P. O. C ബൈബിള്
ಹಳೆಯ ಒಡಂಬಡಿಕೆ
ಕೀರ್ತನೆಗಳು
61ನೇ ಅಧ್ಯಾಯ
1 : ದೇವಾ ಆಲಿಸೆನ್ನ ಮೊರೆಯನು I ಕಿವಿಗೊಟ್ಟು ಕೇಳೆನ್ನ ಜಪವನು II
2 : ಎದೆಗುಂದಿ ಮೊರೆಯಿಡುತ್ತಿರುವೆ ಜಗದೆಲ್ಲೆಯಿಂದ I ಹತ್ತಲಾಗದ ಆಶ್ರಯಗಿರಿಗೆ ಹತ್ತಿಸೆನ್ನ II
3 : ದೇವಾ, ನೀನೆನಗೆ ಶರಣು ಮಹತ್ತರ I ಶತ್ರುಗೆಟುಕದ ಸುಭದ್ರ ಗೋಪುರ II
4 : ನಿನ್ನ ಗುಡಾರವಾಗಲಿ ನನಗೆ ನಿರಂತರ ಬಿಡಾರ I ನಿನ್ನ ರೆಕ್ಕೆಗಳ ಮರೆಯೆ ನನಗೆ ಆಶ್ರಯದಾಗರ II
5 : ನಾ ಹೊತ್ತ ಹರಕೆಗಳಿಗೆ ದೇವಾ ನೀ ಲಕ್ಷ್ಯವಿತ್ತೆ I ನಿನ್ನ ಭಕ್ತರಿಗೆ ಸಿಗುವ ಭಾದ್ಯತೆಯ ನನಗೂ ಇತ್ತೆ II
6 : ದೀರ್ಘಾಯುಸ್ಸನು ದಯಪಾಲಿಸು ರಾಜನಿಗೆ I ತಲತಲಾಂತರಕು ಉಳಿಯಲಿ ಆತನಾಳ್ವಿಕೆ II
7 : ದೇವರ ಸಾನ್ನಿಧ್ಯದಲಿ ಆತನು ಸದಾ ಸಾಮ್ರಾಜ್ಯವಾಳಲಿ I ನಿನ್ನಯ ಪ್ರೀತಿ ಸತ್ಯತೆಗಳು ಆತನಿಗೆ ಬೆಂಗಾವಲಾಗಿರಲಿ II
8 : ಸಲ್ಲಿಸುವೆನಾಗ ದಿನಬಿಡದೆ ನಿನಗೆ ಹರಕೆಗಳನು I ಸಂಕೀರ್ತಿಸುವೆನು ಸದಾ ನಿನ್ನ ಶ್ರೀನಾಮವನು II