P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
120ನೇ ಅಧ್ಯಾಯ
- Verse 1: ಸಂಕಟದಲಿ ಮೊರೆಯಿಟ್ಟೆನು ಪ್ರಭುವಿಗೆ I ಕೊಟ್ಟನು ಸದುತ್ತರವನು ಆತನೆನಗೆ II
- Verse 2: ಬಿಡಿಸೆನ್ನನು ಪ್ರಭು ಸುಳ್ಳುಬಾಯಿಂದ I ವಂಚಿಸುವ ನಾಲಿಗೆ ಉಳ್ಳವರಿಂದ II
- Verse 3: ವಂಚಕ ನಾಲಿಗೆಯೆ, ನಿನಗೆ ಸಿಕ್ಕುವುದೇನು? I ನಿನಗೆ ಬಂದೊದಗುವ ಶಿಕ್ಷೆಯಾದರೂ ಏನು? II
- Verse 4: ತಟ್ಟುವುವು ಶೂರನ ಹರಿತ ಬಾಣಗಳು I ಗಿಟ್ಟುವುವು ಉರಿಯುವ ಬೆಂಕಿ ಕೆಂಡಗಳು II
- Verse 5: ಅಯ್ಯೋ ತಂಗಬೇಕಲ್ಲಾ ಮೇಷೆಕಿನವರ ಮಧ್ಯದಲಿ II ಅಕಟಾ ಇರಬೇಕಲ್ಲಾ ಕೇದಾರಿನ ಪಾಳೆಯಗಳಲಿ II
- Verse 6: ಶಾಂತಿಗೆ ಶತ್ರುಗಳಾದವರ ಒಡನಾಟ I ಸಾಕು ಆ ದೀರ್ಘ ಬಾಳಿನ ಸಂಕಟ II
- Verse 7: ಶಾಂತಿಪರ ಮಾತು ನನ್ನದು I ಸಮರದ ಕಾತರ ಅವರದು II