ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
12ನೇ ಅಧ್ಯಾಯ
- Verse 1: ನೆರವಾಗು ಪ್ರಭು, ಭಕ್ತರಿಲ್ಲವಾದರು ಜಗದೊಳು I ಶರಣರಾರೂ ಕಾಣಸಿಗರೆನಗೆ ನರಮಾನವರೊಳು II
- Verse 2: ಹುಸಿಯ ನುಡಿವರು ನೆರೆಯವರೊಡನೆ ಪ್ರತಿಯೋರ್ವರು I ಕಪಟ ಮನದ ತುಟಿಮಾತಿನ ಸ್ತುತಿಗಾರರವರು II
- Verse 3: ಕಪಟವಾಡುವ ತುಟಿಗಳನು ಪ್ರಭು ಕಡಿದುಬಿಡಲಿ I ಬಡಾಯಿಕೊಚ್ಚುವ ಜಿಹ್ವೆಯನು ಕತ್ತರಿಸಿಬಿಡಲಿ II
- Verse 4: “ನಮ್ಮ ತುಟಿಗೆ ಹತೋಟಿ ಬೇಕಿಲ್ಲ; ನಾಲಗೆಯೇ ಗೆಲುವಿನ ಮೂಲ I ನಮಗೊಡೆಯನ ಅವಶ್ಯವಿಲ್ಲ” ಎಂದವರಾಡುವುದು ಸಲ್ಲ II
- Verse 5: ಬಡವರ ಬವಣೆ ತಿಳಿಯಿತೆನಗೆ; ದಲಿತರ ನರಳಾಟ ಕೇಳಿಸಿತೆನಗೆ I ಎದ್ದು ಬರುವೆ, ಹಗೆಗಳಿಂದವರನು ಉದ್ಧರಿಸುವೆ” ಇದು ಪ್ರಭುವಿನ ಹೇಳಿಕೆ II
- Verse 6: ಪ್ರಭುವಿನ ಈ ವಾಗ್ದಾನ ಪ್ರಮಾಣಬದ್ಧ I ಏಳ್ಮಡಿ ಪುಟಕ್ಕಿಟ್ಟ ಬೆಳ್ಳಿಯಷ್ಟು ಶುದ್ಧ II
- Verse 7: ಅಲೆದಾಡುತಿಹರು ದುರುಳ ದ್ರೋಹಿಗಳು ಎಲ್ಲೆಡೆ I ದುಷ್ಟರಿಗಿದೆ ಮಾನವರ ನಡುವೆ ಪ್ರತಿಷ್ಟೆ II ನಮ್ಮನಿವರ ಕೈಯಿಂದ ತಪ್ಪಿಸಿ ಕಾಪಾಡು I ಹೇ ಪ್ರಭು, ನಮ್ಮನು ಸದಾ ಸುರಕ್ಷಿತವಾಗಿಡು II
- Verse 8: ಅಲೆದಾಡುತಿಹರು ದುರುಳ ದ್ರೋಹಿಗಳು ಎಲ್ಲೆಡೆ I ದುಷ್ಟರಿಗಿದೆ ಮಾನವರ ನಡುವೆ ಪ್ರತಿಷ್ಟೆ II ನಮ್ಮನಿವರ ಕೈಯಿಂದ ತಪ್ಪಿಸಿ ಕಾಪಾಡು I ಹೇ ಪ್ರಭು, ನಮ್ಮನು ಸದಾ ಸುರಕ್ಷಿತವಾಗಿಡು II