ನಾವು ಈ ನಾಡನ್ನು ಪ್ರವೇಶಿಸುವಾಗ ನೀನು ನಮ್ಮನ್ನು ಇಳಿಸಿದ ಕಿಟಕಿಗೆ ಈ ಕೆಂಪುದಾರವನ್ನು ಕಟ್ಟಬೇಕು ಮತ್ತು ನಿನ್ನ ತಂದೆತಾಯಿಗಳನ್ನು, ಅಣ್ಣತಮ್ಮಂದಿರನ್ನು, ಎಲ್ಲಾ ಬಂಧುಬಳಗದವರನ್ನು ನಿನ್ನ ಮನೆಯಲ್ಲೇ ಸೇರಿಸಿಕೊಂಡಿರಬೇಕು.