வேதாகமம்
ಹಳೆಯ ಒಡಂಬಡಿಕೆ
ಕೀರ್ತನೆಗಳು
137ನೇ ಅಧ್ಯಾಯ
- Verse 1: ಬಾಬಿಲೋನಿನ ನದಿಗಳ ತೀರದಲಿ ಕುಳಿತು I ಅತ್ತು ಪ್ರಲಾಪಿಸಿದೆವು ಸಿಯೋನನ್ನು ನೆನೆದು II
- Verse 2: ಆ ನಾಡಿನಲಿ ಕಿನ್ನರಿಗಳನ್ನೆ ತೂಗುಹಾಕಿದೆವು I ನೀರವಂಜಿ ಮರಗಳಿಗೆ ಅವನ್ನು ನೇತುಹಾಕಿದೆವು II
- Verse 3: ಸೆರೆಹಿಡಿದು ಬಂಧಿಸಿದಾ ಜನ ಈ ಪರಿ ಪೀಡಿಸಿದರೆಮ್ಮನು: I “ಹಾಡಿ, ನಮ್ಮ ವಿನೋದಕ್ಕಾಗಿ ಸಿಯೋನಿನ ಗೀತೆಗಳಲೊಂದನು” II
- Verse 4: ಪ್ರಭುಗೀತೆಗಳ ನಾವು ಗಾನ ಮಾಡುವುದೆಂತು I ಅನ್ಯನಾಡಿನೊಳು ಅವುಗಳನು ಹಾಡುವುದೆಂತು II
- Verse 5: ಜೆರುಸಲೇಮ್, ನಾನು ನಿನ್ನ ಮರೆತಲ್ಲಿ I ನನ್ನ ಬಲಹಸ್ತ ಬತ್ತಿಹೋಗಿಬಿಡಲಿ II
- Verse 6: ಜೆರುಸಲೇಮನು ನಾ ಸ್ಮರಣೆಮಾಡದಿದ್ದಲ್ಲಿ I ಆ ಸ್ಮರಣೆ ಸರ್ವೋತ್ತಮ ನಲಿವು ನನಗಾಗದಿದ್ದಲ್ಲಿ I ಸೇದಿಹೋಗಲಿ ನಾಲಿಗೆ ನನ್ನ ಬಾಯಲಿ II
- Verse 7: ನೆನೆಸಿಕೊ ಪ್ರಭು, ಜೆರುಸಲೇಮಿನ ನಾಶನದಿನ ಅವರಾಡಿದ್ದನು: I “ಕೆಡವಿ ನೆಲಕೆ, ಬುಡಸಹಿತ ಕೆಡವಿ” ಎಂದಾ ಅಧಮ ಎದೋಮ್ಯರನು II
- Verse 8: ಬಾಬಿಲೋನ್ ನಗರವೇ ಕೇಳು : ಅಳಿವು ಕಾದಿದೆ ನಿನಗೆ I ಭಲೆ, ನೀನೆಮಗೆ ಮಾಡಿದ್ದಕ್ಕೆ ಮುಯ್ ತೀರಿಸುವವಗೆ I ನಿನ್ನ ಮಕ್ಕಳನೆತ್ತಿ ಬಂಡೆಗಪ್ಪಳಿಸುವವನಿಗೆ II
- Verse 9: ಬಾಬಿಲೋನ್ ನಗರವೇ ಕೇಳು : ಅಳಿವು ಕಾದಿದೆ ನಿನಗೆ I ಭಲೆ, ನೀನೆಮಗೆ ಮಾಡಿದ್ದಕ್ಕೆ ಮುಯ್ ತೀರಿಸುವವಗೆ I ನಿನ್ನ ಮಕ್ಕಳನೆತ್ತಿ ಬಂಡೆಗಪ್ಪಳಿಸುವವನಿಗೆ II