ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
1 ಪೂರ್ವಕಾಲದ ಇತಿಹಾಸ
6ನೇ ಅಧ್ಯಾಯ
- Verse 1: ಲೇವಿಯ ಮೂವರು ಮಕ್ಕಳು: ಗೇರ್ಷೋನ್, ಕೆಹಾತ್, ಮೆರಾರೀ.
- Verse 2: ಕೆಹಾತ್ ನಿಗೆ ನಾಲ್ವರು ಪುತ್ರರು ಇದ್ದರು. ಅವರು ಅಮ್ರಾಮ್, ಇಚ್ಹಾರ್, ಹೆಬ್ರೋನ್, ಉಜ್ಜೀಯೇಲ್ ಎಂಬವರು.
- Verse 3: ಅಮ್ರಾಮನಿಗೆ ಆರೋನ್, ಮೋಶೆ ಎಂಬ ಗಂಡುಮಕ್ಕಳೂ ಮಿರ್ಯಾಮ್ ಎಂಬ ಹೆಣ್ಣುಮಗಳೂ ಇದ್ದರು.
- Verse 4: ಆರೋನನಿಗೆ ನಾದಾಬ್, ಅಬೀಹೂ, ಎಲ್ಲಾಜಾರ್, ಈತಾಮಾರ್ ಎಂಬ ನಾಲ್ಕು ಜನ ಮಕ್ಕಳಿದ್ದರು.
- Verse 5: ಎಲ್ಲಾಜಾರ್ ನ ಸಂತತಿಯವರು ಇವರು: ಫೀನೆಹಾಸ, ಅಬೀಷೂವ, ಬುಕ್ಕೀಯ, ಉಜ್ಜೀಯ,
- Verse 6: ಜೆರಹ್ಯ, ಮೆರಾಯೋತ,
- Verse 7: ಅಮರ್ಯ, ಅಹೀಟೂಬ,
- Verse 8: ಚಾದೋಕ, ಅಹೀಮಾಚ,
- Verse 9: ಅಜರ್ಯ, ಯೋಹಾನಾನ.
- Verse 10: ಜೆರುಸಲೇಮಿನಲ್ಲಿ ಅರಸ ಸೊಲೊಮೋನನು ಕಟ್ಟಿಸಿದ ದೇವಾಲಯದಲ್ಲಿ ಸೇವೆಮಾಡಿದವರು: ಅಜರ್ಯ,
- Verse 11: ಅಮರ್ಯ, ಅಹೀಟೂಬ,
- Verse 12: ಚಾದೋಕ, ಶಲ್ಲೂಮ,
- Verse 13: ಹಿಲ್ಕೀಯ, ಅಜರ್ಯ,
- Verse 14: ಸೆರಾಯ, ಯೆಹೋಚಾದಾಕ ಎಂಬವರು.
- Verse 15: ಸರ್ವೇಶ್ವರ ಸೆರೆಗೆ ಕಳುಹಿಸಿದ ಜುದೇಯದ ಮತ್ತು ಜೆರುಸಲೇಮಿನ ಇತರ ಜನರೊಂದಿಗೆ ಅರಸ ನೆಬೂಕದ್ನೆಚ್ಚರನು ಯೆಹೋಚಾದಾಕನನ್ನು ಗಡೀಪಾರು ಮಾಡಿದನು.
- Verse 16: ಲೇವಿಗೆ ಗೇರ್ಷೋಮ್, ಕೆಹಾತ್, ಮೆರಾರಿ ಎಂಬ ಮೂರು ಮಂದಿ ಮಕ್ಕಳಿದ್ದರು.
- Verse 17: ಅವರಿಗೂ ಮಕ್ಕಳಿದ್ದರು. ಗೇರ್ಷೋಮನು ಲಿಬ್ನೀ ಮತ್ತು ಶಿಮ್ಮೀ ಎಂಬವರ ತಂದೆ.
- Verse 18: ಕೆಹಾತನು ಅಮ್ರಾಮ್, ಇಚ್ಹಾರ್, ಹೆಬ್ರೋನ, ಉಜ್ಜೀಯೇಲ್ ಎಂಬವರ ತಂದೆ.
- Verse 19: ಮೆರಾರಿಯು ಮಹ್ಲೀ, ಮುಷೀ ಎಂಬವರ ತಂದೆ.
- Verse 20: ಗೇರ್ಷೋಮನ ಸಂತತಿಯವರು: ಲಿಬ್ನೀ, ಯಹತ್, ಚಿಮ್ಮ,
- Verse 21: ಯೋವಾಹ, ಇದ್ದೋ, ಜೆರಹ ಮತ್ತು ಯೆವತ್ರೈ.
- Verse 22: ಕೆಹಾತನ ಸಂತತಿಯವರು: ಅಮ್ಮೀನಾದಾಬ್, ಕೋರಹ, ಅಸ್ಸೀರ್,
- Verse 23: ಎಲ್ಕಾನಾ, ಎಬ್ಯಾಸಾಫ್, ಅಸ್ಸೀರ್,
- Verse 24: ತಹತ್, ಉರೀಯೇಲ್, ಉಜ್ಜೀಯ ಮತ್ತು ಸೌಲ್.
- Verse 25: ಎಲ್ಕಾನನಿಗೆ ಇಬ್ಬರು ಮಕ್ಕಳಿದ್ದರು: ಅಮಾಸೈ, ಅಹೀಮೋತ್ ಎಂಬವರು.
- Verse 26: ಅಹೀಮೋತ್ನ ವಂಶಜರು: ಎಲ್ಕಾನ, ಚೋಫೈ, ನಹತ್, ಎಲೀಯಾಬ್, ಯೆರೋಹಾಮ್, ಎಲ್ಕಾನ ಹಾಗು ಸಮುವೇಲ.
- Verse 27: ಅಹೀಮೋತ್ನ ವಂಶಜರು: ಎಲ್ಕಾನ, ಚೋಫೈ, ನಹತ್, ಎಲೀಯಾಬ್, ಯೆರೋಹಾಮ್, ಎಲ್ಕಾನ ಹಾಗು ಸಮುವೇಲ.
- Verse 28: ಸಮುವೇಲನಿಗೆ ಇಬ್ಬರು ಮಕ್ಕಳಿದ್ದರು: ಯೋವೇಲ್ ಹಿರಿಯನು, ಅಬೀಯ ಕಿರಿಯವನು.
- Verse 29: ಮೆರಾರೀ ಸಂತತಿಯವರು: ಮಹ್ಲೀ, ಲಿಬ್ನೀ, ಶಿಮ್ಮೀ, ಉಜ್ಜಾ,
- Verse 30: ಶಿಮ್ಮಾ, ಹಗ್ಗೀಯ ಮತ್ತು ಅಸಾಯ ಎಂಬವರು.
- Verse 31: ಮಂಜೂಷವನ್ನು ಜೆರುಸಲೇಮಿಗೆ ತಂದ ತರುವಾಯ ಆರಾಧನಾವಿಧಿಗಾಗಿ ಅರಸ ದಾವೀದನು ಸಂಗೀತಮಂಡಲಿಯನ್ನು ನೇಮಿಸಿದನು.
- Verse 32: ಅರಸ ಸೊಲೊಮೋನ ದೇವಾಲಯವನ್ನು ಕಟ್ಟಿಸುವುದಕ್ಕಿಂತ ಪೂರ್ವದಲ್ಲಿ ಅವರು ಸರ್ವೇಶ್ವರನ ದರ್ಶನದ ಡೇರೆಯ ಬಳಿಯಲ್ಲಿ ಕ್ರಮಪ್ರಕಾರ ಅನುದಿನವೂ ಕಾರ್ಯ ನಿರ್ವಹಿಸಿದರು.
- Verse 33: ಹೀಗೆ ಕಾರ್ಯ ನಿರ್ವಹಿಸಿದವರ ಕುಟುಂಬಗಳ ಸರಣಿಯು ಇಂತಿದೆ: ಕೇಹತನ ಗೋತ್ರದವರು: ಪ್ರಥಮ ಸಂಗೀತಮಂಡಲಿಯ ನಾಯಕ ಯೋವೇಲನ ಮಗ ಹೇಮಾನ, ಇವನ ಹಿಂದಿನ ವಂಶಾವಳಿ ಯಕೋಬನವರೆಗೆ ಹೀಗಿದೆ: ಹೇಮಾನ, ಯೋವೇಲ, ಸಮುವೇಲ,
- Verse 34: ಎಲ್ಕಾನ, ಯೆರೋಹಾಮ, ಎಲೀಯೇಲ, ತೋಹ,
- Verse 35: ಚೂಫ, ಎಲ್ಕಾನ, ಮಹತ, ಅಮಾಸೈ,
- Verse 36: ಎಲ್ಕಾನ, ಯೋವೇಲ, ಅಜರ್ಯ, ಚೆಫನ್ಯ,
- Verse 37: ತಹತ, ಅಸೀರ, ಎಬ್ಯಾಸಾಫ, ಕೋರಹ,
- Verse 38: ಇಚ್ಹಾರ, ಕೆಹಾತ ಲೇವಿ, ಯಕೋಬ (ಇಸ್ರಯೇಲ).
- Verse 39: ಆಸಾಫನು ದ್ವಿತೀಯ ಸಂಗೀತಮಂಡಳಿಯ ನಾಯಕ. ಅವನ ಪೂರ್ವಜರ ವಂಶಾವಳಿ ಲೇವಿಯವರೆಗೆ ಹೀಗಿದೆ: ಆಸಾಫ, ಬೆರಕ್ಯ, ಶಿಮ್ಮ,
- Verse 40: ಮೀಕಾಯೇಲ, ಬಾಸೇಯ, ಮಲ್ಕೀಯ,
- Verse 41: ಎತ್ನಿ, ಜೆರಹ, ಅದಾಯ,
- Verse 42: ಏತಾನ, ಜಿಮ್ಮ, ಶಿಮ್ಮೀ,
- Verse 43: ಯಹತ, ಗೇರ್ಷೋಮ, ಲೇವಿ.
- Verse 44: ಮೆರಾರೀ ಕುಟುಂಬದ ಏತಾನ ತೃತೀಯ ಸಂಗೀತಮಂಡಳಿಯ ನಾಯಕ. ಅವನ ಪೂರ್ವಜರ ವಂಶಾವಳಿ ಲೇವಿಯವರೆಗೆ ಹೀಗಿದೆ: ಏತಾನ, ಕೀಷೀ, ಅಬ್ದೀಯ, ಮಲ್ಲೂಕ,
- Verse 45: ಹಷಬ್ಯ, ಅಮಚ್ಯ, ಹಿಲ್ಕೀಯ,
- Verse 46: ಅಮ್ಜೀ, ಬಾನೀ, ಶೆಮೆರ,
- Verse 47: ಮಹ್ಲೀ, ಮೂಷೀ, ಮೆರಾರಿ ಹಾಗು ಲೇವಿ.
- Verse 48: ಅವರ ಸಹೋದರರಾದ ಇತರ ಲೇವಿಯರು ಆರಾಧನೆಯ ಸ್ಥಳದಲ್ಲಿ ಬೇರೆ ಕೆಲಸಗಳಿಗೆ ನೇಮಕವಾಗಿದ್ದರು.
- Verse 49: ಆರೋನನೂ ಅವನ ವಂಶಜರೂ ಸುಗಂಧ ಕಾಣಿಕೆಗಳನ್ನು ಅರ್ಪಿಸುತ್ತಿದ್ದರು. ಬಲಿಪೀಠದ ಮೇಲೆ ಸಮರ್ಪಿಸುವ ಬಲಿಗಳನ್ನು ಅರ್ಪಣೆಮಾಡುತ್ತಿದ್ದರು. ಅತೀ ಪರಿಶುದ್ಧ ಸ್ಥಳದ ಎಲ್ಲ ಆರಾಧನೆಗೂ ಇಸ್ರಯೇಲರ ಕ್ಷಮಾಪಣೆಗಾಗಿ ಸರ್ವೇಶ್ವರ ನೇಮಿಸಿದ ಬಲಿಯರ್ಪಣೆಗಳಿಗೂ ಧೂಪಾರತಿಗೂ ಅವರೇ ಜವಾಬ್ದಾರರು ಆಗಿದ್ದರು. ದೇವರ ಸೇವಕ ಮೋಶೆ ಕೊಟ್ಟ ನಿಯಮಗಳಿಗೆ ಅನುಸಾರವಾಗಿ ಇದೆಲ್ಲವನ್ನೂ ಅವರು ಮಾಡುತ್ತಿದ್ದರು.
- Verse 50: ಆರೋನನ ವಂಶಜರು: ಎಲ್ಲಾಜಾರ್, ಫೀನೆಹಾಸ್, ಅಬೀಷೂವ,
- Verse 51: ಬುಕ್ಕೀ, ಉಜ್ಜೀ, ಜೆರಹ್ಯಾಹ,
- Verse 52: ಮೆರಾಯೋತ್, ಅಮರ್ಯ, ಅಹೀಟೂಬ್,
- Verse 53: ಚಾದೋಕ್ ಮತ್ತು ಅಹಿಮಾಚ್.
- Verse 54: ಕೆಹಾತನ ಗೋತ್ರದ ಆರೋನನ ವಂಶಜರಿಗೆ ನೇಮಕವಾದ ಪ್ರಾಂತ್ಯ ಇದು: ಲೇವಿಯರಿಗೆಂದು ಪ್ರತ್ಯೇಕಿಸಿದ ಪ್ರದೇಶದ ಪ್ರಥಮ ಪಾಲನ್ನು ಅವರು ಪಡೆದುಕೊಂಡರು.
- Verse 55: ಇದು ಯೆಹೂದ ಸೀಮೆಯ ಹೆಬ್ರೋನನ್ನೂ ಅದರ ಸುತ್ತಲಿನ ಪ್ರದೇಶಗಳನ್ನೂ ಒಳಗೊಂಡಿತ್ತು.
- Verse 56: ಪಟ್ಟಣಕ್ಕೆ ಒಳಪಟ್ಟ ಗದ್ದೆಗಳೂ ಗ್ರಾಮಗಳೂ ಯೆಫುನ್ನೆಯ ಮಗ ಕಾಲೇಬನಿಗೆ ಕೊಡಲಾಗಿದ್ದವು.
- Verse 57: ಆರೋನನ ಸಂತತಿಯವರಿಗೆ ಕೊಡಲಾದ ಪಟ್ಟಣಗಳು: ಆಶ್ರಯ ನಗರವಾದ ಹೆಬ್ರೋನ್, ಯತ್ತೀರ್ ಹಾಗು ಲಿಬ್ನದ ಪಟ್ಟಣಗಳು, ಎಷ್ಟೆಮೋವ, ಹೀಲೇನ್, ದೆಬೀರ್, ಆಷಾನ್, ಬೇತ್ಷೆಮೆಷ್ ಮತ್ತು ಅವುಗಳ ಫಲವತ್ತಾದ ಪ್ರದೇಶಗಳು.
- Verse 58: ಆರೋನನ ಸಂತತಿಯವರಿಗೆ ಕೊಡಲಾದ ಪಟ್ಟಣಗಳು: ಆಶ್ರಯ ನಗರವಾದ ಹೆಬ್ರೋನ್, ಯತ್ತೀರ್ ಹಾಗು ಲಿಬ್ನದ ಪಟ್ಟಣಗಳು, ಎಷ್ಟೆಮೋವ, ಹೀಲೇನ್, ದೆಬೀರ್, ಆಷಾನ್, ಬೇತ್ಷೆಮೆಷ್ ಮತ್ತು ಅವುಗಳ ಫಲವತ್ತಾದ ಪ್ರದೇಶಗಳು.
- Verse 59: ಆರೋನನ ಸಂತತಿಯವರಿಗೆ ಕೊಡಲಾದ ಪಟ್ಟಣಗಳು: ಆಶ್ರಯ ನಗರವಾದ ಹೆಬ್ರೋನ್, ಯತ್ತೀರ್ ಹಾಗು ಲಿಬ್ನದ ಪಟ್ಟಣಗಳು, ಎಷ್ಟೆಮೋವ, ಹೀಲೇನ್, ದೆಬೀರ್, ಆಷಾನ್, ಬೇತ್ಷೆಮೆಷ್ ಮತ್ತು ಅವುಗಳ ಫಲವತ್ತಾದ ಪ್ರದೇಶಗಳು.
- Verse 60: ಬೆನ್ಯಾಮೀನ್ಯರ ಪ್ರದೇಶದಲ್ಲಿ ಫಲವತ್ತಾದ ಪ್ರದೇಶಗಳನ್ನು ಒಳಗೊಂಡ ಪಟ್ಟಣಗಳು ಅಂದರೆ ಗೆಬ, ಅಲೆಮೆತ್, ಅನಾತೋತ್ ಈ ಪಟ್ಟಣಗಳನ್ನು ಅವರಿಗೆ ಕೊಡಲಾಗಿತ್ತು. ಅವರೆಲ್ಲರ ಕುಟುಂಬಗಳ ವಾಸಕ್ಕಾಗಿ ಒಟ್ಟು ಹದಿಮೂರು ಪಟ್ಟಣಗಳು ದೊರೆತವು.
- Verse 61: ಪಶ್ಚಿಮದಲ್ಲಿ ಮನಸ್ಸೆ ಪ್ರದೇಶದಲ್ಲಿದ್ದ ಹತ್ತು ಪಟ್ಟಣಗಳು ಕೇಹಾತನ ಗೋತ್ರದಲ್ಲಿದ್ದ ಉಳಿದವರಿಗೆ ಕುಟುಂಬ ಕುಟುಂಬವಾಗಿ ಚೀಟುಹಾಕಿ ಕೊಡಲಾಯಿತು.
- Verse 62: ಇಸ್ಸಾಕಾರ್, ಆಶೇರ್, ನಫ್ತಾಲಿ ಹಾಗು ಬಾಷಾನಿನ ಪೂರ್ವಮನಸ್ಸೆ ಈ ಪ್ರದೇಶಗಳಲ್ಲಿ ಇದ್ದ ಹದಿಮೂರು ನಗರಗಳನ್ನು ಕುಟುಂಬಗಳಿಗೆ ಅನುಗುಣವಾಗಿ ಗೇರ್ಷೋಮನ ಗೋತ್ರಕ್ಕೆ ಕೊಡಲಾಯಿತು.
- Verse 63: ಇದೇ ರೀತಿಯಲ್ಲಿ ರೂಬೇನ್, ಗಾದ್, ಜೆಬುಲೂನರ ಪ್ರದೇಶಗಳಲ್ಲಿದ್ದ ಹನ್ನೆರಡು ಪಟ್ಟಣಗಳನ್ನು ಕುಟುಂಬಗಳಿಗನುಸಾರವಾಗಿ ಮೆರಾರಿಯ ಗೋತ್ರಕ್ಕೆ ಮಂಜೂರು ಮಾಡಲಾಯಿತು.
- Verse 64: ಹೀಗೆಯೇ ಇಸ್ರಯೇಲರು ಲೇವಿಯರ ವಾಸಕ್ಕಾಗಿ ಪಟ್ಟಣಗಳನ್ನೂ ಅವುಗಳ ಸುತ್ತಮುತ್ತಲಿನ ಫಲವತ್ತಾದ ಭೂಮಿಗಳನ್ನೂ ಕೊಟ್ಟರು.
- Verse 65: ಮೇಲೆ ನಮೂದಿಸಿದ ಯೆಹೂದ, ಸಿಮೆಯೋನ್, ಬೆನ್ಯಾಮೀನ್ಯರ ಪ್ರದೇಶಗಳಲ್ಲಿದ್ದ ಪಟ್ಟಣಗಳನ್ನೂ ಸಹ ಚೀಟುಹಾಕುವುದರ ಮೂಲಕ ಹಂಚಲಾಯಿತು.
- Verse 66: ಕೇಹಾತನ ಗೋತ್ರದ ಕೆಲವು ಕುಟುಂಬಗಳಿಗೆ ಎಫ್ರಯಿಮ್ ಪ್ರದೇಶದಲ್ಲಿದ್ದ ಪಟ್ಟಣಗಳನ್ನು ಕೊಡಲಾಯಿತು.
- Verse 67: ಎಫ್ರಯಿಮ್ ಬೆಟ್ಟದಲ್ಲಿಯ ಆಶ್ರಯ ನಗರವಾದ ಶೆಕೆಮ್,
- Verse 68: ಗೆಜೆರ್, ಯೊಕ್ಮೆಯಾಮ್,
- Verse 69: ಬೇತ್ ಹೋರೋನ್, ಅಯ್ಯಾಲೋನ್, ಗತ್ರಿಮ್ಮೋನ್,
- Verse 70: ಪೂರ್ವದ ಮನಸ್ಸೆ ಪ್ರದೇಶದ ಆನೇರ್, ಬಿಳ್ಳಾಮ್ ಪಟ್ಟಣಗಳು ಅವುಗಳ ಸುತ್ತಲಿನ ಫಲವತ್ತಾದ ಪ್ರದೇಶಗಳನ್ನು ಅವರಿಗಾಗಿ ಪ್ರತ್ಯೇಕಿಸಲಾಯಿತು.
- Verse 71: ಗೇರ್ಷೋಮ ಗೋತ್ರದ ಕುಟುಂಬಗಳಿಗೆ ಫಲವತ್ತಾದ ಪ್ರದೇಶಗಳೊಂದಿಗೆ ಕೊಡಲಾದ ಪಟ್ಟಣಗಳು: ಪಶ್ಚಿಮ ಮನಸ್ಸೆ ಪ್ರದೇಶದಲ್ಲಿದ್ದ ಬಾಷಾನಿನ ಗೋಲಾನ್ ಮತ್ತು ಅಷ್ಟಾರೋಟ್;
- Verse 72: ಇಸ್ಸಾಕಾರನ ಪ್ರದೇಶದಲ್ಲಿದ್ದ ಕೆದೆಷ್, ದಾಬೆರತ್, ರಾಮೋತ್,
- Verse 73: ಆನೇಮ್,
- Verse 74: ಆಶೇರನ ಪ್ರದೇಶದಲ್ಲಿದ್ದ ಮಾಷಾಲ್, ಅಬ್ದೋನ್,
- Verse 75: ಹುಕೋಕ್, ರೆಹೋಬ್,
- Verse 76: ನಫ್ತಾಲಿ ಪ್ರದೇಶದಲ್ಲಿದ್ದ ಗಲಿಲಾಯದ ಕೆದೆಷ್, ಹಮ್ಮೋನ್ ಮತ್ತು ಕಿರ್ಯಾತಯಿಮ್.
- Verse 77: ಮೆರಾರಿ ಗೋತ್ರದ ಮಿಕ್ಕ ಕುಟುಂಬಗಳಿಗೆ ಫಲವತ್ತಾದ ಹೊಲಗದ್ದೆಗಳೊಂದಿಗೆ ಒದಗಿಸಲಾದ ನಗರಗಳು: ಜೆಬುಲೂನ್ ಪ್ರದೇಶದ ರಿಮ್ಮೋನೋ, ಹಾಗು ತಾಬೋರ್.
- Verse 78: ರೂಬೇನ್ ಪ್ರದೇಶದಲ್ಲಿದ್ದ ಜೋರ್ಡನ್ ನದಿಯ ಪೂರ್ವದಲ್ಲಿ ಜೆರಿಕೋವನ್ನು ದಾಟಿ, ತಪ್ಪಲು ಪ್ರದೇಶದಲ್ಲಿಯ ಬೆಚೆರ್, ಯಹಚ,
- Verse 79: ಕೆದೇಮೋತ್ ಮತ್ತು ಮೇಫಾತ್.
- Verse 80: ಗಾದನ ಪ್ರದೇಶದಲ್ಲಿ ಗಿಲ್ಯಾದಿನ, ರಾಮೋತ್, ಮಹನಯಿಮ್,
- Verse 81: ಹೆಷ್ಬೋನ್ ಹಾಗು ಯಗ್ಜೇರ್.