ಅಷ್ಟು ಮಾತ್ರವಲ್ಲ, ಈ ನಗರದ ಎಲ್ಲ ಆಸ್ತಿಯನ್ನೂ ಆದಾಯವನ್ನೂ ಸಂಪತ್ತನ್ನೂ ಹಾಗು ಜುದೇಯದ ಅರಸರ ಸಕಲ ನಿಧಿನಿಕ್ಷೇಪಗಳನ್ನೂ ಇವರ ಶತ್ರುಗಳ ಕೈವಶಮಾಡುವೆನು. ಅವರು ಅವುಗಳನ್ನು ಕೊಳ್ಳೆಹೊಡೆದು ಬಾಬಿಲೋನಿಗೆ ತೆಗೆದುಕೊಂಡು ಹೋಗುವರು.