ಕನ್ನಡ ಸತ್ಯವೇದವು
ಹಳೆಯ ಒಡಂಬಡಿಕೆ
ಕೀರ್ತನೆಗಳು
83ನೇ ಅಧ್ಯಾಯ
- Verse 1: ಮಾತನಾಡದೆ ದೇವಾ, ಸುಮ್ಮನಿರಬೇಡ I ಮೌನದಿಂದ ಸ್ವಾಮೀ, ನಿಶ್ಚಿಂತನಿರಬೇಡ II
- Verse 2: ದಂಗೆಯೆದ್ದಿಹರಿದೋ ನಿನ್ನ ಶತ್ರುಗಳು I ತಲೆಯೆತ್ತಿಕೊಂಡಿಹರು ನಿನ್ನ ದ್ವೇಷಿಗಳು II
- Verse 3: ಕುತಂತ್ರಮಾಡುತಿಹರು ನಿನ್ನ ಪ್ರಜೆಗೆ ವಿರುದ್ಧ I ಆಲೋಚಿಸುತಿಹರು ನಿನ್ನ ಶರಣರಿಗೆ ವಿರುದ್ಧ II
- Verse 4: ಇಂತೆನ್ನುತಿಹರು : “ಬನ್ನಿ ಸಂಹರಿಸೋಣ I ಆತನ ಜನಾಂಗ ಉಳಿಯದಂತೆ ಮಾಡೋಣ I ಇಸ್ರಯೇಲೆಂಬ ನಾಮವನಳಿಸಿಬಿಡೋಣ” II
- Verse 5: ಎದೋಮ್ಯರ ಪಾಳೆಯದವರು ಇಷ್ಮಾಯೇಲ್ಯರು, I ಗೇಬಾಲ್ಯರು, ಅಮ್ಮೋನಿಯರು, ಅಮಾಲೇಕ್ಯರು, II
- Verse 6: ಮೊವಾಬ್ಯ, ಹಗ್ರೀಯ, ಫಿಲಿಷ್ಟಿಯ, ಟೈರ್ ಜನರು I ಒಮ್ಮತದಿಂದಿವರೆಲ್ಲರು ಒಟ್ಟುಗೂಡಿಹರು I ನಿನ್ನ ವಿರುದ್ಧವಾಗಿ ಒಳಸಂಚು ಮಾಡಿಹರು II
- Verse 7: ಮೊವಾಬ್ಯ, ಹಗ್ರೀಯ, ಫಿಲಿಷ್ಟಿಯ, ಟೈರ್ ಜನರು I ಒಮ್ಮತದಿಂದಿವರೆಲ್ಲರು ಒಟ್ಟುಗೂಡಿಹರು I ನಿನ್ನ ವಿರುದ್ಧವಾಗಿ ಒಳಸಂಚು ಮಾಡಿಹರು II
- Verse 8: ಇವರೊಡನೆ ಕೂಡಿಕೊಂಡಿಹ ಅಸ್ಸೀರ್ಯರು I ಲೋಟನ ವಂಶಕ್ಕೆ ಭುಜಬಲವಾಗಿಹರು II
- Verse 9: ಮಾಡವರಿಗೆ ಪ್ರಭೂ, ನೀ ಮಿದ್ಯಾನ್ಯರಿಗೆ ಮಾಡಿದಂತೆ I ಕಿಷೋನ್ ನದಿಯ ಬಳಿ ಸೀಸೆರ್ಯಾಬೀನರಿಗೆ ಮಾಡಿದಂತೆ II
- Verse 10: ಎಂದೋರಿನಲ್ಲವರು ಕೊಲೆಯಾದರು I ಹೊಲಗದ್ದೆಗಳಿಗೆ ಗೊಬ್ಬರವಾದರು II
- Verse 11: ಒರೆಬ್, ಜೇಬ್ ಎಂಬವರ ಗತಿಯೊದಗಲಿ ಇವರ ಸಿರಿವಂತರಿಗೆ I ಜೇಬಹ, ಚೆಲ್ಮುನ್ನರ ಪಾಡು ಬರಲಿರುವ ಸಕಲ ರಾಜರಿಗೆ I “ಬನ್ನಿ, ದೇವರ ನಾಡುಬೀಡನು ಆಕ್ರಮಿಸೋಣ” ಎಂದವರಿಗೆ II
- Verse 12: ಒರೆಬ್, ಜೇಬ್ ಎಂಬವರ ಗತಿಯೊದಗಲಿ ಇವರ ಸಿರಿವಂತರಿಗೆ I ಜೇಬಹ, ಚೆಲ್ಮುನ್ನರ ಪಾಡು ಬರಲಿರುವ ಸಕಲ ರಾಜರಿಗೆ I “ಬನ್ನಿ, ದೇವರ ನಾಡುಬೀಡನು ಆಕ್ರಮಿಸೋಣ” ಎಂದವರಿಗೆ II
- Verse 13: ಮಾಡಿವರನು ದೇವಾ, ಗಾಳಿಗೆ ತೂರುವ ಹೊಟ್ಟಿನಂತೆ I ಸುಂಟರಗಾಳಿಯಲಿ ಮೇಲೇಳುವ ದೂಳೀಪಟದಂತೆ II
- Verse 14: ಕಾಡುಮೇಡನು ಸುಡುವಾ ಬೆಂಕಿಯಂತೆ I ಪರ್ವತವನೆ ಉರಿಸುವ ಜ್ವಾಲೆಯಂತೆ II
- Verse 15: ಓಡಿಸೋಡಿಸವರನು ನೀ ಬೀಸುವ ಬಿರುಗಾಳಿಗೆ I ಗುರಿಪಡಿಸವರನು ನಿನ್ನಾ ಚಂಡಮಾರುತಕೆ II
- Verse 16: ಕವಿಯಲಿ ಅವಮಾನ ನಿಂದೆ ಇವರ ಮುಖವನು I ಅರಸುವರಾಗ ಪ್ರಭೂ, ನಿನ್ನ ಸಿರಿನಾಮವನು II
- Verse 17: ಕಳವಳಗೊಳ್ಳಲಿ ಅವರು ಸತತವು ಲಜ್ಜೆಯಿಂದ I ಅವರಳಿದುಹೋಗಲಿ ಅವಮಾನ ನಿಂದೆಗಳಿಂದ II
- Verse 18: ಇವರು ಅರಿಯಲಿ ಪ್ರಭುವೆಂಬ ನಾಮ ನಿನ್ನದೆಂದು I ಧರೆಯಲ್ಲೆಲ್ಲಾ ಸರ್ವೋನ್ನತ ನೀನೇ ಎಂದು II