ಐದು ದಿನಗಳ ನಂತರ ಪ್ರಧಾನಯಾಜಕ ಅನನೀಯನು, ಕೆಲವು ಪ್ರಮುಖರನ್ನೂ ತೆರ್ತುಲ್ಲ ಎಂಬ ವಕೀಲನನ್ನೂ ಕರೆದುಕೊಂಡು ಬಂದನು. ಅವರು ರಾಜ್ಯಪಾಲ ಫೆಲಿಕ್ಸನ ಸನ್ನಿಧಾನದಲ್ಲಿ ಪೌಲನ ವಿರುದ್ಧ ದೂರಿತ್ತರು.