ಹೀಗಿರಲು, ಇಸ್ರಯೇಲಿನ ದೇವರೂ ಸೇನಾಧೀಶ್ವರನೂ ಸರ್ವೇಶ್ವರನೂ ಆದ ನಾನು ಹೇಳುವುದು ಇದು: ಅಸ್ಸೀರಿಯಾದ ಅರಸನನ್ನು ನಾನು ದಂಡಿಸಿದಂತೆ ಬಾಬಿಲೋನಿನ ಅರಸನನ್ನೂ ಅವನ ದೇಶವನ್ನೂ ದಂಡಿಸುವೆನು.