पवित्र बाइबिल
ಹಳೆಯ ಒಡಂಬಡಿಕೆ
ಕೀರ್ತನೆಗಳು
54ನೇ ಅಧ್ಯಾಯ
1 : ರಕ್ಷಿಸೆನ್ನನು ದೇವ, ನಿನ್ನ ನಾಮ ಶಕ್ತಿಯಿಂದ I ನ್ಯಾಯ ದೊರಕಿಸೆನಗೆ ನಿನ್ನ ಪರಾಕ್ರಮದಿಂದ II
2 : ನನ್ನ ಪ್ರಾರ್ಥನೆಯನು ಆಲಿಸಯ್ಯಾ I ನನ್ನ ಮಾತುಗಳಿಗೆ ಕಿವಿಗೊಡು ದೇವಾ II
3 : ಗರ್ವಿಗಳು ನಿಂತಿಹರು ನನಗೆದುರಾಗಿ I ಕ್ರೂರಿಗಳು ಕಾದಿಹರೆನ್ನ ಕೊಲೆಗಾಗಿ I ಅವರಲಿಲ್ಲ ಮಾನ್ಯತೆ ದೇವರಿಗಾಗಿ II
4 : ನನಗಿದೋ ದೇವನೆ ಸಹಾಯಕನು I ಆತನೆನಗೆ ಜೀವಪೋಷಕನು II
5 : ತಿರುಗುಬಾಣವಾಗಲಿ ಶತ್ರುಗಳೆನಗೆ ಬಯಸುವ ಕೇಡು I ಸತ್ಯಸ್ವರೂಪಿಯಾದ ನೀನು ಅವರನು ನಾಶಮಾಡು II
6 : ಸರ್ವಾಪತ್ತುಗಳಿಂದ ತಪ್ಪಿಸಿದೆ ಪ್ರಭು, ನನ್ನನು I ಕಂಡಿವೆ ನನ್ನ ಕಣ್ಗಳೇ ಶತ್ರುಗೊದಗಿದ ಸೋಲನು II
7 : ಎಂತಲೆ ಸ್ವಂತ ಇಚ್ಛೆಯಿಂದ ಬಲಿಯನರ್ಪಿಸುವೆ ನಿನಗೆ I ಧನ್ಯವಾದ ಪ್ರಭು, ನಿನ್ನ ಸರ್ವೋತ್ತಮ ನಾಮಕೆ II