ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
2ನೇ ಅಧ್ಯಾಯ
- Verse 1: ಯಕೋಬನ ಹನ್ನೆರಡು ಜನ ಮಕ್ಕಳು ಇವರು: ರೂಬೇನ್, ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬೂಲೂನ್,
- Verse 2: ದಾನ್, ಜೋಸೆಫ್, ಬಿನ್ಯಾಮೀನ್, ನಫ್ತಾಲಿ, ಗಾದ್ ಮತ್ತು ಆಶೇರ್.
- Verse 3: ಯೆಹೂದನ ಹೆಂಡತಿ ಶೂನನ ಮಗಳಾದ ಕಾನಾನಳು. ಅವಳಿಂದ ಏರ್, ಓನಾನ್, ಶೇಲಹ ಎಂಬ ಮೂರು ಮಕ್ಕಳು ಜನಿಸಿದರು. ಅವನ ಹಿರಿಯ ಮಗ ಏರನು ಬಹಳ ದುಷ್ಟ. ಆದುದರಿಂದ ಸರ್ವೇಶ್ವರ ಅವನನ್ನು ಕೊಂದುಹಾಕಿದರು.
- Verse 4: ಯೆಹೂದನಿಗೆ ಅವನ ಸೊಸೆ ತಾಮಾರಳಿಂದ ಪೆರೆಜ್ ಹಾಗೂ ಜೆರಹ ಎಂಬ ಮಕ್ಕಳು ಜನಿಸಿದರು. ಯೆಹೂದನ ಮಕ್ಕಳು ಒಟ್ಟು ಐದು ಮಂದಿ.
- Verse 5: ಪೆರೆಚನಿಗೆ ಹೆಚ್ರೋನ್, ಹಾಮುಲ್ ಎಂಬಿಬ್ಬರು ಮಕ್ಕಳು.
- Verse 6: ಅವನ ಸಹೋದರ ಜೆರಹನಿಗೆ ಐದು ಜನ ಮಕ್ಕಳು: ಜಿಮ್ರಿ, ಏತಾನ್, ಹೇಮಾನ್, ಕಲ್ಕೋಲ್, ಮತ್ತು ದಾರ.
- Verse 7: ಜೆರಹನ ಸಂತತಿಯಲ್ಲಿ ಕರ್ಮಿಯ ಮಗ ಆಕಾರನು ಸರ್ವೇಶ್ವರನಿಗೆ ಮೀಸಲಾಗಿಟ್ಟಿದ್ದ ವಸ್ತುಗಳನ್ನು ಕದ್ದುಕೊಂಡದ್ದರಿಂದ ಇಸ್ರಯೇಲರಿಗೆ ಆಪತ್ತನ್ನು ತಂದಿದ್ದನು.
- Verse 8: ಏತಾನನಿಗೆ ಅಜರ್ಯನೆಂಬ ಒಬ್ಬ ಮಗನಿದ್ದನು.
- Verse 9: ಹೆಚ್ರೋನನಿಗೆ ಮೂರು ಜನ ಮಕ್ಕಳು ಇದ್ದರು. ಅವರು - ಯೆರಹ್ಮೇಲ್, ರಾಮ್ ಮತ್ತು ಕೆಲೂಬಾಯ್ ಎಂಬವರು.
- Verse 10: ರಾಮನಿಂದ ಜೆಸ್ಸೆವರೆಗಿನ ವಂಶಜರು: ಅಮ್ಮೀನಾದಾಬ್, ಯೆಹೂದ ಗೋತ್ರದ ಪ್ರಮುಖ ವ್ಯಕ್ತಿಯಾದ ನಹಶೋನ,
- Verse 11: ಸಲ್ಮನ, ಬೋವಜ,
- Verse 12: ಓಬೇದ ಹಾಗೂ ಜೆಸ್ಸೆ.
- Verse 13: ಜೆಸ್ಸೆಯ ಏಳು ಜನ ಮಕ್ಕಳು: ಎಲೀಯಾಬ್, ಅಬೀನಾದಾಬ್, ಶಿಮ್ಮ,
- Verse 14: ನೆತನೇಲ್, ರದ್ದೈ,
- Verse 15: ಓಚೆಮ್ ಮತ್ತು ದಾವೀದ್.
- Verse 16: ಅವನ ಇಬ್ಬರು ಹೆಣ್ಣು ಮಕ್ಕಳು: ಚೆರೂಯ ಹಾಗೂ ಅಬೀಗೈಲ ಎಂಬವರು. ಜೆಸ್ಸೆಯ ಮಗಳು ಚೆರೂಯಳಿಗೆ ಅಬೈ , ಯೋವಾಬ್ , ಅಸಾಹೇಲ್ ಎಂಬ ಮೂರು ಜನ ಮಕ್ಕಳಿದ್ದರು .
- Verse 17: ಅವನ ಇನ್ನೊಬ್ಬ ಮಗಳು ಅಬೀಗೈಲಳು ಇಷ್ಮಾಯೇಲನ ವಂಶಜ ಯೆತೆರ್ ಎಂಬವನನ್ನು ವಿವಾಹವಾಗಿ ಅಮಾಸ ಎಂಬ ಮಗನನ್ನು ಪಡೆದಳು.
- Verse 18: ಹೆಚ್ರೋನನ ಮಗ ಕಾಲೇಬ, ಅಜೂಬಳನ್ನು ಮದುವೆಯಾಗಿ ಯೆರ್ಯೋತ್ ಎಂಬ ಮಗಳನ್ನು ಪಡೆದನು. ಆಕೆಯ ಮೂರು ಜನ ಗಂಡುಮಕ್ಕಳು: ಯೇಷೆರ್, ಶೊಬಾಬ್, ಅರ್ದೋನ್ ಎಂಬವರು.
- Verse 19: ಅಜೂಬಳ ಮರಣದ ನಂತರ ಕಾಲೇಬನು ಎಫ್ರಾತಳನ್ನು ಮದುವೆ ಆಗಿ ಹೂರ್ ಎಂಬ ಮಗನನ್ನು ಪಡೆದನು.
- Verse 20: ಹೂರನಿಗೆ ಊರಿಯ ಎಂಬ ಮಗ ಮತ್ತು ಬೆಚಲೇಲ ಎಂಬ ಮೊಮ್ಮಗ ಇದ್ದರು.
- Verse 21: ಹೆಚ್ರೋನ ಅರುವತ್ತು ವರ್ಷದವನಾದಾಗ ಗಿಲ್ಯಾದನ ಸೋದರಿಯಾದ ಮಾಕೀರನ ಮಗಳನ್ನು ಮದುವೆಯಾದನು. ಅವರಿಗೆ ಸೆಗೂಬ ಎಂಬ ಮಗ ಜನಿಸಿದ.
- Verse 22: ಸೆಗೂಬನಿಗೆ ಯಾಯೀರ ಎಂಬ ಮಗ ಜನಿಸಿದ. ಯಾಯೀರ ಗಿಲ್ಯಾದನ ಇಪ್ಪತ್ಮೂರು ಪಟ್ಟಣಗಳ ಮೇಲೆ ಆಡಳಿತ ಮಾಡಿದನು.
- Verse 23: ಆದರೆ ಗೆಷೂರ್ಯರ ಮತ್ತು ಅರಾಮ್ಯರ ರಾಜ್ಯಗಳವರು ಯಾಯೀರನ ಹಾಗೂ ಕೆನತ್ ಪ್ರಾಂತ್ಯದ ಗ್ರಾಮಗಳನ್ನೂ ಅವುಗಳ ಸಮೀಪದ ಪಟ್ಟಣಗಳನ್ನೂ ಸೇರಿ ಒಟ್ಟು ಅರುವತ್ತು ಪಟ್ಟಣಗಳನ್ನು ಗೆದ್ದುಕೊಂಡರು. ಅಲ್ಲಿ ವಾಸಿಸಿದ್ದ ಎಲ್ಲಾ ಜನರೂ ಗಿಲ್ಯಾದನ ತಂದೆ ಮಾಕೀರನ ವಂಶಜರೇ ಆಗಿದ್ದರು.
- Verse 24: ಹೆಚ್ರೋನನು ಮರಣ ಹೊಂದಿದ ನಂತರ ಅವನ ಮಗ ಕಾಲೇಬ್ ತನ್ನ ತಂದೆಯ ವಿಧವೆ ಎಫ್ರಾತಳನ್ನು ಮದುವೆಯಾದನು. ಅವರಿಗೆ ಅಷ್ಹೂರ ಎಂಬ ಮಗ ಜನಿಸಿದ. ತೆಕೋವ ಪಟ್ಟಣವನ್ನು ಕಟ್ಟಿದವನು ಇವನೇ.
- Verse 25: ಹೆಚ್ರೋನನ ಚೊಚ್ಚಲ ಮಗ ಯೆರಹ್ಮೇಲನಿಗೆ ಐದು ಜನ ಮಕ್ಕಳು ಇದ್ದರು. ಅವರು - ಹಿರಿಯವನಾದ ರಾಮ್ ಮತ್ತು ಬೂನ, ಓರೆನ್, ಓಚೆಮ್, ಹಾಗೂ ಅಹೀಯ ಎಂಬವರು.
- Verse 26: ರಾಮನಿಗೆ ಮಾಚ್, ಯಾಮೀನ್, ಏಕೆರ್ ಎಂಬ ಮೂರು ಮಕ್ಕಳಿದ್ದರು. ಯೆರೆಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಅವಳಿಂದ ಓನಾಮ ಎಂಬ ಮಗ ಜನಿಸಿದ.
- Verse 27: ರಾಮನಿಗೆ ಮಾಚ್, ಯಾಮೀನ್, ಏಕೆರ್ ಎಂಬ ಮೂರು ಮಕ್ಕಳಿದ್ದರು. ಯೆರೆಹ್ಮೇಲನಿಗೆ ಅಟಾರ ಎಂಬ ಇನ್ನೊಬ್ಬ ಹೆಂಡತಿಯಿದ್ದಳು. ಅವಳಿಂದ ಓನಾಮ ಎಂಬ ಮಗ ಜನಿಸಿದ.
- Verse 28: ಓನಾಮನಿಗೆ ಶಮ್ಮೈ, ಮತ್ತು ಯಾದ ಎಂಬ ಇಬ್ಬರು ಮಕ್ಕಳಿದ್ದರು. ಶಮ್ಮೈ ಮಕ್ಕಳು: ನಾದಾಬ್ ಹಾಗೂ ಅಬೀಷೂರ್.
- Verse 29: ಅಬೀಷೂರ ಅಬೀಹೈಲ್ ಎಂಬವಳೊಂದಿಗೆ ವಿವಾಹವಾಗಿ ಅಹ್ಬಾನ್, ಮೋಲೀದ್ ಎಂಬಿಬ್ಬರು ಮಕ್ಕಳನ್ನು ಪಡೆದನು.
- Verse 30: ಅಬೀಷೂರನ ಸಹೋದರ ನಾದಾಬನಿಗೆ ಸೆಲೆದ್, ಅಪ್ಪಯಿಮ್ ಎಂಬಿಬ್ಬರು ಮಕ್ಕಳಿದ್ದರು. ಆದರೆ ಸೆಲೆದನು ಮಕ್ಕಳಿಲ್ಲದೇ ಮರಣ ಹೊಂದಿದನು.
- Verse 31: ಅಪ್ಪಯಿಮ್ ಇಷ್ಷೀಯ ತಂದೆ. ಇಷ್ಷೀ ಶೇಷಾನ್ ನ ತಂದೆ, ಶೇಷಾನನು ಅಹ್ಲ್ಯೋ ತಂದೆ.
- Verse 32: ಶಮ್ಮೆಯ ತಮ್ಮನಾದ ಯಾದಾನಿಗೆ ಯೆತೆರ್ ಮತ್ತು ಯೋನಾತಾನ್ ಎಂಬ ಮಕ್ಕಳು ಇದ್ದರು. ಯೆತೆರ್ ಮಕ್ಕಳಿಲ್ಲದೇ ಮಡಿದನು.
- Verse 33: ಯೋನಾತಾನನಿಗೆ ಪೆಲಿತ್, ಜಾಜ ಎಂಬ ಮಕ್ಕಳಿದ್ದರು. ಇವರೆಲ್ಲರೂ ಯೆರಹ್ಮೇಲನ ವಂಶಜರು.
- Verse 34: ಶೇಷಾನನಿಗೆ ಗಂಡುಮಕ್ಕಳಿರಲಿಲ್ಲ; ಹೆಣ್ಣು ಮಕ್ಕಳೇ ಇದ್ದರು. ಅವನಿಗೆ ಯರ್ಹ ಎಂಬ ಸೇವಕನಿದ್ದನು.
- Verse 35: ಅವನಿಗೆ ತನ್ನ ಹೆಣ್ಣು ಮಕ್ಕಳಲ್ಲಿ ಒಬ್ಬಳನ್ನು ಮದುವೆಮಾಡಿಕೊಟ್ಟನು. ಅವರಿಗೆ ಜನಿಸಿದ ಮಗನ ಹೆಸರು ಅತ್ತೈ ಎಂದು.
- Verse 36: ಅತ್ತೈನಿಂದ ಎಲೀಮಾನವರೆಗಿನ ವಂಶಜರ ಹೆಸರುಗಳು: ಅತ್ತೈ, ನಾತಾನ್, ಜಾಬಾದ,
- Verse 37: ಎಫ್ಲಾಲ, ಓಬೇದ್,
- Verse 38: ಯೇಹೂವು, ಅಜರ್ಯ,
- Verse 39: ಹೆಲೆಚ, ಎಲ್ಲಾಸ,
- Verse 40: ಸಿಸ್ಮೈ, ಶಲ್ಲೂಮ,
- Verse 41: ಯೆಕಮ್ಯಾಹ ಮತ್ತು ಎಲೀಷಾಮ.
- Verse 42: ಕಾಲೇಬನ ಚೊಚ್ಚಲು ಮಗನಿಗೆ ಅಂದರೆ ಯೆರಹ್ಮೇಲನ ಸಹೋದರನಿಗೆ ಮೇಷ ಎಂದು ಹೆಸರಿಡಲಾಗಿತ್ತು. ಮೇಷನು ಜೀಫ್ಯನ ತಂದೆ, ಇವನು ಮಾರೇಷನ ತಂದೆ, ಇವನು ಹೆಬ್ರೋನನ ತಂದೆ,
- Verse 43: ಹೆಬ್ರೋನನಿಗೆ ಕೋರಹ, ತಪ್ಪೂಹ, ರೆಕೆಮ್ ಮತ್ತು ಶೆವು ಎಂಬ ನಾಲ್ವರು ಮಕ್ಕಳು ಇದ್ದರು.
- Verse 44: ಶೆಮ ರಹಮನ ತಂದೆ, ಯೊರ್ಕೆಯಾಮ್ಯನ ಅಜ್ಜ. ಶೆಮನ ಸಹೋದರ ರೆಕೆಮ ಶಮ್ಮೈಯನ ತಂದೆ,
- Verse 45: ಇವನು ಮಾವೋನ್ಯನ ತಂದೆ, ಇವನು ಬೇತ್ಸೂರನ ತಂದೆ.
- Verse 46: ಕಾಲೇಬನಿಗೆ ಏಫಾ ಎಂಬ ಉಪಪತ್ನಿ ಇದ್ದಳು. ಅವಳಿಂದ ಅವನಿಗೆ ಹಾರಾನ್, ಮೋಚ, ಗಾಜೇಜ್ ಹುಟ್ಟಿದರು. ಹಾರಾನನಿಗೆ ಗಾಜೇಜ ಎಂಬ ಹೆಸರಿನ ಮಗನಿದ್ದನು.
- Verse 47: ಯಾದೈ ಎಂಬವನಿಗೆ ಆರು ಜನ ಮಕ್ಕಳು: ರೆಗೆಮ್, ಯೋತಾಮ್, ಗೇಷಾನ್, ಪೆಲೆಟ್, ಏಪ, ಶಾಫ್ ಎಂಬವರು.
- Verse 48: ಕಾಲೇಬನ ಇನ್ನೊಬ್ಬ ಉಪಪತ್ನಿ - ಮಾಕಾ. ಅವಳಿಂದ ಶೆಬಿರ್, ತಿರ್ಹನ ಎಂಬಿಬ್ಬರು ಮಕ್ಕಳು ಜನಿಸಿದರು.
- Verse 49: ಅನಂತರ ಅವಳಿಗೆ ಮತ್ತೆ ಇಬ್ಬರು ಮಕ್ಕಳು ಜನಿಸಿದರು: ಮದ್ಮನ್ನ ಪಟ್ಟಣವನ್ನು ಕಟ್ಟಿಸಿದ ಶಾಫ್ ಒಬ್ಬನು. ಮಕ್ಬೇನ ಮತ್ತು ಗಿಬ್ಯ ಪಟ್ಟಣಗಳನ್ನು ಕಟ್ಟಿಸಿದ ಶೆವ ಇನ್ನೊಬ್ಬನು. ಇವರಲ್ಲದೆ ಕಾಲೇಬನಿಗೆ ಅಕ್ಸಾಹ ಎಂಬ ಹೆಣ್ಣು ಮಗಳು ಇದ್ದಳು.
- Verse 50: ಇನ್ನುಳಿದ ಕಾಲೇಬನ ವಂಶಜರು: ಕಾಲೇಬನಿಗೆ ಅವನ ಹೆಂಡತಿ ಎಫ್ರಾತಳಿಂದ ಜನಿಸಿದ ಚೊಚ್ಚಲ ಮಗನ ಹೆಸರು ಹೂರ ಎಂದು. ಹೂರನ ಮಗ ಶೋಬಾಲ್ - ಕಿರ್ಯತ್ಯಾರೀಮ್ ಪಟ್ಟಣವನ್ನೂ
- Verse 51: ಅವನ ಇನ್ನೊಬ್ಬ ಮಗ ಸಲ್ಮ ಬೆತ್ಲೆಹೇಮನ್ನೂ ಅವನ ಮೂರನೆಯ ಮಗ ಹಾರೇಫ್, ಬೇತ್ಗಾದೇರ್ ಪಟ್ಟಣವನ್ನೂ ಕಟ್ಟಿಸಿದರು.
- Verse 52: ಕಿರ್ಯತ್ಯಾರೀಮ್ ಪಟ್ಟಣದ ಸ್ಥಾಪಕ ಶೋಬಾಲನು ಹರೋಯೆ ಜನರ, ಮಾನಹತಿಯರ ಅರ್ಧದಷ್ಟು ಜನರ,
- Verse 53: ಹಾಗೂ ಕಿರ್ಯತ್ಯಾರೀಮ್ನಲ್ಲಿ ವಾಸಿಸುವ ಯೆತೆರಿನವರ, ಪೂತ್ಯರ, ಶುಮಾತ್ಯರ ಹಾಗೂ ಮಿಷ್ರಾಗ್ಯರ ಪೂರ್ವಜನಾಗಿದ್ದನು. ಚೊರ್ರಾತ್ಯರು ಹಾಗೂ ಎಷ್ಟಾವೋಲ್ಯರು ಈ ಗೋತ್ರಗಳಿಗೆ ಸೇರಿದವರು.
- Verse 54: ನೆಟೋಫಾ, ಅಟರೋತ್, ಬೇತ್ಯೋವಾಬ್ ಹಾಗೂ ಮಾನಹತಿಯರ ಎರಡು ಗೋತ್ರಗಳಲ್ಲಿ ಒಂದಾದ ಜೊರ್ಗದ ನಿವಾಸಿಗಳಿಗೆ ಬೆತ್ಲೆಹೇಮ್ ಪಟ್ಟಣದ ಸ್ಥಾಪಕ ಸಲ್ಮನು ಮೂಲಪುರುಷ ಆಗಿದ್ದನು.
- Verse 55: ಬರವಣಿಗೆಯಲ್ಲಿ ಮತ್ತು ದಾಖಲೆಗಳನ್ನು ನಕಲು ಮಾಡುವುದರಲ್ಲಿ ಪ್ರವೀಣರಾದ ತಿರ್ರಾತ್ಯರು, ಶಿಮ್ಗಾತ್ಯರು, ಸುಕಾತ್ಯರು ಯಾಬೇಚಿನಲ್ಲಿ ವಾಸಿಸಿದ್ದರು. ರೇಕಾಬ್ಬರೊಂದಿಗೆ ಅಂತರ್ ವಿವಾಹ ಮಾಡಿಕೊಂಡ ಕೇನ್ಯರು ಇವರೇ.