ಕೂಡಲೆ ಆ ಹಸುಗಳು ಬೇತ್‍ಷೆಮೆಷಿನ ರಾಜಮಾರ್ಗವನ್ನು ಹಿಡಿದು, ಅಂಬಾ ಎನ್ನುತ್ತಾ ನೆಟ್ಟಗೆ ಮುಂದೆ ಸಾಗಿದವು. ಎಡಕ್ಕಾಗಲಿ, ಬಲಕ್ಕಾಗಲಿ ತಿರುಗಲಿಲ್ಲ. ಫಿಲಿಷ್ಟಿಯ ರಾಜರುಗಳು ಬೇತ್ ಷೆಮೆಷಿನ ಎಲ್ಲೆಯವರೆಗೂ ಅವುಗಳ ಹಿಂದೆಹೋದರು.