ನಾಡಿನ ಅಳತೆಯನ್ನು ಮಾಡತಕ್ಕ ಜನರು ಹೊರಡುವುದಕ್ಕೆ ಮುಂಚೆ ಯೆಹೋಶುವನು ಅವರಿಗೆ, “ಹೋಗಿ ನಾಡಿನಲ್ಲೆಲ್ಲಾ ಸಂಚರಿಸಿ ಅಳತೆಮಾಡಿ ನನ್ನ ಬಳಿ ಶೀಲೋವಿಗೆ ತನ್ನಿ. ನಾನು ಸರ್ವೇಶ್ವರನ ಮುಂದೆ ನಿಮಗೋಸ್ಕರ ಚೀಟು ಹಾಕುತ್ತೇನೆ,” ಎಂದು ಹೇಳಿ ಕಳುಹಿಸಿದನು.