು ಬಿಡಿಸಿದಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 25: ಸಕಲ ಜೀವಿಗಳಿಗೆ ಆಹಾರ ನೀಡುವಾತನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.
- Verse 26: ಪರಲೋಕದಲ್ಲಿರುವ ದೇವನಿಗೆ ಧನ್ಯವಾದ, ಆತನ ಪ್ರೀತಿ ಶಾಶ್ವತ.