வேதாகமம்
ಹಳೆಯ ಒಡಂಬಡಿಕೆ
ನೆಹೆಮೀಯ
7ನೇ ಅಧ್ಯಾಯ
- Verse 1: ಗೋಡೆಯನ್ನು ಕಟ್ಟಿ ಮುಗಿಸಿದನಂತರ ನಾನು ಕದಗಳನ್ನು ಹಚ್ಚಿಸಿದೆ; ದ್ವಾರಪಾಲಕರನ್ನೂ ಗಾಯಕರನ್ನೂ ಲೇವಿಯರನ್ನೂ ನೇಮಿಸಲಾಯಿತು.
- Verse 2: ಆಮೇಲೆ ನನ್ನ ತಮ್ಮ ಹನಾನಿಗೆ ಹಾಗು ಬಹಳ ನಂಬಿಗಸ್ತನೂ ದೇವರಲ್ಲಿ ವಿಶೇಷ ಭಯಭಕ್ತಿಯುಳ್ಳವನೂ ದುರ್ಗಾ ಅಧಿಕಾರಿಯೂ ಆಗಿದ್ದ ಹನನ್ಯನಿಗೆ ಜೆರುಸಲೇಮಿನ ಮೇಲ್ವಿಚಾರಣೆಯನ್ನು ಒಪ್ಪಿಸಿದೆ.
- Verse 3: ಅವರಿಗೆ, “ಬಿಸಿಲೇರುವುದಕ್ಕಿಂತ ಮೊದಲೇ ಜೆರುಸಲೇಮಿನ ಬಾಗಿಲುಗಳನ್ನು ತೆರೆಯಬಾರದು; ಕಾವಲುಗಾರರು ಇನ್ನೂ ಇರುವಲ್ಲೇ ಕದಗಳನ್ನು ಮುಚ್ಚಿ ಭದ್ರಪಡಿಸಬೇಕು. ಇದಲ್ಲದೆ, ಜೆರುಸಲೇಮಿನ ನಿವಾಸಿಗಳಲ್ಲೇ ಕಾವಲುಗಾರರನ್ನು ಗೊತ್ತುಮಾಡಿರಿ. ಪ್ರತಿಯೊಬ್ಬನನ್ನು ಅವನವನ ಮನೆಯ ಎದುರಿನಲ್ಲೇ ಕಾವಲಿರುವಂತೆ ನೇಮಿಸಿರಿ,” ಎಂದು ಆಜ್ಞಾಪಿಸಿದೆ.
- Verse 4: ಪಟ್ಟಣವೇನೊ ಸವಿಸ್ತಾರವಾಗಿತ್ತು. ಆದರೆ ಅದರೊಳಗಿದ್ದ ಜನ ಬಹಳ ಸ್ವಲ್ಪಮಂದಿ. ಮನೆಗಳನ್ನು ಇನ್ನೂ ಕಟ್ಟಿರಲಿಲ್ಲ.
- Verse 5: ಹೀಗಿರಲು, ನಾನು ನನ್ನ ದೇವರ ಪ್ರೇರಣೆಯಿಂದ ಶ್ರೀಮಂತರನ್ನು, ಅಧಿಕಾರಿಗಳನ್ನು ಹಾಗು ಜನಸಾಮಾನ್ಯರನ್ನು ಜನಗಣತಿಗಾಗಿ ಸಭೆಸೇರಿಸಿದೆ. ಆಗ ಜೆರುಸಲೇಮಿಗೆ ಮೊದಲು ಹಿಂದಿರುಗಿ ಬಂದವರ ಹೆಸರುಗಳ ಪಟ್ಟಿ ನನಗೆ ಸಿಕ್ಕಿತು. ಅದರಲ್ಲಿ ಹೀಗೆ ಬರೆದಿತ್ತು:
- Verse 6: ಸೆರೆಯಿಂದ ಹಿಂತಿರುಗಿ ಬಂದ ಯೆಹೂದ ಜನಾಂಗದವರ ಪಟ್ಟಿ: ಬಾಬಿಲೋನಿನ ಅರಸ ನೆಬೂಕದ್ನೆಚ್ಚರನಿಂದ ಸೆರೆಗೆ ಒಯ್ಯಲ್ಪಟ್ಟವರಲ್ಲಿ ಜೆರುಸಲೇಮಿಗೂ ಜುದೇಯ ಪ್ರಾಂತ್ಯದ ಸ್ವಂತ ಪಟ್ಟಣಗಳಿಗೂ ಹಿಂದಿರುಗಿದವರು ಇವರು: ಅ ಇವರ ನಾಯಕರಲ್ಲಿ
- Verse 7: ಜೆರುಬ್ಬಾಬೆಲ್, ಯೇಷೂವ, ನೆಹೆಮೀಯ, ಅಜರ್ಯ, ರಗಮ್ಯ, ನಹಮಾನೀ, ಮೊರ್ದೆಕೈ, ಬಿಲ್ಷಾನ್, ಮಿಸ್ಪೆರತ್, ಬಿಗ್ವೈ, ನೆಹೂಮ್ ಹಾಗು ಬಾಣ ಎಂಬವರು: ಆ ಅವರ ಜನಸಾಮಾನ್ಯರಲ್ಲಿ:
- Verse 8: ಪರೋಷಿನವರು - 2172
- Verse 9: ಶೆಫಟ್ಯನವರು -372
- Verse 10: ಆರಹನವರು - 652
- Verse 11: ಪಹತ್ಮೋವಾಬಿನವರಾದ ಯೇಷೂವ ಮತ್ತು ಯೋವಾಬ್ ಸಂತಾನದವರು - 2818
- Verse 12: ಏಲಾಮಿನವರು - 1254
- Verse 13: ಜತ್ತೂವಿನವರು - 845
- Verse 14: ಜಕ್ಕೈಯವರು - 760
- Verse 15: ಬಿನ್ನೂಯವರು - 648
- Verse 16: ಬೇಬೈಯವರು - 628
- Verse 17: ಅಜ್ಗಾದಿನವರು - 2322
- Verse 18: ಅದೋನೀಕಾಮಿನವರು - 667
- Verse 19: ಬಿಗ್ವೈಯವರು - 2067
- Verse 20: ಅದೀನನವರು - 665
- Verse 21: ಅಟೇರಿನವರಾದ ಹಿಜ್ಕೀಯನ ಸಂತಾನದವರು - 98
- Verse 22: ಹಾಷುಮಿನವರು -328
- Verse 23: ಬೇಚೈಯವರು -324
- Verse 24: ಹಾರಿಫಿನವರು - 112
- Verse 25: ಗಿಬ್ಯೋನಿನವರು - 95
- Verse 26: ಬೆತ್ಲೆಹೇಮ್ ನೆಟೋಫ ಊರುಗಳವರು - 188
- Verse 27: ಅನಾತೋತ್ ಊರಿನವರು - 128
- Verse 28: ಬೇತಜ್ಮಾವೇತಿನವರು - 42
- Verse 29: ಕಿರ್ಯತ್ಯಾರೀಮ್ ಕೆಫೀರಾ ಬೇರೋತ್ ಊರುಗಳವರು - 743
- Verse 30: ರಾಮಾ, ಗೆಬ ಊರುಗಳವರು - 621
- Verse 31: ಮಿಕ್ಮಾಸಿನವರು - 122
- Verse 32: ಬೇತೇಲ್, ಆಯಿ ಎಂಬ ಊರುಗಳವರು - 123
- Verse 33: ಎರಡನೆಯ ನೆಬೋನಿನವರು - 52
- Verse 34: ಎರಡನೆಯ ಏಲಾಮಿನವರು - 1254
- Verse 35: ಹಾರಿಮನವರು -320
- Verse 36: ಜೆರಿಕೋವಿನವರು -345
- Verse 37: ಲೋದ್, ಹಾದೀದ್, ಓನೋ ಎಂಬ ಊರುಗಳವರು - 721
- Verse 38: ಸೆನಾಹನವರು -3930 ಇ
- Verse 39: ಯಾಜಕರಲ್ಲಿ - ಯೆದಾಯನವರಾದ ಯೇಷೂವನ ಮನೆಯವರು - 973
- Verse 40: ಇಮ್ಮೇರನವರು - 1052
- Verse 41: ಪಷ್ಹೂರನವರು - 1247
- Verse 42: ಹಾರಿಮನವರು - 1017 ಈ
- Verse 43: ಲೇವಿಯರಲ್ಲಿ - ಹೋದವ್ಯನವರಾದ ಯೇಷೂವ, ಕದ್ಮೀಯೇಲ್ ಇವರ ಸಂತಾನದವರು - 74 ಉ
- Verse 44: ಗಾಯಕರಲ್ಲಿ - ಆಸಾಫ್ಯರು - 148 ಊ
- Verse 45: ದ್ವಾರಪಾಲಕರಲ್ಲಿ - ಶಲ್ಲೂಮ್, ಆಟೇರ್, ಟಲ್ಮೋನ್, ಅಕ್ಕೂಬ್, ಹಟೀಟಾ, ಶೋಬೈ ಇವರ ಸಂತಾನದವರು ಒಟ್ಟು - 138 ಎ
- Verse 46: ದೇವಸ್ಥಾನ ಪರಿಚಾರಕರಲ್ಲಿ - ಜೀಹ, ಹಸೂಫ, ಟಬ್ಬಾವೋತ್, ಕೇರೋಸ್, ಸೀಯ,
- Verse 47: ಪಾದೋನ್, ಲೆಬಾನ, ಹಗಾಬ,
- Verse 48: ಸಲ್ಮೈ, ಹಾನಾನ್, ಗಿದ್ದೇಲ್, ಗಹರ್, ರೆವಾಯ, ರೆಚೀನ್,
- Verse 49: ಸಲ್ಮೈ, ಹಾನಾನ್, ಗಿದ್ದೇಲ್, ಗಹರ್, ರೆವಾಯ, ರೆಚೀನ್,
- Verse 50: ನೆಕೋದ, ಗಜ್ಜಾಮ್, ಉಜ್ಜ, ಪಾಸೇಹ,
- Verse 51: ನೆಕೋದ, ಗಜ್ಜಾಮ್, ಉಜ್ಜ, ಪಾಸೇಹ,
- Verse 52: ಬೇಸೈ, ಮೆಯನೀಮ್, ನೆಫೀಷೆಸೀಮ್,
- Verse 53: ಬಕ್ಬೂಕ್, ಹಕ್ಕೂಫ, ಹರ್ಹೂರ್, ಬಚ್ಲೂತ್, ಮೆಹೀದ,
- Verse 54: ಹರ್ಷ, ಬರ್ಕೋಸ್, ಸೀಸೆರ, ತೆಮಹ,
- Verse 55: ಹರ್ಷ, ಬರ್ಕೋಸ್, ಸೀಸೆರ, ತೆಮಹ,
- Verse 56: ನೆಚೀಹ, ಹಟೀಫ ಇವರ ಸಂತಾನದವರು. ಏ
- Verse 57: ಸೊಲೊಮೋನನ ದಾಸರಲ್ಲಿ - ಸೋಟೈ, ಸೋಫೆರೆತ್, ಪೆರೀದ, ಯಾಲ,
- Verse 58: ದರ್ಕೋನ್, ಗಿದೇಲ್, ಶೆಫಟ್ಯ, ಹಟ್ಟೀಲ್,
- Verse 59: ಪೋಕೆರೆತ್ ಹಚ್ಚೆಬಾಯೀಮ್, ಆಮೋನ್ ಇವರ ಸಂತಾನದವರು.
- Verse 60: ಎಲ್ಲಾ ದೇವಸ್ಥಾನ ಪರಿಚಾರಕರು ಹಾಗು ಸೊಲೊಮೋನನ ಸೇವಕರು ಒಟ್ಟು -392 ಮಂದಿ.
- Verse 61: ತೇಲ್ಮೆಲಹ, ತೇಲ್ಹರ್ಷ, ಕೆರೂಬದ್ದೋನ್, ಇಮ್ಮೇರ್ ಎಂಬ ಊರುಗಳಿಂದ ಬಂದವರಾಗಿ ತಮ್ಮ ಗೋತ್ರವಂಶಾವಳಿಗಳನ್ನು ತೋರಿಸಿ ತಾವು ಇಸ್ರಯೇಲರೆಂಬುದನ್ನು ಸ್ಥಾಪಿಸಲಾರದವರಾದ
- Verse 62: ದೆಲಾಯ, ಟೋಬೀಯ, ನೆಕೋದ ಇವರ ಸಂತಾನದವರು 642 ಮಂದಿ.
- Verse 63: ಯಾಜಕರಲ್ಲಿ ಹೋಬಾಯ, ಹಕ್ಕೋಚ್, ಬರ್ಜಿಲ್ಲೈ ಇವರ ಸಂತಾನದವರು ತಮ್ಮ ವಂಶಾವಳಿಯನ್ನು ತೋರಿಸಲಾರದೆ ಹೋದರು. (ಈ ಬರ್ಜಿಲ್ಲೈ ಎಂಬುವನು ಗಿಲ್ಯಾದ್ಯನಾದ ಬರ್ಜಿಲ್ಲೈಯ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಮದುವೆ ಮಾಡಿಕೊಂಡು ಅವನ ಹೆಸರನ್ನು ಇಟ್ಟುಕೊಂಡಿದ್ದನು.)
- Verse 64: ಇವರು ತಮ್ಮ ವಂಶಾವಳಿ ಪತ್ರಗಳನ್ನು ಹುಡುಕಿದರೂ ಅವು ಸಿಕ್ಕದ ಕಾರಣ ಅಶುದ್ಧರೆಂದು ಯಾಜಕಾ ಸೇವೆಯಿಂದ ಬಹಿಷ್ಕೃತರಾದರು.
- Verse 65: ಊರಿಮ್ತುಮ್ಮೀಮುಗಳ ಮೂಲಕ ದೈವನಿರ್ಣಯವನ್ನು ತಿಳಿಸಬಲ್ಲವನಾದ ಯಾಜಕನು ಬರುವ ತನಕ ಇವರು ಮಹಾಪರಿಶುದ್ಧ ಪದಾರ್ಥಗಳನ್ನು ಭೋಜನ ಮಾಡಬಾರದೆಂಬುದಾಗಿ ರಾಜ್ಯಪಾಲ ತೀರ್ಪುಮಾಡಿದನು.
- Verse 66: ಸರ್ವಸಮೂಹದವರ ಒಟ್ಟು ಸಂಖ್ಯೆ - ನಾಲ್ವತ್ತೆರಡು ಸಾವಿರದ ಮುನ್ನೂರರುವತ್ತು.
- Verse 67: ಈ ಸಂಖ್ಯೆಯಲ್ಲಿ ಎಣಿಕೆಯಾಗದ ಅವರ ದಾಸದಾಸಿಯರು ಏಳು ಸಾವಿರದ ಮುನ್ನೂರ ಮೂವತ್ತೇಳು ಮಂದಿ. ಅವರ ಗಾಯಕರೂ ಗಾಯಕಿಯರೂ ಇನ್ನೂರ ನಾಲ್ವತ್ತೈದು ಮಂದಿ.
- Verse 68: ಅವರಿಗೆ ಏಳುನೂರ ಮೂವತ್ತಾರು ಕುದುರೆಗಳೂ ಇನ್ನೂರ ನಾಲ್ವತ್ತೈದು ಹೇಸರಕತ್ತೆಗಳೂ
- Verse 69: ನಾನೂರ ಮೂವತ್ತೈದು ಒಂಟೆಗಳೂ ಆರುಸಾವಿರದ ಏಳುನೂರಿಪ್ಪತ್ತು ಕತ್ತೆಗಳೂ ಇದ್ದವು.
- Verse 70: ಗೋತ್ರಪ್ರಧಾನರಲ್ಲಿ ಕೆಲವರು ಕೆಲಸಕ್ಕೆಬೇಕಾದ ದ್ರವ್ಯಸಹಾಯ ನೀಡಿದರು. ತಿರ್ಷಾತಾ ಎನಿಸಿಕೊಳ್ಳುವ ರಾಜ್ಯಪಾಲ ಭಂಡಾರಕ್ಕೆ ಕೊಟ್ಟದ್ದು - ಎಂಟು ಕಿಲೋಗ್ರಾಂ ಬಂಗಾರ. ಐವತ್ತು ಬೋಗುಣಿಗಳು, ಐನೂರಮೂವತ್ತು ಯಾಜಕವಸ್ತ್ರಗಳು.
- Verse 71: ಬೇರೆ ಕೆಲವು ಮಂದಿ ಗೋತ್ರಪ್ರಧಾನರು ಕಟ್ಟಡದ ಭಂಡಾರಕ್ಕೆ ಕೊಟ್ಟದ್ದು ನೂರಾರವತ್ತೆಂಟು ಕಿಲೋಗ್ರಾಂ ಬಂಗಾರ; ಸಾವಿರದ ಇನ್ನೂರ ಐವತ್ತು ಕಿಲೋಗ್ರಾಂ ಬೆಳ್ಳಿ
- Verse 72: ಉಳಿದ ಜನರು ಕೊಟ್ಟದ್ದು - ನೂರ ಅರವತ್ತೆಂಟು ಕಿಲೋಗ್ರಾಂ ಬಂಗಾರ; ನೂರ ನಲವತ್ತು ಕಿಲೋಗ್ರಾಂ ಬೆಳ್ಳಿ, ಅರುವತ್ತೇಳು ಯಾಜಕವಸ್ತ್ರಗಳು.
- Verse 73: ಯಾಜಕರು, ಲೇವಿಯರು, ದ್ವಾರಪಾಲಕರು, ಗಾಯಕರು, ಜನಸಾಮಾನ್ಯರು, ದೇವಸ್ಥಾನದ ಪರಿಚಾರಕರು ಅಂತೂ ಇಸ್ರಯೇಲರೆಲ್ಲರು ತಮ್ಮ ತಮ್ಮ ಪಟ್ಟಣಗಳಲ್ಲಿ ವಾಸಿಸುತ್ತಿದ್ದರು.