ಜೆರುಸಲೇಮಿನಲ್ಲಿ ನೆಲೆಸಿದ ಬೆನ್ಯಾಮೀನನ ಗೋತ್ರದವರು: ಸಲ್ಲೂ - ಇವನು ಮೆಷುಲ್ಲಾಮನ ಮಗ ಹೋದವ್ಯನ ಮೊಮ್ಮಗ ಹಾಗೂ ಹಸ್ಸೆನುವಾಹನ ಮರಿಮಗ. ಇಬ್ನಿಯಾಹ - ಇವನು ಯೆರೋಹಾಮನ ಮಗ. ಏಲಾ - ಇವನು ಶೆಫಟ್ಯನ ಮಗ ರೆಯೂವೇಲನ ಮೊಮ್ಮಗ, ಇಬ್ನಿಯಾಹನ ಮರಿಮಗ.